ನವಕರ್ನಾಟಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವಕರ್ನಾಟಕ 2050 ನಿರ್ಮಾಣ ಮಂಥನದ ವಿಷನ್ ಡಾಕ್ಯುಮೆಂಟ್ ಅನ್ನು ಇಂದು ಬಿಡುಗಡೆ ಮಾಡಿದರು.
ನವಕರ್ನಾಟಕದ ರೂಪುರೇಷೆಗಳನ್ನು, ಯೋಜನೆಗಳನ್ನು ಒಳಗೊಂಡ ಹೊತ್ತಿಗೆ ಬಿಡುಗಡೆ ಮಾಡಿದ ಅವರು ಅದರ ಜೊತೆಗೆ ನವಕರ್ನಾಟಕದ ವಿಡಿಯೋ ಒಂದನ್ನು ಬಿಡುಗಡೆ ಮಾಡಿದರು.
ನವಕರ್ನಾಟಕ ನಿರಂತರ ಮಂಥನ ಕಾರ್ಯಕ್ರಮವಾಗಿದ್ದು, ಯಾರು ಬೇಕಾದರೂ ನವ ಕರ್ನಾಟಕಕ್ಕೆ ತಮ್ಮ ಯೋಜನೆಗಳನ್ನು, ಕನಸನ್ನು, ಆಲೋಚನೆಗಳನ್ನು ಸೇರಿಸಬಹುದಾಗಿ ಎಂದರು.
Since 2013, we have successfully scripted a unique Karnataka Model of Development based on Inclusion, Innovation & Enterprise.
— Siddaramaiah (@siddaramaiah) March 2, 2018
While we have come a long way, we know there is a lot more to do. Our journey now continues towards #NavaKarnataka2025 pic.twitter.com/qeqU8dvL4z
ಸರ್ವರನ್ನೂ ಒಳೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಲು ಸಮಬಾಳು ಗುರಿಯಾಗಿಟ್ಟುಕೊಂಡ ಸರ್ವೋದಯ ಮಾದರಿ ನಮ್ಮದು. ಇದನ್ನೇ ಕರ್ನಾಟಕ ಅಭಿವೃದ್ಧಿ ಮಾದರಿ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಅವರು ಹೇಳಿದರು.
ಬಡವರ ಚಿಂತೆ ದೂರ, ರಾಜ್ಯದಲ್ಲಿ ಆರೋಗ್ಯ ಸಂಪೂರ್ಣ ಉಚಿತ
ಮಿಷನ್ 2025 ಇದು 2013 ರಲ್ಲಿಯೇ ನಾವು ಪ್ರಾರಂಭಿಸಿದ ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯವ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದರು.

ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಮಾಡಿದ ವರದಿ
ರೇಣುಕ ಚಿದಂಬರಮ್ ಅವರ ನೇತೃತ್ವದ ತಂಡ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಹೋಗಿ ಜನರ ಜೊತೆ ರಾಜ್ಯದ ಅಭಿವೃದ್ದಿ ಬಗ್ಗೆ ಅವರ ಕಲ್ಪನೆ ಏನು? ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ಪಾಲುದಾರರು ಮತ್ತು ತಜ್ಞರ ಜೊತೆ ಸಮಾಲೋಚನೆ ನಡೆಸಿದೆ. ತಿಂಗಳುಗಳ ಕಠಿಣಶ್ರಮದ ನಂತರ ವಿಷನ್ 2025 ಎಂಬ ದಾಖಲೆಯನ್ನು ಸಿದ್ಧಪಡಿಸಿದೆ. ರಾಜ್ಯದ ಭವಿಷ್ಯದ ಕಲ್ಪನೆ ಏನಿರಬೇಕು? ಮತ್ತು ಅದನ್ನು ಹೇಗೆ ಸಾಧಿಸಬೇಕು? ಎನ್ನುವ ಒಂದು ನೋಟವನ್ನು ಈ ದಾಖಲೆ ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ದೃಷ್ಟಿಯಿಂದ ನಾವು ಇಂದು ಬಿಡುಗಡೆಗೊಳಿಸಿದ ವಿಷನ್ -2025 ಜನತೆಯ ದಾಖಲೆ, ಇದು ಒಂದು ಜೀವಂತಿಕೆಯ ದಾಖಲೆ. ಇದು ಮುಂದಿನ ದಿನಗಳಲ್ಲಿ ಸರ್ಕಾರ ನಡೆಯುವ ಹಾದಿಗೆ ದಿಕ್ಸೂಚಿಯೂ ಹೌದು.

ಇದು ನಮ್ಮ ಬದ್ಧತೆ
ಒಟ್ಟು 165 ಭರವಸೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದೆವು, ಐದು ವರ್ಷದಲ್ಲಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ, ಕಾಯಕಯೋಗಿ ಬಸವಣ್ಣನವರ ಜಯಂತಿಯಂದು ಅಧಿಕಾರಕ್ಕೆ ಬಂದ ನಾವು ಅವರ ಆದರ್ಶಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದ್ದೇವೆ ಎಂದರು.

