ಚೆಕ್ ಬೌನ್ಸ್ ಕೇಸ್ : ಒನ್ ವೇ ಚಿತ್ರ ನಿರ್ದೇಶಕ ರಿಷಿ ಬಂಧನ
ಕೊಟ್ಲಲ್ಲಪ್ಪೋ ಕೈ ಚಿತ್ರದ ನಿರ್ದೇಶಕ ರಿಷಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಮೈತ್ರಿಯಾ ಗೌಡ ಪ್ರಕರಣದ ನಂತರ ಸೈಲಂಟ್ ಆಗಿದ್ದ ರಿಷಿ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 28: ಕೊಟ್ಲಲ್ಲಪ್ಪೋ ಕೈ ಚಿತ್ರದ ನಿರ್ದೇಶಕ ರಿಷಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಮೈತ್ರಿಯಾ ಗೌಡ ಪ್ರಕರಣದ ನಂತರ ಸೈಲಂಟ್ ಆಗಿದ್ದ ರಿಷಿ ಅವರನ್ನು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
ಒನ್ ವೇ ಚಿತ್ರಕ್ಕೆ ಸಂಬಧಿಸಿದಂತೆ ಪಾತ್ರ ನೀಡುವುದಾಗಿ ದೀಪಕ್ ಎಂಬುವವರಿಗೆ ಭರವಸೆ ನೀಡಿ ಕೈಕೊಟ್ಟ ಆರೋಪ ರಿಷಿ ಮೇಲಿದೆ. ವೈಯ್ಯಾಲಿಕಾವಲ್ ಪೊಲೀಸರು ಸೋಮವಾರದಂದು ರಿಷಿಯನ್ನು ಬಂಧಿಸಿದ್ದರು. ನಂತರ ಕೋರ್ಟ್ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚೆಕ್ ಬೌನ್ಸ್ ವಿಚಾರವಾಗಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು.













Click it and Unblock the Notifications