ವರ್ತೂರು ಕೆರೆಯಲ್ಲಿ ನೊರೆ: ಲಘುವಾಗಿ ಪ್ರತಿಕ್ರಿಯಿಸಿದ ಸಿಎಂ
ನಾವು ಬಗೆಹರಿಸ್ತೀವಿ, ಈ ಸಮಸ್ಯೆ ಪ್ರತಿವರ್ಷ ಇರುತ್ತೆ, ಬಿಡಿ...! ವರ್ತೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ ರೀತಿ ಇದು!
ಬೆಂಗಳೂರು, ಮೇ 30: ನಾವು ಬಗೆಹರಿಸ್ತೀವಿ, ಈ ಸಮಸ್ಯೆ ಪ್ರತಿವರ್ಷ ಇರುತ್ತೆ, ಬಿಡಿ...! ವರ್ತೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ ರೀತಿ ಇದು!
ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ವಾರ ಸುರಿದ ಭಾರೀ ಮಳೆಗೆ ಇಲ್ಲಿನ ವರ್ತೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡು, ಅಲ್ಲಿನ ಜನರು ಸರ್ಕಾರಕ್ಕೆ ಶಾಪ ಹಾಕಿದ ಬಗ್ಗೆ 'ಒನ್ ಇಂಡಿಯಾ'ದಲ್ಲಿ ಓದಿರುತ್ತೀರಿ.[ಬೆಂಗಳೂರಿನ ಮಾನ ತೆಗೆಯುತ್ತಿದೆ ವರ್ತೂರು ಕೆರೆಯ ಈ ವಿಡಿಯೋ]

ಆದರೆ ಇಂದು (ಮೇ 30) ಬೆಳಗ್ಗೆ ವರ್ತೂರು ಕೆರೆಯಲ್ಲಿ ಬೆಂಕಿ ಕೂಡ ಕಾಣಿಸಿಕೊಂಡು ಮತ್ತಷ್ಟು ಆತಂಕವನ್ನುಂಟುಮಾಡಿದೆ. ಫೆಬ್ರವರಿಯಲ್ಲೂ ಕೆರೆಯಲ್ಲಿ ಇದೇ ರೀತಿ ಬೆಂಕಿ ಕಾಣಿಸಿಕೊಂಡಿತ್ತು.
ವರ್ತೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡ ಬಗ್ಗೆ ನಿನ್ನೆ ತಾನೇ ಪತ್ರಕರ್ತರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದಾರೆ, ನಾವು ಈ ಸಮಸ್ಯೆಯನ್ನು ಬಗೆಹರಿಸ್ತೀನಿ, ಈ ಸಮಸ್ಯೆ ಪ್ರತಿವರ್ಷ ಇರುತ್ತೆ ಬಿಡಿ ಎಂದು ಲಘುವಾಗಿ ಹೇಳಿದ್ದರು.












Click it and Unblock the Notifications