ಕೇಳುಗರ ಮನತಣಿಸಲಿದೆ ‘ಚೇಸ್’ ಆಡಿಯೋ Jukebox

ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಚೇಸ್ ಅಪ್ಡೇಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದು, ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಶೀಘ್ರದಲ್ಲಿ ಚಿತ್ರದ ಬಿಡುಗಡೆಯ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಸಿನಿಮಾ ಪಬ್ಲಿಸಿಟಿ ಹಾಗೂ ಸೆನ್ಸಾರ್ ಕೆಲಸದಲ್ಲಿ ಬ್ಯುಸಿ ಇರುವ ಚೇಸ್ ಟೀಂ ಆಡಿಯೋ ಜ್ಯೂಕ್ ಬಾಕ್ಸ್ ಬಿಡುಗಡೆ ಮಾಡಿದೆ.

ಚೇಸ್ ಸಿನಿಮಾದಲ್ಲಿ ಕಲರ್ ಫುಲ್ ಸಾಂಗ್‌ಗಳಿದ್ದು, ಈಗಾಗಲೇ ಲಿರಿಕಲ್ ವಿಡಿಯೋ ಮೂಲಕ ಎಲ್ಲರ ಮನೆ ಮನ ತಲುಪಿವೆ. ಇದೀಗ ಅಷ್ಟು ಹಾಡುಗಳ ಜ್ಯೂಕ್ ಬಾಕ್ಸ್ ಬಿಡುಗಡೆ ಮಾಡಿ ಕೇಳುಗರ ಮನ ತಣಿಸಿದೆ ಚಿತ್ರತಂಡ. ಒಟ್ಟು ಆರು ಹಾಡುಗಳಿದ್ದು ಅದರಲ್ಲಿ ನಾಲ್ಕು ಡ್ಯುಯೆಟ್ ಸಾಂಗ್ ಗಳಿವೆ. ಥ್ರಿಲ್ಲರ್ ಟ್ರ್ಯಾಕ್ ಕೂಡ ಇರಲಿದ್ದು ಪ್ರತಿ ಸಾಂಗ್ ಕಥೆಯೊಂದಿಗೆ ಟ್ರಾವೆಲ್ ಮಾಡುತ್ತವೆ. ಯಾವುದನ್ನು ಬೇಕೆಂದು ಸುಮ್ಮನೇ ತೂರಿಸಿದ್ದಲ್ಲ ಅನ್ನೋದು ನಿರ್ದೇಶಕ ವಿಲೋಕ್ ಶೆಟ್ಟಿ ಮಾತು.

Chase -Kannada film Album enthralls fans

ಕಾರ್ತಿಕ್ ಆಚಾರ್ಯ ಸಂಗೀತ ಸಾರಥ್ಯದಲ್ಲಿ ಚೇಸ್ ಮೂಡಿಬಂದಿದ್ದು, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಬಿನ್ನಿ ದಯಾಳ್, ಅನುರಾಧ ಭಟ್, ಹರೀಶ್ ವೆಂಕಟ್, ಮಕ್ಬೂಲ್ ಮನ್ಸೂರ್ ಮಹಮ್ಮದ್ ಹಾಡುಗಳಿಗೆ ದನಿಯಾಗಿದ್ದಾರೆ. ಡಾ. ಉಮೇಶ್ ಪಿಲಿಕುಡೇಲು ಸಾಹಿತ್ಯ ಚಿತ್ರಕ್ಕಿದೆ.

Chase -Kannada film Album enthralls fans

ರಾಧಿಕಾ ನಾರಾಯಣ್, ಸುಶಾಂತ್ ಪೂಜಾರಿ, ಅವಿನಾಶ್, ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಜಾನರ್ ಒಳಗೊಂಡ ಈ ಚಿತ್ರ ಫ್ಯಾಮಿಲಿ ಸಮೇತ ಎಂಜಾಯ್ ಮಾಡಬಹುದಾದ ಕಮರ್ಶಿಯಲ್ ಎಳೆಯೊಂದಿಗೆ ಮೂಡಿ ಬಂದಿದೆ.

Chase -Kannada film Album enthralls fans

ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಬ್ಯಾನರ್ ನಡಿ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಬಂಡವಾಳ ಹೂಡಿದ್ದು, ಶಿವ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ, ಅನಂತ ರಾಜ್ ಅರಸ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಪ್ರಮೋದ್ ಶೆಟ್ಟಿ, ಅರ್ಜುನ್ ಯೋಗೇಶ್ ರಾಜ್, ಸುಶಾಂತ್ ಪೂಜಾರಿ, ಸುಧಾ ಬೆಳವಾಡಿ, ರಾಜೇಶ್ ನಟರಂಗ, ಅರವಿಂದ್ ಬೋಳಾರ್, ರೆಹಮಾನ್ ಹಾಸನ್ ಒಳಗೊಂಡ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+