ಆಂಬಿಡೆಂಟ್ ಪ್ರಕರಣದಲ್ಲಿ ಅಲೋಕ್‌ಕುಮಾರ್ ಕರ್ತವ್ಯಲೋಪ ಎಸಗಿದ್ದಾರೆ: ರವಿಕೃಷ್ಣಾ ರೆಡ್ಡಿ
ಬೆಂಗಳೂರು, ಡಿಸೆಂಬರ್ 14: ಆಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಅವರು ಉತ್ತಮವಾಗಿ ತನಿಖೆ ನಡೆಸಿದ್ದರೂ ಸಹ ಕೆಲವು ಕಡೆ ಗುರುತರವಾದ ಕರ್ತವ್ಯಲೋಪ ಎಸಗಿದ್ದಾರೆ ಎಂದು ಲಂಚಮುಕ್ತ ಕರ್ನಾಟಕದ ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದರು.
ಪ್ರೆಸ್‌ಕ್ಲಬ್‌ನಲ್ಲಿ ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಅವರು, ಸಿಸಿಬಿ ಆಯಕ್ತ, ತನಿಖಾಧಿಕಾರಿ ಅಲೋಕ್ ಕುಮಾರ್ ಪ್ರಕರಣದ ತನಿಖೆ ವೇಳೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಅವರು ಹೇಳಿದರು.
ಇಡಿ ತನಿಖೆಯಿಂದ ತಪ್ಪಿಸಲು ಜನಾರ್ಧನ ರೆಡ್ಡಿ ಅವರು ಲಂಚವನ್ನು ಆಂಬಿಡೆಂಟ್ ಸಂಸ್ಥೆ ಮಾಲೀಕರಿಂದ ಪಡೆದಿದ್ದರು ಎಂದು ತನಿಖೆ ವೇಳೆ ಗೊತ್ತಾದ ಮೇಲೆ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕೇಸು ದಾಖಲಿಸದೆ ಆಂಬಿಡೆಂಟ್ ಪ್ರಕರಣದ ಆರನೇ ಆರೋಪಿ ಮಾಡಿರುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟರು. ಇದರಿಂದ ರೆಡ್ಡಿಗೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಅನುಕೂಲವಾಯಿತು ಎಂದು ಅವರು ಹೇಳಿದರು.

ಮತದಾನದ ನಂತರ ಬಂಧಿಸಿದ್ದ ತಪ್ಪು
ಉಪಚುನಾವಣೆಗೆ ಮುನ್ನವೇ ಸಾಕ್ಷ್ಯಗಳು ಸಿಕ್ಕಿದ್ದರೂ ಸಹ ಮತದಾನ ಮುಗಿದ ಮುಗಿದ ನಂತರ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದು ತಪ್ಪು. ಇದು ಸಹ ಕತ್ಯವ್ಯಲೋಪವೇ ಆಗಿದೆ. ಒಂದು ದಿನದಲ್ಲಿ ಆರೋಪಿ ಎಷ್ಟು ಸಾಕ್ಷ್ಯ ನಾಶ ಮಾಡಬಹುದು ಅಂತಹುದರಲ್ಲಿ ಮತದಾನ ಮುಗಿವವರೆಗೆ ಸಿಸಿಬಿ ಕಾಯ್ದಿದ್ದು ತನಿಖೆ ದೃಷ್ಠಿಯಿಂದ ಬಹು ದೊಡ್ಡ ಹಿನ್ನಡೆ ಎಂದು ಅವರು ಹೇಳಿದರು.

ಸಿಎಂಗೆ ಮಾಹಿತಿ ನೀಡುವ ಅಗತ್ಯ ಇರಲಿಲ್ಲ
ಅಲೋಕ್ ಕುಮಾರ್ ಅವರು ಬೆಂಗಳೂರು ಸಿಟಿ ಕಮಿಷನರ್ ಸುನಿಲ್ ಕುಮಾರ್, ಐಜಿ ನೀಲಮಣಿ ರಾಜು, ಗೃಹಮಂತ್ರಿ ಪರಮೇಶ್ವರ್ ಅವರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡದೆ ನೇರವಾಗಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಪ್ರಕರಣದ ಮಾಹಿತಿ ಹಂಚಿಕೊಂಡಿರುವುದು ಸಹ ತಪ್ಪು ಇದು ಕರ್ತವ್ಯಲೋಪ ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು.

ರಾಮಲಿಂಗಾ ರೆಡ್ಡಿ ಕೋನದಲ್ಲಿ ತನಿಖೆ ಮಾಡಿಲ್ಲ
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದ ಅವಧಿಯಲ್ಲಿಯೇ ದೇವರಜೀವನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಂಬಿಡೆಂಟ್ ಕಂಪೆನಿ ವಿಚಾರವಾಗಿ ದೂರು ದಾಖಲಾಗಿತ್ತು. ಆದರೆ ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಮೌಖಿಕ ಆದೇಶದ ಮೇರೆಗೆ ತನಿಖೆ ಮಾಡಲಾಗಿರಲಿಲ್ಲ. ಅಲೋಕ್ ಕುಮಾರ್ ಅವರು ಆ ನಿಟ್ಟಿನಲ್ಲೂ ತನಿಖೆ ನಡೆಸ ಬೇಕಿದೆ. ಆದರೆ ಅವರು ಆ ಆಯಾಮದಲ್ಲಿ ತನಿಖೆ ನಡೆಸಿಲ್ಲ.

ಉತ್ತಮ ತನಿಖೆ ನಡುವೆ ಕೆಲವು ತಪ್ಪು
ಅಲೋಕ್ ಕುಮಾರ್ ಅವರು ಆಂಬಿಡೆಂಟ್ ಪ್ರಕರಣವನ್ನು ಉತ್ತಮವಾಗಿ ತನಿಖೆ ಮಾಡಿದ್ದಾರೆ ಆದರೆ ಜೊತೆಯಲ್ಲಿ ಕೆಲವು ತಪ್ಪುಗಳನ್ನೂ ಮಾಡಿದ್ದಾರೆ ಇದು ಒಟ್ಟಾರೆ ತನಿಖೆಯ ಮೇಲೆ ಪ್ರಭಾವ ಬೀರಿದೆ. ಮತ್ತು ತನಿಖೆಯ ಮೇಲೆ ಅನುಮಾನವನ್ನೂ ಮೂಡಿಸುತ್ತದೆ ಎಂದು ಅವರು ಹೇಳಿದರು.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications