ಬಕ್ರೀದ್ ಹಬ್ಬವು ನಮ್ಮೆಲ್ಲರನ್ನೂ ಒಗ್ಗೂಡಿಸಲಿ: ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 02 : ತ್ಯಾಗದ ಹಬ್ಬ ಎಂದೇ ಎಲ್ಲೆಡೆ ಜನಪ್ರಿಯವಾಗಿರುವ ಬಕ್ರೀದ್ ಹಬ್ಬದ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಹಾಗೂ ವಿಶೇಷವಾಗಿ ರಾಜ್ಯದ ಎಲ್ಲಾ ಮುಸಲ್ಮಾನ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.
ಬಕ್ರೀದ್ ಹಬ್ಬವು ನಮ್ಮೆಲ್ಲರನ್ನೂ ಒಗ್ಗೂಡಿಸಲಿ. ಕೋಮು ಸೌಹಾರ್ಧತೆ ಮೂಡಿಸಲು ಪ್ರೇರಣೆ ಹಾಗೂ ಸ್ಫೂತಿಯನ್ನು ನೀಡುವ ಮೂಲಕ ಸಮೃದ್ಧ ಕರ್ನಾಟಕವನ್ನು ರೂಪಿಸಲು ಹಾಗೂ ಬಲಿಷ್ಠ ಭಾರತವನ್ನು ನಿರ್ಮಿಸಲು ಬಕ್ರೀದ್ ನ ಸಡಗರ ಮತ್ತು ಸಂಭ್ರಮ ನಮ್ಮೆಲ್ಲರಿಗೂ ಶಕ್ತಿಯನ್ನೀಯಲಿ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ನಿಷ್ಮಲ್ಮಶ ಭಕ್ತಿಗೆ ಅಲ್ಲಾಹ್ ನ ಅನುಗ್ರಹ ಇದ್ದೇ ಇರುತ್ತದೆ ಎಂಬುದನ್ನು ಬಲವಾಗಿ ಪ್ರತಿಪಾದಿಸುವುದರ ಸಂಕೇತವಾಗಿರುವ ಬಕ್ರೀದ್ ಹಬ್ಬವು ತ್ಯಾಗದ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತದೆ. ಬಹುಶಃ ಈ ಹಿನ್ನೆಲೆಯಲ್ಲಿಯೇ, ಬಕ್ರೀದ್ ಹಬ್ಬದ ಸುಸಂದರ್ಭವನ್ನು ಪವಿತ್ರ ಹಜ್ ಯಾತ್ರೆಗೆ ಅತ್ಯುತ್ತಮ ಕಾಲ ಎಂದು ಬಣ್ಣಿಸುತ್ತಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಡಿನ ಜನತೆಗೆ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಶುಭಾಶಯಗಳು. pic.twitter.com/ci1ydVeQa5
— CM of Karnataka (@CMofKarnataka) September 2, 2017
ಬಂಧು-ಮಿತ್ರರು, ನೆರೆ-ಹೊರೆಯವರು ಹಾಗೂ ಬಡವರು-ಕಡುಬಡವರೊಂದಿಗೆ ಹಬ್ಬದೂಟವನ್ನು ಸವಿದು ಸಂಭ್ರಮಿಸಲು ವಿಶೇಷ ವೇದಿಕೆಯಾಗಲಿರುವ ಬಕ್ರೀದ್ ಹಬ್ಬವು ಬಡವ-ಬಲ್ಲಿದ ಎಂಬ ಬೇಧ-ಭಾವವಿಲ್ಲದೆ ಎಲ್ಲರೊಂದಿಗೆ ಸುಮಧುರ ಬಾಂಧವ್ಯವನ್ನು ಬೆಸೆಯಲು ಮಾನವೀಯ ಸ್ಪರ್ಶ ಕಲ್ಪಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂದೇಶ ಹೇಳಿದ್ದಾರೆ.












Click it and Unblock the Notifications