ಕೇಂದ್ರ ಕಾರ್ಮಿಕ ಆಯುಕ್ತರ ಜತೆ ಮೆಟ್ರೋ ನೌಕರರ ಸಭೆ ವಿಫಲ
ಬೆಂಗಳೂರು, ಮೇ 31: ನಮ್ಮ ಮೆಟ್ರೋ ನೌಕರರ ಮುಷ್ಕರದ ವಿಚಾರವಾಗಿ ಕೇಂದ್ರ ಕಾರ್ಮಿಕ ಆಯುಕ್ತರು ಕರೆದಿದ್ದ ಸಂಧಾನ ಸಭೆ ವಿಫಲವಾಗಿದೆ. ಮೆಟ್ರೋ ನೌಕರರು ಮತ್ತು ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ನಡುವಿನ ಸಂಘರ್ಷ ನಿವಾರಿಸುವಲ್ಲಿ ಕೇಂದ್ರ ಕಾರ್ಮಿಕ ಆಯುಕ್ತರು ನಡೆಸಿದ ಪ್ರಯತ್ನ ವಿಫಲವಾಗಿದೆ.
ಮೆಟ್ರೋ ನೌಕರರು ವೇತನ ಪರಿಷ್ಕರಣೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ 4 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದರು. ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ಈ ಕುರಿತು ಚರ್ಚೆಯಾಗಿತ್ತು. ಜೂ.4ರಂದು ಮತ್ತೆ ಹೈಕೋರ್ಟ್ ವಿಚಾರಣೆ ನಡೆಯಲಿರುವುದರಿಂದ ಮುಷ್ಕರದ ತೀರ್ಮಾನದಿಂದ ನೌಕರರು ಹಿಂದೆ ಸರಿದಿದ್ದರು.

ಈ ನಡುವೆ ಸಂಧಾನ ನಡೆಸಲು ಮುಂದಾಗಿರುವ ಕೇಂದ್ರ ಕಾರ್ಮಿಕ ಆಯುಕ್ತರು ಬುಧವಾರ ಸಭೆ ನಡೆಸಿ ತೊಂದರೆಗಳ ಕುರಿತು ಚರ್ಚೆ ನಡೆಸಿದರು. ಅಂತಿಮವಾಗಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ವೇತನ ಪರಿಷ್ಕರಣೆ, ನೌಕರರ ಸಂಘಕ್ಕೆ ಕಾನೂನು ಮಾನ್ಯತೆ, ಪಾಳಿ ವ್ಯವಸ್ಥೆಯಲ್ಲಿ ಬದಲಾವಣೆ, ಗುತ್ತಿಗೆ ಪದ್ಧತಿಯನ್ನು ರದ್ದು ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ನೌಕರರು ಆಗ್ರಹಿಸಿದರು.












Click it and Unblock the Notifications