ಬೆಂಗಳೂರು-ಮೈಸೂರು ರೈಲಿನ ಹೆಸರು ಬದಲಾಯಿಸಲು ಟ್ವಿಟ್ಟರ್ ಅಭಿಯಾನ
ಬೆಂಗಳೂರು, ಆಗಸ್ಟ್ 28: ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಲು ಟ್ವಿಟ್ಟರ್‌ನಲ್ಲಿ ಅಭಿಯಾನ ಜೋರಾಗಿಯೇ ನಡೆಯುತ್ತಿದೆ.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿ ವಿಶ್ವೇರಯ್ಯ ಹೆಸರು ಅಥವಾ ಜಯಚಾಮರಾಜೇಂದ್ರ ಒಡೆಯರ್ ಹೆಸರು ಇಡಬೇಕೆಂದು ಒತ್ತಾಯ ಪ್ರಾರಂಭವಾಗಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಸರ್ಕಾರ ಪ್ರಾರಂಭಿಸಿದ್ದ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು. ಹಾಗಾಗಿ ಈಗ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನೂ ಬದಲಾಯಿಸಲು ಒತ್ತಾಯ ಕೇಳಿ ಬರುತ್ತಿದೆ.

ಬೆಂಗಳೂರು ಮತ್ತು ಮೈಸೂರಿಗೆ ಕೊಡುಗೆ ಕೊಟ್ಟಿರುವ ವಿಶ್ವೇಶ್ವರಯ್ಯ ಅವರ ಹೆಸರು ಅಥವಾ ಒಡೆಯರ್ ಅವರ ಹೆಸರನ್ನು ರೈಲಿಗೆ ಇಡುವುದು ಸೂಕ್ತ ಎಂದು ಕೆಲವರು ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ಲ, ಆತ ಧರ್ಮಾಂದನಾಗಿದ್ದ ಎಂದು ಹಲವರು ಟ್ವೀಟ್ ಮಾಡಿ, ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಲು ಒತ್ತಾಯಿಸಿದ್ದಾರೆ. ಟ್ವಿಟ್ಟರ್‌ನಲ್ಲಿ #RenameTippuExpress ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.
ಟಿಪ್ಪು ಹೆಸರನ್ನು ಉಳಿಸಿಕೊಳ್ಳುವಂತೆಯೂ ಕೆಲವರು ಇದೇ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಿದ್ದಾರೆ. ಟಿಪ್ಪು ಬ್ರಿಟೀಷರ ಪಾಳಿಗೆ ದುಸ್ವಪ್ನವಾಗಿದ್ದ, ಮೈಸೂರು ರಾಜ್ಯಕ್ಕೆ ಅವನು ನೀಡಿದ ಕೊಡುಗೆಗಳು ಅಪಾರ ಎಂದು ಟ್ವೀಟಿಸಿದ್ದಾರೆ.












Click it and Unblock the Notifications