ಅಕ್ಟೋಬರ್ 5 ರಂದು ಸಿಎಂರಿಂದ ವಾಲ್ಮೀಕಿ ಪ್ರತಿಮೆ ಅನಾವರಣ
ಬೆಂಗಳೂರು, ಸೆಪ್ಟೆಂಬರ್ 28: ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿರುವಂತೆ ಅಕ್ಟೋಬರ್ 5 ರಂದು ವಾಲ್ಮೀಕಿ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.
ಈ ಕುರಿತು ವಿವರ ನೀಡಿರುವ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಅಕ್ಟೋಬರ್ 5ರಂದು ವಿಧಾನ ಸೌಧದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ವಿಧಾನ ಸೌಧದ ಪಶ್ಚಿಮ ದ್ವಾರದ ಬಲಭಾಗದಲ್ಲಿರುವ ರಾಕ್ ಗಾರ್ಡನ್ ನಲ್ಲಿ ಆದಿ ಮಹರ್ಷಿ ವಾಲ್ಮೀಕಿ ತಪೋವನ ಹಾಗೂ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ 25 ಟನ್ ತೂಕದ 12 ಅಡಿ ಎತ್ತರದ ಈ ಕಪ್ಪು ಶಿಲೆ ವಾಲ್ಮೀಕಿ ವಿಗ್ರಹವನ್ನು ವಾಲ್ಮೀಕಿ ಜನಾಂಗದವರು ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೆತ್ತಿಸಿದ್ದಾರೆ
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ತಪೋವನ ಮತ್ತು ಪುಥ್ಥಳಿ ನಿರ್ಮಾಣ ಮಾಡಲಾಗಿದೆ. ಪುಥ್ಥಳಿ ಸುತ್ತಲಿನ ಉದ್ಯಾನವನದಲ್ಲಿ ಸೀತೆ, ಲವ-ಕುಶ ಹಾಗೂ ಕೆಲವು ಪ್ರಾಣಿ-ಪಕ್ಷಿಗಳ ಪ್ರತಿಕೃತಿಯನ್ನೂ ಅಳವಡಿಸಲಾಗಿದೆ.












Click it and Unblock the Notifications