ಜಾರಿಮಾಡಿದ್ದು ಈ ಕಾರಣಕ್ಕೆ
ಅನ್ನಭಾಗ್ಯ ಜಾರಿಯ ಹಿಂದಿರುವ ತಮ್ಮ ಬಾಲ್ಯದ ಕತೆ ನೆನಪಿಸಿಕೊಂಡ ಸಿಎಂ, ನಮ್ಮ ಊರಲ್ಲಿ ಅನ್ನ ಮಾಡಿ ಉಣ್ಣಲಾರದಷ್ಟು ಬಡವರಿದ್ದರು, ನಮ್ಮ ಕುಟುಂಬವೂ ಅಷ್ಟೆ, ಮಕ್ಕಳಿಗೊ, ಹಿರಿಯರಿಗೊ ಖಾಯಿಲೆ ಬಂದರೆ ಮುದ್ದೆ ನುಂಗಲಾರರೆಂದು ಅನ್ನ ಮಾಡುವ ಶ್ರೀಮಂತ ಕುಟುಂಬದ ಮನೆ ಬಾಗಿಲಿಗೆ ಹೋಗಿ ಅನ್ನ ಬೇಡಿ ತರುತ್ತದ್ದರು. ಇದು ನನ್ನ ಮನದಲ್ಲಿ ಹಾಗೇ ಕೂತಿತ್ತು ಹಾಗಾಗಿ ಅನ್ನಭಾಗ್ಯ ಯೋಜನೆ ನೀಡಿದೆ. ರಾಜ್ಯದ ಯಾವೊಬ್ಬರೂ ಹಸಿವಿನಿಂದ ಮಲಗಬಾರದು ಎಂಬುದೇ ನನ್ನ ಆಶಯ ಎಂದು ಹೇಳಿದರು.

ಹಲವು ಪ್ರಥಮಗಳನ್ನು ಸಾಧಿಸಿದ್ದೇವೆ
ಅಭಿವೃದ್ಧಿ ಎನ್ನುವುದು ನಮ್ಮ ಹೃದಯದ ಮಾತು ಕೇವಲ ಬುದ್ದಿಯದ್ದಲ್ಲ. ಕಳೆದ ಐದು ವರ್ಷಗಳಲ್ಲಿ ನಾವು ಹಲವು ಪ್ರಥಮಗಳನ್ನು ಸಾಧಿಸಿದ್ದೇವೆ. ಸಾರ್ವತ್ರಿಕ ಆರೋಗ್ಯ ಸೌಲಭ್ಯವನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ನಮ್ಮದು. ಆರೋಗ್ಯ ಕರ್ನಾಟಕ ಎಂಬ ಹೆಸರಿನ ಈ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಕುಟುಂಬಗಳು ಉಚಿತ ಇಲ್ಲವೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ರಾಜ್ಯದ 1.2 ಕೋಟಿ ಕುಟುಂಬಗಳು ಸರ್ಕಾರಿ ಇಲ್ಲವೆ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯನ್ನು ಉಚಿತವಾಗಿ ಪಡೆಯಲಿದ್ದಾರೆ. ಉಳಿದ 30 ಲಕ್ಷ ಕುಟುಂಬಗಳಿಗೆ ಅದೇ ಆರೋಗ್ಯ ಸೇವೆ ರಿಯಾಯಿತಿ ದರದಲ್ಲಿ ಲಭಿಸಲಿದೆ ಎಂದು ಸಾಧನೆಗಳ ಪಟ್ಟಿ ನೀಡಿದರು ಸಿಎಂ.

ಆನಲೈನ್ ಮಾರುಕಟ್ಟೆ ಸ್ಥಾಪಿಸಿದ ಮೊದಲ ರಾಜ್ಯ ನಮ್ಮದು
ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲನೆಯ ಸ್ಥಾನದಲ್ಲಿದೆ. ಕೇಂದ್ರದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಸಂಸ್ಥೆ ಬಿಡುಗಡೆಗೊಳಿಸಿರುವ ದಾಖಲೆಯ ಪ್ರಕಾರ 2017 ರ ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ 1.54 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರೆಯಬೇಕೆಂಬ ಸದಾಶಯದಿಂದ ಆನ್ ಲೈನ್ ಮಾರುಕಟ್ಟೆ ಸ್ಥಾಪನೆ ಮಾಡಿದ ದೇಶದ ಮೊದಲ ರಾಜ್ಯ ನಮ್ಮದು. ಪ್ರಸ್ತುತ ರಾಜ್ಯದ 157 ಕೃಷಿ ಮಾರುಕಟ್ಟೆಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದಾಗಿ ರೈತರ ಆದಾಯ ಶೇಕಡಾ 38 ರಷ್ಟು ಹೆಚ್ಚಿದೆ ಎಂದು ನೀತಿ ಆಯೋಗವೇ ಶಹಬ್ಬಾಸ್ ಗಿರಿ ಕೊಟ್ಟಿದೆ ಎಂದರು.

