''ಪಾಕಿಸ್ತಾನ ರತ್ನ ಸಿಎಂ ಸಿದ್ದರಾಮಯ್ಯ ಪಾಕ್ ಟಿವಿಯಲ್ಲಿ ವರ್ಲ್ಡ್ ಫೇಮಸ್, ನಿಮಗೆ ರಾಜಾತಿಥ್ಯ ಗ್ಯಾರಂಟಿ''
ಬೆಂಗಳೂರು, ಏಪ್ರಿಲ್ 27: ಪಹಲ್ಗಾಮ್ ದಾಳಿ ಬಳಿಕ ಕೇಂದ್ರ ಸರ್ಕಾರ ಹಲವು ರಾಜತಾಂತ್ರಿಕ ನಿರ್ಧಾರ ಪ್ರಕಟಿಸಿದೆ. ಕರ್ನಾಟಕದಲ್ಲೂ ಪಾಕ್ತಿಸ್ತಾನಕ್ಕೆ ಸಂಬಂಧಿಸಿದ ಜನರನ್ನು ಅವರ ದೇಶಕ್ಕೆ ಕಳುಹಿಸುವಂತೆ ಸೂಚನೆ ನೀಡಿಲಾಗಿದೆ. ಇದನ್ನು ನಾವು ಪಾಲಿಸುತ್ತೇವೆ. ಪಾಕಿಸ್ತಾನ್ ಮೇಲೆ ಅನಗತ್ಯ ಯುದ್ಧ ಬೇಡ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಪಾಕ್ ಟಿವಿಗಳಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಸುದ್ದಿಪ್ರಸಾರವಾಗಿದೆ. ಇದಕ್ಕೆ ಬಿಜೆಪಿ ನಾಯಕರ ಗರಂ ಆಗಿದ್ದಾರೆ. ಸಿಎಂ ಹೇಳಿಕೆ ಖಂಡಿಸಿದ್ದಾರೆ.
ಪಾಕಿಸ್ತಾನ ರತ್ನ ಸಿಎಂ ಸಿದ್ದರಾಮಯ್ಯನವರೇ ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ಅವರಿಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ಅವರಿಗೆ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ. ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ನೀಡಿ ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಟ್ವೀಟ್ ಮೂಲಕ ಟೀಕಿಸಿದ್ದಾರೆ.

ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಅವರು ಕಿರಿ ಕಾರಿದ್ದಾರೆ.
ಇದೇ ವಿಚಾರವಾಗಿ ಪಾಕ್ ಟಿವಿ ಸುದ್ದಿ ನಿರೂಪಕಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಪ್ರಸಾರದ ವಿಡಿಯೋ ಶೇರ್ ಮಾಡಿಕೊಂಡಿರುವ ಕೇಂದ್ರ ಪ್ರಹ್ಲಾದ್ ಜೋಶಿಯವರು ವಾಗ್ದಾಳಿ ನಡೆಸಿದ್ದಾರೆ. ಇಡೀ ವಿಶ್ವವೇ ಭಾರತಕ್ಕೆ ಸಾಂತ್ವನ ಹೇಳುತ್ತಿದೆ. ಭಯೋತ್ಪಾದಕರಿಗೆ ಅವರಿಗೆ ಅರ್ಥವಾಗುವ ಜೊತೆಗೆ ಪಾಠ ಕಲಿಸಲು ಭಾರತಕ್ಕೆ ಎಂದು ದೇಶಗಳು ಹೇಳುತ್ತಿವೆ. ಈ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ ನಮ್ಮ ಭದ್ರತೆಯನ್ನು ಕಾಪಾಡಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಖಂಡನೀಯ.
ಇಡೀ ವಿಶ್ವವೇ ಭಾರತಕ್ಕೆ ಸಾಂತ್ವನ ಹೇಳುತ್ತಿದೆ. ಭಯೋತ್ಪಾದಕರಿಗೆ ಅವರಿಗೆ ಅರ್ಥವಾಗುವ ಹಾಗೆಯೇ ಪಾಠ ಕಲಿಸಲು ಭಾರತಕ್ಕೆ ಬಹುತೇಕ ದೇಶಗಳು ಹೇಳುತ್ತಿವೆ. ಈ ಮಧ್ಯೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ ನಮ್ಮ ಭದ್ರತೆಯನ್ನು ಬಲಪಡಿಸಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಖಂಡನೀಯ.
— Pralhad Joshi (@JoshiPralhad) April 26, 2025
ಪಹಲ್ಗಾಮ್… pic.twitter.com/8MmqgrGxzx
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಆದರೆ ಕಾಂಗ್ರೆಸ್ಸಿನ ನಾಯಕರಿಗೆ ವಾಸ್ತವ ಸ್ಥಿತಿ ಅರಿಯದೆ ದೇಶದ ಬಗ್ಗೆ ಸಡಿಲ ಮಾತನಾಡುವುದು ಅಭ್ಯಾಸವಾಗಿಬಿಟ್ಟಿದೆ ಎಂದು ಅವರು ಕಾಂಗ್ರೆಸ್‌ನವರ ಮನಸ್ಥಿತಿ ಬಗ್ಗೆ ಜರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು, ಪ್ರಸಾರವಾಗಿದ್ದೇನು?
ಪಹಲ್ಗಾನ್ ದಾಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ರಾಜ್ಯದಿಂದ ಪಾಕಿಸ್ತಾನ ಜನರನ್ನು ಹೊರ ಕಳುಹಿಸುವ ಸೂಚನೆ ಪಾಲಿಸುತ್ತೇವೆ. ರಾಜ್ಯದಲ್ಲಿ ಎಷ್ಟು ಪಾಕಿಸ್ತಾನ ಜನರಿದ್ದಾರೆ ಎಂಬ ಮಾಹಿತಿ ಇಲ್ಲ. ಬೆಂಗಳೂರಿನಲ್ಲಿ ಹೆಚ್ಚಿರುವ ಸಾಧ್ಯತೆ ಇದೆ. ಪಾಕಿಸ್ತಾನ ಮೇಲೆ ಅನಗತ್ಯ ಯುದ್ಧ ಬೇಡ. ದೇಶದ ಭದ್ರತೆ ಬಿಗಿ ಪಡಿಸಿಕೊಳ್ಳಿ. ಅಲ್ಲಿ ಭದ್ರತಾ ವೈಫಲ್ಯವಾಗಿದೆ. ಭದ್ರತೆ ಇದೆ ಎಂದು ಕೇಂದ್ರ ಜನರಿಗೆ ಟೋಪಿ ಹಾಕಿದೆ. ಹಾಗಾದ್ರೆ ಬಿಜೆಪಿಯವರು ಇಷ್ಟು ದಿನ ಮಾಡಿದ್ದು ಭಾಷಣವಾ ಎಂದು ಗಡಿ ಭದ್ರತೆ ವೈಫಲ್ಯ ಕುರಿತು ಸಿದ್ದರಾಮಯ್ಯ ತಿಳಿಸಿದ್ದಾರೆ. ಪಾಕ್ ಮೇಲೆ ಯುದ್ಧ ಬೇಡ ಎಂಬ ಸಿಎಂ ಹೇಳಿಕೆ ಪಾಕ್ ಟಿವಿ ಮಾಧ್ಯಮಗಳಗಳಲ್ಲಿ ವರದಿ ಆಗಿದೆ. ಅದರ ವಿಡಿಯೋ ತುಣಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.












Click it and Unblock the Notifications