ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಮತ್ತೆ ಬಂದ ಸರಗಳ್ಳರು, 8 ಕಡೆ ಕೈಚಳಕ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 30 : ಬುಧವಾರ ಬೆಂಗಳೂರಿಗೆ ಸರಗಳ್ಳರು ಪುನಃ ಆಗಮಿಸಿದ್ದಾರೆ. ನಗರದ 8 ಕಡೆ ಬೆಳ್ಳಂಬೆಳಗ್ಗೆ ಸರಗಳ್ಳತನ ನಡೆದಿದೆ. ಜೆಪಿ ನಗರದ ಎರಡು ಕಡೆ ಸರಗಳ್ಳತನವಾಗಿದೆ. ಪೊಲೀಸರು ಮಂಗಳವಾರ 6 ಸರಗಳ್ಳರನ್ನು ಬಂಧಿಸಿದ್ದರು.

ಮೈಕೋಲೇಔಟ್, ಜೆಪಿ ನಗರ, ಯಲಹಂಕ, ಅಮೃತಹಳ್ಳಿ, ಯಲಹಂಕದ ಮಾರುತಿ ನಗರ, ದೊಡ್ಡ ಬೆಟ್ಟಹಳ್ಳಿ ಮುಖ್ಯರಸ್ತೆಯಲ್ಲಿ ಸರಗಳ್ಳತನ ನಡೆದಿದೆ. ಕಪ್ಪು ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ. [ಬೆಂಗಳೂರಲ್ಲಿ ಸಿಕ್ಕಿಬಿದ್ರು 6 ಸರಗಳ್ಳರು]

crime beat

ದೊಡ್ಡ ಬೆಟ್ಟಹಳ್ಳಿ ಮುಖ್ಯರಸ್ತೆಯಲ್ಲಿ ಶಿಕ್ಷಕಿ ವಿಜಯಲಕ್ಷ್ಮೀ ಅವರ ಬಳಿ ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು 40 ಗ್ರಾಂ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜೆಪಿ ನಗರದಲ್ಲಿ ಎರಡು ಕಡೆ ವಾಯುವಿಹಾರಕ್ಕೆ ತೆರಳುತ್ತಿದ್ದವರ ಸರವನ್ನು ಕಳವು ಮಾಡಲಾಗಿದೆ. [ಬೆಂಗಳೂರು: ಸರಗಳ್ಳರಿಗೆ ಭಾನುವಾರವೂ ರಜೆ ಇಲ್ಲ!]

ಸರ ಕಳೆದುಕೊಂಡವರು : ಯಲಹಂಕದ ಮಾರುತಿ ನಗರದಲ್ಲಿ ನಾಗಜ್ಯೋತಿ ಅವರ 30 ಗ್ರಾಂ ಸರ, ಮೈಕೋ ಲೇಔಟ್‌ನಲ್ಲಿ ಯಶೋಧಮ್ಮ ಅವರ 16 ಗ್ರಾಂ ಸರ, ಜೆಪಿನಗರದಲ್ಲಿ ರಾಜಮ್ಮ ಅವರ 40 ಸರ, ರಮಾ ಅವರ 40 ಗ್ರಾಂ ಸರವನ್ನು ಕಳವು ಮಾಡಲಾಗಿದೆ. ಅಮೃತಹಳ್ಳಿಯಲ್ಲಿ ಮಂಗಳಾ ಎಂಬುವವರ ಸರವನ್ನು ಕಳವು ಮಾಡಲು ಪ್ರಯತ್ನ ನಡೆಸಲಾಗಿದೆ. [ಇಂದಿನ ಚಿನ್ನದ ದರವೆಷ್ಟು?]

English summary
Eight chain snatching incidents reported in Bengaluru on Wednesday, September 30, 2015. Two incidents reported at JP Nagar police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X