ವಿಶ್ವದಲ್ಲೇ ದೊಡ್ಡ ಸೌರ ವಿದ್ಯುತ್ ಘಟಕ ರಾಜ್ಯದ್ದು
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್, ಎನಿಮೇಷನ್ ಮತ್ತು ವಿಷ್ವಲ್ ಎಪೆಕ್ಟ್ ಹಾಗೂ ಸೆಮಿ ಕಂಡಕ್ಟರ್ ನೀತಿಗಳನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ ಎಂದ ಮುಖ್ಯಮಂತ್ರಿಗಳು, ಮೂರು ದಿನಗಳ ಹಿಂದೆಯಷ್ಟೇ ಪಾವಗಡದಲ್ಲಿ ವಿಶ್ವದ ಅತಿದೊಡ್ಡ ಸೌರ ಉದ್ಯಾನವನ್ನು ( ಸೋಲಾರ್ ಪಾರ್ಕ ) ಉದ್ಘಾಟಿಸಿದ್ದೇವೆ. ಇದು 2000 ಮೆಗಾವಾಟ್ ಸಾಮರ್ಥ್ಯದ ಈ ಸೋಲಾರ್ ಪಾರ್ಕ್. 600 ಮೆಗಾವಾಟ್ ಸೌರ ವಿದ್ಯುತನ್ನು ಈಗಾಗಲೇ ಉತ್ಪಾದಿಸುತ್ತಿದೆ. ವಿದ್ಯುತ್ ಚಾಲಿತ ವಾಹನ ಮತ್ತು ವಿದ್ಯುತ್ ಸಂಗ್ರಹಾಗಾರ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣ ಮತ್ತು ಬಳಕೆಗೆ ಪ್ರೋತ್ಸಾಹ ನೀಡುವುದರ ಮೂಲಕ ರಾಜ್ಯವನ್ನು ವಿದ್ಯುತ್ ಚಾಲಿತ ವಾಹನ ಉತ್ಪಾದನೆಯ ಕೇಂದ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ನಮ್ಮ ಎಂದರು.

ರೈತರ ಖಾತೆಗೆ ಬೆಂಬಲ ಬೆಲೆ
ನೀರಾವರಿ ಸೌಲಭ್ಯ ಇಲ್ಲದ ಒಣಭೂಮಿ ರೈತರ ಕಷ್ಟಗಳನ್ನು ಗಮನದಲ್ಲಿರಿಸಿಕೊಂಡ ರಾಜ್ಯದ 70 ಲಕ್ಷ ರೈತರಿಗಾಗಿ ರೈತ ಬೆಳಕು ಎಂಬ ಆದಾಯ ನೆರವು ಯೋಜನೆಯನ್ನು ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೆ ತರಲಿದ್ದೇವೆ. 3500 ಕೋಟಿ ರೂ ವೆಚ್ಚದ ಈ ಯೋಜನೆಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಬೆಂಬಲದ ಮೊತ್ತವನ್ನು ವರ್ಗಾವಣೆ ಮಾಡಲಾಗುವುದು. ಕಳೆದ ವಾರ ವಿಜಯಪುರದಲ್ಲಿ ಸುಮಾರು ೬೦ ಸಾವಿರ ರೈತರಿಗೆ ನೆರವಾಗುವ ಏಷ್ಯಾದ ಅತೀದೊಡ್ಡ ತುಂತರು ಹನಿ ನೀರಾವರಿ ಯೋಜನೆಯನ್ನು ನಾನು ಉದ್ಘಾಟಿಸಿದ್ದೇನೆ.

ತ್ಯಾಜ್ಯ ಸಂಸ್ಕರಣೆ ಗುರಿ
ವಿಶ್ವದಲ್ಲೇ ಬೆಂಗಳೂರು ಕ್ರೀಯಾಶೀಲ ನಗರಿಯಾಗಿದೆ. ವಿಶ್ವಕ್ಕೆ ಅದು ತಂತ್ರಜ್ಞಾನ ರಫ್ತು ಮಾಡುತ್ತಿದೆ. 2025ರಷ್ಟ್ರಲ್ಲಿ ಮೆಟ್ರೊವನ್ನು 260 ಕಿ.ಮೀಗೆ ಹೆಚ್ಚಿಸುತ್ತೇವೆ. 17000 ಕೋಟಿ ರೂ. ವೆಚ್ಚದ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು ಪೂರ್ಣಗೊಳಿಸಲು ಯೋಜಿಸಿದ್ದೇವೆ. 2020 ರ ವೇಳೆಗೆ ನಗರದಲ್ಲಿ ಉತ್ಪಾದನೆಯಾಗುವ 100 ಎಂ.ಎಲ್.ಡಿ ತ್ಯಾಜ್ಯ ನೀರು ಸಂಸ್ಕರಿಸಲು ಉದ್ದೇಶಿಸಿದ್ದೇವೆ. ಇದು ನಮ್ಮೆಲ್ಲಾ ಕೆರೆಗಳನ್ನು ಮರುಪೂರಣಗೊಳಿಸಲಿದೆ.
ಸೋಲಾರ್ ಪಾರ್ಕ್ ಉದ್ಘಾಟನೆಯಲ್ಲಿ ಸಿದ್ದರಾಮಯ್ಯ ಪಂಚ್ ಡೈಲಾಗ್
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !