ಕರ್ಕಶ ಹಾರ್ನ್ ಪ್ರಶ್ನಿಸಿದ್ದಕ್ಕೆ ಮೂವರು ಯುವಕರಿಗೆ ಚಾಕು ಇರಿತ
ಬೆಂಗಳೂರು, ಅಕ್ಟೋಬರ್ 13: ಯಾರಿಗೆ ಏನೂ ಪ್ರಶ್ನೆ ಮಾಡಕೂಡದು, ಎಲ್ಲರೂ ಅವರಿಗೆ ಇಷ್ಟಬಂದಂತೆ ನಡೆದುಕೊಳ್ಳಲು ಬಿಡಬೇಕು ನಮ್ಮ ಪ್ರಾಣ ಉಳಿಸಿಕೊಳ್ಳಲು ಇರುವುದು ಇದೊಂದೇ ದಾರಿ.
ಕರ್ಕಶ ಹಾರನ್ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ಮೂವರು ಯುವಕರಿಗೆ ದುಷ್ಕರ್ಮಿಗಳು ಚಾಕು ಇರಿದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಜೋರಾಗಿ ಹಾರನ್ ಮಾಡಿದ್ದರಿಂದ ವಾಹನ ಚಾಲನೆ ಮಾಡಲು ತೊಂದರೆಯಾಗುತ್ತಿದೆ ಯಾಕೆ ಇಷ್ಟೊಂದು ದೊಡ್ಡದಾಗಿ ಹಾರನ್ ಮಾಡುತ್ತರಾ ಎಂದು ವಾಹನ ನಿಲ್ಲಿಸಿ ಪ್ರಶ್ನಿಸಿದ್ದಕ್ಕೆ ಮೂವರು ಯುವಕರಿಗೆ ಚಾಕು ಇರಿದಿದ್ದಾರೆ.
ಗಂಗಾನಗರದ ಎಚ್ಪಿ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದ್ದು, ಝೆನ್ ಕಾರಿನಲ್ಲಿದ್ದ ಐವರು ಈ ಕೃತ್ಯ ಎಸಗಿದ್ದಾರೆ. ಸುನಿಲ್, ಪ್ರಜ್ವಲ್ ಹಾಗೂ ದರ್ಶನ್ ತಮ್ಮ ಬೈಕ್ಗೆ ಪೆಟ್ರೋಲ್ ಹಾಕುತ್ತಿದ್ದಾಗ ದುಷ್ಕರ್ಮಿಗಳು ಎರ್ರಾ ಬಿರ್ರಿ ಕಾರ್ ಚಾಲನೆ ಮಾಡಿಕೊಂಡು ಬಂದು ಜೋರಾಗಿ ಹಾರ್ನ್ ಮಾಡಿದ್ದಾರೆ. ಈ ವೇಳೆ ಯುವಕರು ಅವರನ್ನು ಪ್ರಶ್ನಿಸಿದ್ದಾರೆ. ಆಗ ಕಾರಿನಿಂದ ಇಳಿದ ಕೆಂಪರಾಜು, ಶರತ್ ಹಾಗೂ ಉಳಿದ ಮೂವರು ಸೇರಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಮೂವರು ಯುವಕರು ಗಾಯಗೊಂಡಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications