• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಪ್ರ ಸುಂದರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

By Ananthanag
|

ಬೆಂಗಳೂರು, ಡಿಸೆಂಬರ್ 16: ಸಿಎಂ ಸಿದ್ದರಾಮಯ್ಯ ಅವರು ಎಚ್ ಎಎಲ್ ವಿಮಾನ ನಿಲ್ದಾನದಲ್ಲಿ ಖಾಸಗಿ ಏರ್ ಆಂಬ್ಯುಲೆನ್ಸ್ ಅನ್ನು ಉದ್ಘಾಟಿಸಿದರು. ನಂತರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೆಂಡ್ ದೇಶದಲ್ಲಿ ನಡೆದ ಸುಪ್ರ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ವಿಜಯ ಗಳಿಸಿದ ಮಂಗಳೂರಿನ ಶ್ರೀನಿಧಿ ಶೆಟ್ಟಿಯನ್ನು ಅಭಿನಂದಿಸಿದರು.

ಬಳಿಕ ಗೃಹ ಕಚೇರಿಯ ಬಳಿ ನೆರದಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಜನರ ಸಮಸ್ಯೆಗಳನ್ನು ಪರಿಶೀಲಿಸಿದರು. ವಿಜಯದಿವಸ್ ಅಂಗವಾಗಿ ರಾಷ್ಟ್ರೀಯ ಸೈನಿಕ ಸ್ಮಾರಕದ ಬಳಿ ತೆರಳಿ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಹೀಗೆ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಶುಕ್ರವಾರದ ಚಿತ್ರ ನೋಟ ಇಲ್ಲಿದೆ.[ಮೇಟಿ ಸ್ಥಾನಕ್ಕೆ ಯಾರ ನೇಮಕವೂ ಇಲ್ಲ, ಸಂಪುಟ ವಿಸ್ತರಣೆಯಿಲ್ಲ: ಸಿಎಂ]

ಏರ್ ಆಂಬ್ಯುಲೆನ್ಸ್ ಸೇವೆಗೆ ಸಿದ್ಧ

ಏರ್ ಆಂಬ್ಯುಲೆನ್ಸ್ ಸೇವೆಗೆ ಸಿದ್ಧ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್ ಆಂಬ್ಯುಲೆನ್ಸ್ ಸೇವೆ ಉದ್ಘಾಟಿಸಿದರು. ಏವಿಯೇಟರ್ಸ್ ಏರ್ ರೆಸ್ಕ್ಯೂ ಸಂಸ್ಥೆ ಈ ಸೇವೆ ಒದಗಿಸಲಿದೆ.

ಸುಪ್ರ ವಿಶ್ವ ಸುಂದರಿಗೆ ಸಿಎಂ ಅಭಿನಂದನೆ

ಸುಪ್ರ ವಿಶ್ವ ಸುಂದರಿಗೆ ಸಿಎಂ ಅಭಿನಂದನೆ

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮನ್ನು ಭೇಟಿ ಮಾಡಿದ "ಮಿಸ್ ಸುಪ್ರ ಇಂಟರ್ ನ್ಯಾಷನಲ್ -2016" ಪ್ರಶಸ್ತಿಗೆ ಭಾಜನರಾಗಿರುವ ಮಂಗಳೂರಿನ ಶ್ರೀನಿಧಿ ಶೆಟ್ಟಿ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಪೊಲೆಂಡ್ ದೇಶದಲ್ಲಿ 72 ಸ್ಪರ್ಧಿಗಳನ್ನು ಹಿಂದಿಕ್ಕಿ ಶ್ರೀನಿಧಿ ಶೆಟ್ಟಿಯವರು ಈ ಪ್ರಶಸ್ತಿಯನ್ನು ಪಡೆದಿದ್ದು ಸಿಎಂ ಸಂತಸ ವ್ಯಕ್ತಪಡಿಸಿದರು.

ವೃದ್ಧೆಯ ಅಹವಾಲು ಸ್ವೀಕರಿಸಿದ ಸಿಎಂ

ವೃದ್ಧೆಯ ಅಹವಾಲು ಸ್ವೀಕರಿಸಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ವೃದ್ಧೆಯೊಬ್ಬರು ತಮ್ಮ ಸಮಸ್ಯೆ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಮುಕ್ತವಾಗಿ ಮಾತನಾಡಿದ ಕ್ಷಣ.

ವಿಜಯ ದಿವಸ್; ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ವಿಜಯ ದಿವಸ್; ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯ ದಿವಸ್ ಅಂಗವಾಗಿ ರಾಷ್ಟ್ರೀಯ ಸೈನಿಕ ಸ್ಮಾರಕದ ಬಳಿ ಹುತಾತ್ಮ ಯೋಧರಿಗೆ ಪುಷ್ಪಗುಚ್ಚ ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೆ ನೆರೆದಿದ್ದ ಜನರೊಂದಿಗೆ ಸೈನಿಕರ ಸ್ಮರಣೆ ಮತ್ತು ಸಾಧನೆಯ ಬಗ್ಗೆ ಮಾತನಾಡಿ, ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವುದರಿಂದಲೇ ನಾವೆಲ್ಲ ನೆಮ್ಮದಿಯಿಂದ ಇದ್ದೇವೆ ಎಂದರು.

English summary
CM Siddaramaiah different program. Private ambulance inauguration, supra pretty girl Srinidi shetti compliment by CM. Acceptance of the petition,Vijay Day tribute in bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X