ಅಮಿತ್ ಶಾ ಮಹದಾಯಿ ಬಗ್ಗೆ ಏಕೆ ಮಾತನಾಡಲಿಲ್ಲ? : ಸಿಎಂ
ಬೆಂಗಳೂರು, ಜವನರಿ 25: ಮೈಸೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಅವರು ಮಾಡಿದ ಟೀಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಅವರ ಭಾಷಣವನ್ನು ಟೀಕಿಸಿದ ಅವರು 'ಅಮಿತ್ ಶಾ ಅವರು ಮಹದಾಯಿ ಬಗ್ಗೆ ಏಕೆ ಮಾತನಾಡಲ್ಲಿ?' ಎಂದು ಪ್ರಶ್ನೆ ಮಾಡಿದರು.
ಅಮಿತ್ ಶಾ ಮಹದಾಯಿ ಬಗ್ಗೆ ಮಾತನಾಡಲಿಲ್ಲ, ಹೋಗಲಿ ಪ್ರಧಾನಿ ಅವರು ರಾಜ್ಯಕ್ಕೆ ಬಂದಾಗಲಾದರೂ ಮಹದಾಯಿ ಬಗ್ಗೆ ಮಾತನಾಡುವಂತೆ ರಾಜ್ಯದ ಬಿಜೆಪಿ ಹೇಳಲಿ ಎಂದು ಸಿದ್ದರಾಮಯ್ಯ ಹೇಳಿದರು.

'ರಾಜ್ಯದ ಅಪ್ರತಿಮ ಭ್ರಷ್ಟಾಚಾರಿಗಳನ್ನೆಲ್ಲಾ ವೇದಿಕೆ ಮೇಲೆ ಕೂರಿಸಿಕೊಂಡು ನನ್ನನ್ನು ಭ್ರಷ್ಟ ಎಂದು ಕರೆಯುವ ಅಮಿತ್ ಶಾ ಅವರಿಗೆ ನೈತಿಕತೆಯೇ ಇಲ್ಲ' ಎಂದು ಅವರು ಆರೋಪಿಸಿದರು.
ಈಶ್ವರಪ್ಪ ಅವರ 'ಮೋದಿ ಹುಲಿ, ಸಿದ್ದರಾಮಯ್ಯ ಇಲಿ' ಹೇಳಿಕೆಗೆ ಕೋಪಗೊಂಡ ಸಿದ್ದರಾಮಯ್ಯ ಅವರು, 'ಮೋದಿ ಹುಲಿ ಆದರೆ ಇಲ್ಲಿರುವವರೆಲ್ಲಾ ಯಾರು?, ಸರಿ ಮೋದಿ ಹುಲಿ ಆದರೆ ರಾಜ್ಯ ಬಿಜೆಪಿಯವರು ನರಿಗಳಾ?' ಎಂದು ಪ್ರಶ್ನಿಸಿದರು.











Click it and Unblock the Notifications