ಬರ್ತಡೇ ಗಿಫ್ಟ್, ಮೆಡಿಕಲ್ ಎಮರ್ಜೆನ್ಸಿ ಕಿಟ್‌ಗಳಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಜಾಲ ಸಿಸಿಬಿ ಬಲೆಗೆ

ಬೆಂಗಳೂರು, ಆ. 02 : ಹಣವನ್ನು ಸುಲಭವಾಗಿ ಸಂಪಾದಿಸಬೇಕೆ. ಶ್ರಮವನ್ನು ವ್ಯರ್ಥ ಮಾಡದೇ ಹಣವನ್ನು ಗಳಿಸಬೇಕೆಂದರೆ ಇಲ್ಲಿದೆ ಸುಲಭ ಮಾರ್ಗ ಎಂದು ನಿರುದ್ಯೋಗಿ ಯುವಕರಿಗೆ ಆಮಿಷವೊಡ್ಡಿ ಮಾದಕವಸ್ತುವನ್ನು ಸಾಗಾಟ ಮಾಡಿಸುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೆಹಲಿ ಮೂಲದ ಆರೋಪಿಗಳು ಅತ್ಯಾಧುನಿಕ ತಂತ್ರಜ್ಞಾನ ಸಾಫ್ಟ್ ವೇರ್‍‌ ಅನ್ನು ಬಳಸಿ ಮಾದಕವಸ್ತುಗಳನ್ನು ಖರೀದಿಸುತ್ತಿದ್ದರು. ಮಾದಕವಸ್ತುವನ್ನು ಖರೀದಿಸಿ ಆ ಬಳಿಕ ಹಣದ ಆಮಿಷವೊಡ್ಡಿ ನಿರುದ್ಯೋಗಿ ಯುವಕರನ್ನು ಬಳಸಿ ಗ್ರಾಹಕರಿಗೆ ಮಾದಕ ವಸ್ತುವನ್ನು ಪೂರೈಸುತ್ತಿದ್ದರು. ಈ ಮಾದಕ ವಸ್ತು ಜಾಲದ ಹೆಡೆಮುರಿಯನ್ನು ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾದಕ ವಸ್ತುಗಳನ್ನು ಮೆಟ್ರೋ ಪಾಲಿಟನ್‌ ಸಿಟಿಗಳಲ್ಲಿ ಮಾರಾಟ ಮಾಡುತ್ತಿದ್ದರು. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈನಲ್ಲಿ ಮಾರಾಟವನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದಕ್ಕಾಗಿ ಪ್ರಮುಖ ನಗರಗಳಲ್ಲಿ ಪಿಜೆಯನ್ನು ಮಾಡಿಕೊಟ್ಟು ಯುವಕರ ಮೂಲಕ ಮಾದಕ ವಸ್ತುಗಳನ್ನು ಗ್ರಾಹಕರಿಗೆ ಸಪ್ಲೇ ಮಾಡುತ್ತಿದ್ದರು ಎಂಬ ಕಾರಣಕ್ಕೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

 ಜಾಹೀರಾತು ಮೂಲಕ ನಿರುದ್ಯೋಗಿ ಯುವಕರಿಗೆ ಗಾಳ

ಜಾಹೀರಾತು ಮೂಲಕ ನಿರುದ್ಯೋಗಿ ಯುವಕರಿಗೆ ಗಾಳ

Darknetನ ಮೂಲಕ ಪ್ರವೇಶಿಸಿ DREAD ಎಂಬ ವೆಬ್ ಸೈಟ್‌ನಲ್ಲಿ WICKR-ME ಅಪ್ಲಿಕೇಷನ್‌ನಲ್ಲಿ ವಿದೇಶಿಯ ಮತ್ತು ಸ್ಥಳೀಯ ಡ್ರಗ್ ವೆಂಡರ್ ಗಳಿಂದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಕ್ರಿಪ್ಟೋ ಕರೆನ್ಸಿ ಮುಖಾಂತರ ಖರೀದಿಸಿ ಶೇಖರಿಸಿಕೊಂಡು ವಿನೂತನ ರೀತಿಯಲ್ಲಿ If U want to earn respect with money and also willing to do anything for it reach/ contact me, ಎಂಬ ಟ್ಯಾಗ್ ಲೈನ್ ಇರುವ ಜಾಹೀರಾತನ್ನು ಲೋಕ್ಯಾಂಟೋ ಅಪ್ಲಿಕೇಷನ್ ನಲ್ಲಿ ಹಾಕಿ ಡ್ರಗ್ಸ್ ಸರಬರಾಜು ಮಾಡುವುದಕ್ಕೆ ನಿರುದ್ಯೋಗಿ ಯುವಕರನ್ನು ಸೆಳೆಯುತ್ತಿದ್ದರು.

