ಸಿಎಂ ದಿಢೀರ್ ಸುದ್ದಿಗೋಷ್ಠಿ, ಬಿಜೆಪಿಗೆ ಭಾರೀ ಶಾಕ್ ನೀಡಲು ಸಿದ್ಧತೆ?
ಬೆಂಗಳೂರು, ಫೆಬ್ರವರಿ 08: ಬಜೆಟ್ ಮಂಡನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದತ್ತು ಸರ್ಕಾರ ಉಳಿಯುತ್ತಾ, ಉರುಳುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
Karnataka Budget 2019 LIVE : ಇಂದು ಬಜೆಟ್ ಮಂಡನೆಯಾಗುತ್ತಾ?
ಈ ಬೆಳವಣಿಗೆಯ ನಡುವೆಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ 09 ಗಂಟೆಗೆ ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ತುರ್ತು ಸುದ್ದಿಗೋಷ್ಠಿಯೊಂದನ್ನು ಕರೆದು ಅಚ್ಚರಿ ಮೂಡಿಸಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನ ಅತೃಪ್ತ ಶಾಸಕರಾದ ಬಿ ನಾಗೇಂದ್ರ, ಮಹೇಶ್ ಕುಮಟಳ್ಳಿ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಜೊತೆಯಲ್ಲಿಯೇ ಇರಿಸಿಕೊಂಡು ಸುದ್ದಿಗೋಷ್ಠಿ ನಡೆಸುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದು, ಇದು ಸತ್ಯವೇ ಆದಲ್ಲಿ ಬಿಜೆಪಿಗೇ ಭಾರೀ ಆಘಾತವಾಗಲಿದೆ.

ಅಕಸ್ಮಾತ್ ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ಅತೃಪ್ತ ಶಾಸಕರೂ ಜೊತೆಯಾಗಿದ್ದೇ ಆದರೆ ಬಿಜೆಪಿಯ ಎಲ್ಲಾ ಯೋಜನೆಗಳೂ ತಲೆಕೆಳಗಾಗುವುದು ಖಂಡಿತ.











Click it and Unblock the Notifications