ಬೆಂಗ್ಳೂರಲ್ಲಿ ಮುಂದುವರಿದ ಸರಗಳ್ಳತನ, ಪೊಲೀಸರು ಕಕ್ಕಾಬಿಕ್ಕಿ
ಬೆಂಗಳೂರು, ಜೂ. 12 : ಗುರುವಾರ ಬೆಂಗಳೂರಿನ ಹತ್ತು ಕಡೆ ಸರಣಿ ಸರಗಳ್ಳತನ, ಶುಕ್ರವಾರ ಮತ್ತೆ ನಾಲ್ಕು ಕಡೆ ಮಹಿಳೆಯರ ಕತ್ತಿನಿಂದ ಮಾಂಗಲ್ಯ ಮಾಯ! ಏನು ನಡೀತಾಯಿದೆ ಬೆಂಗಳೂರಿನಲ್ಲಿ? ಒಂಟಿಯಾಗಿ ಮಹಿಳೆಯರು ಅಡ್ಡಾಡುವುದಕ್ಕೆ ಅಂಜುತ್ತಿದ್ದಾರೆ. ಕಳ್ಳರನ್ನು ಹಿಡಿಯಲು ಸಾಧ್ಯವಾಗದೆ ಪೊಲೀಸರು ಕೂಡ ಕಕ್ಕಾಬಿಕ್ಕಿಯಾಗಿದ್ದಾರೆ.
ಕಪ್ಪು ಬಣ್ಣದ ಬಜಾಜ್ ಪಲ್ಸರ್ ನಂ.7920 ಬೈಕಿನಲ್ಲಿ ಈ ಇಬ್ಬರು ಸರಗಳ್ಳರ ಸುಳಿವು ಸಿಕ್ಕರೆ ಕೂಡಲೆ 100 ನಂಬರಿಗೆ ಕರೆ ಮಾಡಿ ತಿಳಿಸಬೇಕಾಗಿ ಬೆಂಗಳೂರು ನಗರ ಪೊಲೀಸರು ನಾಗರಿಕರನ್ನು ಕೋರಿದ್ದಾರೆ. ಅಲ್ಲದೆ, ಕೆಲ ವಿಡಿಯೋಗಳನ್ನು ಕೂಡ ಬಿಡುಗಡೆ ಮಾಡಿದ್ದು, ಅವನ್ನು ವಾಟ್ಸಾಪ್ ಅಥವಾ ಸೋಷಿಯಲ್ ಮೀಡಿಯಾ ಮೂಲಕ ಸಾಧ್ಯವಾದಷ್ಟು ಜನರಿಗೆ ಕಳಿಹಿಸಿರೆಂದು ಕೇಳಿದ್ದಾರೆ.
ಅಲ್ಲಲ್ಲಿ ನಡೆಯುತ್ತಿದ್ದ ಸರಗಳ್ಳತನ ಇದ್ದಕ್ಕಿದ್ದಂತೆ ನಗರದಾದ್ಯಂತ ವ್ಯಾಪಿಸಿದೆ. ಎಲ್ಲೆಡೆ ಫಿಕ್ಸ್ ಮಾಡಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಧ್ಯಯನ ಮಾಡುತ್ತಿರುವ ಪೊಲೀಸರು, ಹಾಡುಹಗಲೇ ಕೈಚಳಕ ತೋರಿಸುತ್ತಿರುವ ಕಳ್ಳರ ಬೆನ್ನು ಬಿದ್ದಿದ್ದಾರೆ. ಅಲ್ಲದೆ, ಬೆಳಿಗ್ಗೆ ವಾಕಿಂಗ್ ಮಾಡುವಾಗ ಚಿನ್ನದ ಸರ ಅಥವಾ ಮಾಂಗಲ್ಯ ಕಾಣುವಂತೆ ಧರಿಸಿಕೊಂಡು ಅಡ್ಡಾಡಬಾರದಾಗಿ ವಿನಂತಿಸಿಕೊಳ್ಳುತ್ತಿದ್ದಾರೆ. [1 ಗಂಟೆಯಲ್ಲಿ 10 ಕಡೆ ಸರಗಳ್ಳತನ]

ಶುಕ್ರವಾರ ನಡೆದಿರುವ ಸರಗಳ್ಳತನದ ವಿವರಗಳು ಹೀಗಿವೆ
* ಎಚ್ಎಎಲ್‌ನ ದೊಡ್ಡನೆಕ್ಕುಂದಿ ಬಳಿ ಇಂದಿರಾ ಎಂಬುವವರು ದೇವಸ್ಥಾನಕ್ಕೆ ಹೋಗಿ ಮರಳಿ ಬರುತ್ತಿದ್ದಾಗ 10 ಗಂಟೆಯ ಸುಮಾರಿಗೆ ಬೈಕಲ್ಲಿ ಬಂದ ಇಬ್ಬರು ಅವರ ಕತ್ತಲ್ಲಿದ್ದ 100 ಗ್ರಾಂ ಸರವನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಇಂದಿರಾ ಅವರು ಕೂಡಲೆ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. 100 ಗ್ರಾಂ ಸರ ಅಂದ್ರೆ ಲೆಕ್ಕ ಹಾಕಿ, ರೊಕ್ಕ ಎಷ್ಟಿರಬಹುದೆಂದು?