 ಮಹಾನಗರಗಳೇ ಡ್ರಗ್ಸ್ ಮಾರಾಟಗಾರರ ಅಡ್ಡೆ

ಮಹಾನಗರಗಳೇ ಡ್ರಗ್ಸ್ ಮಾರಾಟಗಾರರ ಅಡ್ಡೆ

ಬೆಂಗಳೂರು, ದೆಹಲಿ, ಮುಂಬೈ ಮತ್ತು ಚೆನ್ನೈ ಮೆಟ್ರೋ ಪಾಲಿಟನ್ ಸಿಟಿಗಳ ಪಿಜಿಗಳಲ್ಲಿ ಕೊಠಡಿಗಳನ್ನು ಬಾಡಿಗೆ ಪಡೆದು ಮಾದಕ ವಸ್ತುಗಳನ್ನು ಇಂಡಿಯನ್ ಪೋಸ್ಟಲ್ ಸರ್ವೀಸ್ ಮತ್ತು ಇಂಟರ್ ನ್ಯಾಷನಲ್ ಕೋರಿಯರ್ ಮುಖಾಂತರ ಏಜೆಂಟ್ ಗಳು ವಾಸವಿದ್ದ ಪಿಜಿಗಳಿಗೆ ಸರಬರಾಜು ಮಾಡಿಸಿ ಶೇಖರಣೆ ಮಾಡಿಟ್ಟುಕೊಂಡು ಮೆಸೇಂಜರ್ ಅಪ್ಲಿಕೇಷನ್‌ಗಳಾದಂತಹ ಟೆಲಿಗ್ರಾಂ ಮತ್ತು ಇನ್ಸ್ಟಾಗ್ರಾಂ , ಬ್ರಿಯಾರ್ , ಕಂಫೈಂಡ್ ಮತ್ತು ಸೆಷನ್ ಗಳನ್ನು ಬಳಸಿಕೊಂಡು ಮಹಾನಗರಗಳ ಮಾದಕ ದ್ರವ್ಯ ಗ್ರಾಹಕರನ್ನು ಸೆಳೆದು ವಿವಿಧ ಬಗೆಯ ಡ್ರಗ್ಸ್‌ಗಳ ಲಭ್ಯತೆ ಮತ್ತು ಅವುಗಳ ಬೆಲೆಯ ಮಾಹಿತಿಯನ್ನು ನೀಡಿ ಅವರಿಗೆ ಬೇಕಾದ ಮಾದವಸ್ತುವನ್ನು ಟೆಲಿಗ್ರಾಂನಲ್ಲಿ ಆರ್ಡರ್ ಪಡೆದು ಮಾದಕ ವಸ್ತುಗಳನ್ನು ಸರಬರಾಜನ್ನು ಮಾಡುತ್ತಿದ್ದರು.

 ಮಾದವ ವಸ್ತುವನ್ನು ಸಾಗಿಸುತ್ತಿದ್ದದ್ದು ಹೇಗೆ

ಮಾದವ ವಸ್ತುವನ್ನು ಸಾಗಿಸುತ್ತಿದ್ದದ್ದು ಹೇಗೆ

ಮಾದಕವಸ್ತುವಿಗೆ ಟೆಲಿಗ್ರಾಂನಲ್ಲಿ ಆರ್ಡರ್ ಪಡೆದು ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣವನ್ನು ಪಡೆಯುತ್ತಿದ್ದರು. Birthday Gift, Wrap, Medical Emergency kit ಹಾಗೂ Courier Envelopersಗಳಲ್ಲಿ ಮಾದಕವಸ್ತುಗಳನ್ನಿಟ್ಟು DUNZO , PARTER, ಎಂಬ ಲಾಜಿಸ್ಟಿಕ್ ಸರ್ವೀಸ್ ಗಳ ಮೂಲಕ ಡಿಲಿವರಿ ಪಾಯಿಂಟ್ ನೊಂದಾಯಿಸಿ ಅನುಮಾನಬಾರದ ರೀತಿಯಲ್ಲಿ ಮಾದಕ ವಸ್ತುಗಳ ಗ್ರಾಹಕರ ಮನೆಬಾಗಿಲಿಗೆ ಸಪ್ಲೇ ಮಾಡುತ್ತಿದ್ದರು.

 2 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತು ವಶಕ್ಕೆ

2 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತು ವಶಕ್ಕೆ

ವೈಟ್ ಫೀಲ್ಡ್‌ನ ಮೆನ್ಸ್ ಪಿಜಿಯಲ್ಲಿದ್ದ ದೆಹಲಿ ಮೂಲದ 3 , ಬಿಹಾರ ಮೂಲದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಾಗರ್ ಮೆಹ್ತಾ, ಸುಖ್ ಜೀವ್ ಸಿಂಗ್, ಮಹಾಪಲಿ ಸಿಂಗ್ ಕುಶ್ವಾ, ವಿಶಾಲ್ ಕುಮಾರ್ ಸಿಂಗ್, ಹಿಮಾಂಶು ಠಾಕೂರ್ ಎಂಬ ಆರೋಪಿಗಳನ್ನು ಬಂಧಿಸಿ 2 ಕೋಟಿಗೂ ಹೆಚ್ಚು ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಎಕ್ಸ್ಟಸಿ, ಎಲ್ಎಸ್‌ಡಿ ಸ್ಟ್ರಿಪ್ಸ್‌ಗಳು , ಕೊಕೈನ್, ಹ್ಯಾಶಿಸ್ ಆಯಿಲ್, ಚರಸ್ ಮತ್ತು ಗಾಂಜಾವವನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ವ್ಯವಹಾರವನ್ನು ನಡೆಸುತ್ತಿದ್ದ 5 ಬ್ಯಾಂಕ್‌ಗಳ ಅಕೌಂಟ್ ಅನ್ನು ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+