• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2 ನೌಕೆ

|

ಬೆಂಗಳೂರು, ಆಗಸ್ಟ್ 20: ದೇಶದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-2 ನಿರೀಕ್ಷೆಯಂತೆಯೇ ಮಂಗಳವಾರ ಬೆಳಿಗ್ಗೆ ಚಂದ್ರನ ಕಕ್ಷೆ ಸೇರಿದೆ. ಈ ಮೂಲಕ ದೂರದ ಚಂದಿರನಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಇನ್ನಷ್ಟು ಹತ್ತಿರಕ್ಕೆ ಕೊಂಡೊಯ್ದಿದೆ.

ಚಂದ್ರನ ಕುರಿತ ಅಧ್ಯಯನಕ್ಕೆ ತೆರಳಿರುವ ಭಾರತದ ಎರಡನೆಯ ಚಂದ್ರಯಾನ ನೌಕೆಯನ್ನು ಭೂಮಿಯ ಕಕ್ಷೆಯಿಂದ ಬೇರ್ಪಡಿಸಿ ಚಂದ್ರನ ಕಕ್ಷೆಗೆ ಏರಿಸುವ ಕಾರ್ಯವು ಬೆಳಿಗ್ಗೆ 9 ಗಂಟೆ ಸುಮಾರಿಗೆ ಯಶಸ್ವಿಯಾಗಿ ನೆರವೇರಿತು. ಚಂದ್ರನ ಧ್ರುವ ಪ್ರದೇಶಕ್ಕೆ 100ಕಿ.ಮೀ. ದೂರದಲ್ಲಿರುವ ಕಕ್ಷೆಗೆ ಪ್ರವೇಶಿಸಿತು.

ಭೂಮಿಗೆ ಗುಡ್‌ಬೈ ಹೇಳಿದ ಚಂದ್ರಯಾನ-2 ನೌಕೆ

ನೌಕೆಯಲ್ಲಿರುವ ವಿಕ್ರಮ್ ಲ್ಯಾಂಡರ್ ಸೆ.2ರಂದು ನೌಕೆಯಿಂದ ಬೇರ್ಪಡಲಿದೆ. ಸೆ 7ರಂದು ಮೊದಲು ಚಂದ್ರನ ಮೇಲೆ ಕಾಲಿಡಲಿದೆ. ಇದನ್ನು ಎರಡು ಹಂತದ ಕಾರ್ಯಾಚರಣೆಗಳ ಮೂಲಕ ಚಂದ್ರನ ಮೇಲೆ ಇಳಿಸಲಾಗುವುದು ಎಂದು ಇಸ್ರೋ ತಿಳಿಸಿದೆ.

ಜುಲೈ 22ರಂದು ಚಂದ್ರಯಾನ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಇದುವರೆಗೂ ಯಾವುದೇ ದೇಶದ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿ ಅಧ್ಯಯನ ಮಾಡುವ ಸಾಹಸಕ್ಕೆ ಮುಂದಾಗಿರಲಿಲ್ಲ. ಆದರೆ, ಇಸ್ರೋ ಈ ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿದೆ.

English summary
ISRO has successfully inserted the Chandrayaan-2 into the Lunar's orbit on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X