ನಿಮ್ಮ ಬಡಾವಣೆಯಲ್ಲಿ ರಸ್ತೆ ಗುಂಡಿ ಬಾಯ್ತೆರೆದು ನಿಂತಿದ್ದರೆ ಫೋಟೋ ಕಳಿಸಿ
ಬೆಂಗಳೂರು, ಅಕ್ಟೋಬರ್ 04 : ಬೆಂಗಳೂರು ನಗರದಲ್ಲಿ ನಿರಂತರವಾಗಿ ಸುರಿದ ಮಳೆ ಸಂತಸ ತಂದಿದೆ. ಆದರೆ, ಮಳೆಯಿಂದಾಗಿ ರಸ್ತೆಗಳ ಗುಂಡಿಗಳು ಬಾಯ್ತೆರೆದು ವಾಹನ ಸವಾರರಿಗೆ ಸಂಕಷ್ಟ ತಂದಿವೆ.
ಬೆಂಗಳೂರು ನಗರದ ರಸ್ತೆಗಳಲ್ಲಿ ಸುಮಾರು 15 ಸಾವಿರ ಗುಂಡಿಗಳಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಹದಿನೈದು ದಿನಗಳಲ್ಲಿ ರಸ್ತೆಗಳ ಗುಂಡಿ ಮುಚ್ಚಬೇಕು ಎಂದು ಮೇಯರ್ ಸಂಪತ್ ರಾಜ್ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ರಸ್ತೆ ಗುಂಡಿಗಳಿಂದಾಗಿ ಪ್ರತಿದಿನ ಅಪಘಾತಗಳು ಆಗುತ್ತಿವೆ. ವಾಹನ ಸವಾರರು ರಸ್ತೆಯಲ್ಲಿ ಬಿದ್ದು ಗಾಯಮಾಡಿಕೊಳ್ಳುತ್ತಿದ್ದಾರೆ, ಸಾವು ಸಂಭವಿಸಿದೆ. ನಿಮ್ಮ ಬಡಾವಣೆಗಳಲ್ಲಿ ಗುಂಡಿಗಳು ಬಾಯ್ತೆರೆದು ನಿಂತಿದ್ದರೆ ನಮಗೆ ಅದರ ಫೋಟೋ, ವಿಡಿಯೋ ಕಳಿಸಿ. ನಿಮ್ಮ ಬಡಾವಣೆ ಹೆಸರು, ವಾರ್ಡ್ ಹೆಸರು ಜೊತೆಗೆ ಇರಲಿ.
ಬಿಬಿಎಂಪಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುಂಡಿಗಳನ್ನು ಭರ್ತಿ ಮಾಡಲು ಯಂತ್ರಗಳನ್ನು ತರಿಸಿದೆ. ಗಡುವು ಮುಗಿಯುದರೊಳಗೆ ಗುಂಡಿ ಮುಚ್ಚುತ್ತೇವೆ ಎಂದು ಅಧಿಕಾರಿಗಳು ಪಠ ತೊಟ್ಟಿದ್ದಾರೆ. ಆದರೂ, ಗುಂಡಿಗಳು ಗುಂಡಿಗಳು ಬಾಯ್ತೆರೆದು ನಿಂತಿದ್ದರೆ ಅವುಗಳನ್ನು ಬಿಬಿಎಂಪಿಗೆ ತಲುಪಿಸುವ ಪ್ರಯತ್ನ ಮಾಡೋಣ...ನಮ್ಮೊಂದಿಗೆ ನೀವು ಕೈ ಜೋಡಿಸಿ....
ವಾಟ್ಸಪ್ ನಂಬರ್ 8050447681, E mail - [email protected]












Click it and Unblock the Notifications