ದಯವಿಟ್ಟು ಪ್ರಕಟಣೆಯನ್ನು ಗಮನಿಸಿ ಮತ್ತು ಡಯಲ್ 100 ಅಥವಾ ಟ್ವಿಟ್ ಮೂಲಕ ಮಾಹಿತಿ ನೀಡಿ ಹಾಗೂ ಸರಗಳ್ಳರ ಭಾವಚಿತ್ರವನ್ನು ವ್ಯಾಟ್ಸ್ಅಪ್ ನಲ್ಲಿ ವ್ಯಾಪಕವಾಗಿ ಶೇರ್ ಮಾಡಿ.
— M N Reddi, IPS (@CPBlr) June 12, 2015 * ಯಲಹಂಕದಲ್ಲಿ ಶಕುಂತಲಾ ಎಂಬುವವರು ಬೆಳಿಗ್ಗೆ ಹಾಲು ತರಲು ಹೋದಾಗ ಅವರ ಕತ್ತಲ್ಲಿದ್ದ 50 ಗ್ರಾಂ ಚಿನ್ನದ ಸರ ಮಾಯವಾಗಿದೆ. ಜ್ಞಾನತಪ್ಪಿ ಬಿದ್ದಿದ್ದನ್ನು ನೋಡಿ ನೆರೆಹೊರೆಯವರು ಅವರ ಮಗನಿಗೆ ಸುದ್ದಿ ತಿಳಿಸಿದ್ದಾರೆ. ಸರಗಳ್ಳರು ಶಕುಂತಲಾ ಅವರನ್ನು ತಳ್ಳಿ ಸರ ಕಿತ್ತುಕೊಂಡಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.
* ಎಚ್ಎಎಲ್ ವ್ಯಾಪ್ತಿಯಲ್ಲಿ ಬೆಳಿಗ್ಗೆ ಸುಮಾರು 11 ಗಂಟೆಗೆ ಮುನಿಕೊಳಲ ನಿವಾಸಿ ರಾಜೇಶ್ವರಿ ಎಂಬುವವರ ಕತ್ತಿನಲ್ಲಿದ್ದ 60 ಗ್ರಾಂ ಬಂಗಾರದ ಸರ ಕಿತ್ತು ಯುವಕರಿಬ್ಬರು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಅವರು ನಾಯಿಗೆ ಅನ್ನ ಹಾಕಲೆಂದು ಹೊರಬಂದಾಗ ಈ ಘಟನೆ ನಡೆದಿದೆ.
#BewareChainSnatching :Spread this video to maximum people through WhatsApp and other SMchannels https://t.co/ydCOB5jq2c via @YouTube @cpblr
— BengaluruCityPolice (@BlrCityPolice) June 12, 2015 * ರಾಜಗೋಪಾಲನಗರದಲ್ಲಿ ಗುಜ್ಜಪ್ಪ ಎಂಬುವವರ ಹೆಂಡತಿ ರಾತ್ರಿ ಮಲಗುವಾಗ 22 ಗ್ರಾಂ ಚಿನ್ನದ ಸರವನ್ನು ಟೇಬಲ್ ಮೇಲಿಟ್ಟಿದ್ದರಂತೆ. ಮಧ್ಯರಾತ್ರಿ ಗಂಡ ಶೌಚಕ್ಕೆಂದು ಹೊರಹೋಗಿ ಬರುವಷ್ಟರಲ್ಲಿ ಸರ ಮಂಗಮಾಯವಾಗಿದೆ. ಇದು ಹೇಗೆ ಮಾಯವಾಯಿತು ಎಂಬುದು ಚಿದಂಬರ ಪ್ರಶ್ನೆಯಾಗಿದೆ. ಗುಜ್ಜಪ್ಪ ಪ್ರತಿದಿನ ಹೊರಹೋಗುತ್ತಿದ್ದುದನ್ನು ಗಮನಿಸುತ್ತಿದ್ದವರು ಇದನ್ನು ಮಾಡಿರಬೇಕೆಂದು ಶಂಕಿಸಿದ್ದಾರೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ












Click it and Unblock the Notifications