BWSSB: 12 ಕೋಟಿ ರೂ. ಪ್ರೋ-ರೇಟಾ ಪ್ರಕರಣ: ಜೈನ್ ಇಂಟರ್‌ನ್ಯಾಷನಲ್ ಶಾಲೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ವಿಧಿಸಿದ್ದ 12 ಕೋಟಿ ರೂ.ಗಳ ಬೃಹತ್ 'ಪ್ರೊ-ರೇಟಾ' (Pro-rata) ನೀರಿನ ಶುಲ್ಕದ ಡಿಮ್ಯಾಂಡ್ ನೋಟಿಸ್ ಅನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಜೊತೆಗೆ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ ಎಂದು ಜಲಮಂಡಳಿ ಸೋಮವಾರ ಮಾಹಿತಿ ನೀಡಿದೆ.
ಪ್ರಕರಣದ ಹಿನ್ನೆಲೆ ನೋಡುವುದಾದರೆ, ಕನಕಪುರ ತಾಲೂಕಿನಲ್ಲಿರುವ ಈ ಶಾಲೆಯ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಾಗಿರದ ಕಾರಣ, ಶಾಲಾ ಆಡಳಿತ ಮಂಡಳಿಯು ಹೆಚ್ಚಿನ ಪ್ರಮಾಣದ ನೀರಿನ ಪೂರೈಕೆಗಾಗಿ 2004 ರಲ್ಲಿ ಜಲಮಂಡಳಿಯನ್ನು ಸಂಪರ್ಕಿಸಿತ್ತು. ಪ್ರತಿದಿನ 9 ಲಕ್ಷ ಲೀಟರ್ ನೀರು ಪೂರೈಸಲು ಸರ್ಕಾರ ಅನುಮೋದನೆ ನೀಡಿತ್ತು. ನೀರಿನ ಪೈಪ್‌ಲೈನ್ ಅಳವಡಿಸಲು ಶಾಲೆ 93 ಲಕ್ಷ ರೂ. ಪಾವತಿಸಿತ್ತು ಮತ್ತು ಮೇ 6, 2004 ರಂದು ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

12 ಕೋಟಿ ರೂ.ಗೂ ಅಧಿಕ ಶುಲ್ಕ
ಜಲಮಂಡಳಿಯು ತನ್ನ ನೀರಿನ ದರಗಳನ್ನು 2016ರಲ್ಲಿ ಪರಿಷ್ಕರಿಸಿದಾಗ ಪ್ರೊ-ರೇಟಾ ಶುಲ್ಕವಾಗಿ 4.32 ಕೋಟಿ ರೂ. ಹಾಗೂ ಹೆಚ್ಚುವರಿ ಪ್ರೊ-ರೇಟಾ ಶುಲ್ಕವಾಗಿ 8.64 ಕೋಟಿ ರೂ. ಸೇರಿ ಒಟ್ಟು 12 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಪಾವತಿಸುವಂತೆ ಹಾಗೂ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿ ಜಲಮಂಡಳಿ ನೋಟಿಸ್ ಜಾರಿ ಮಾಡಿತ್ತು.
ಹೈಕೋರ್ಟ್ ಮೆಟ್ಟಿಲೇರಿದ್ದ ಶೈಕ್ಷಣಿಕ ಸಂಸ್ಥೆ
ಜಲಮಂಡಳಿ ನೀಡಿದ ನೋಟಿಸ್‌ಗಳನ್ನು ಪ್ರಶ್ನಿಸಿ ಶೈಕ್ಷಣಿಕ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿತು (ರಿಟ್ ಅರ್ಜಿ ಸಂ. 22615/2016). ತಾನು ಪ್ರೊ-ರೇಟಾ ಶುಲ್ಕ ಪಾವತಿಸಬೇಕಾಗಿಲ್ಲ, ಫೆಬ್ರವರಿ ಮತ್ತು ಏಪ್ರಿಲ್ 2016 ರ ನೋಟಿಸ್‌ಗಳನ್ನು ರದ್ದುಗೊಳಿಸಬೇಕು. ನವೆಂಬರ್ 2014 ಕ್ಕಿಂತ ಮೊದಲು 'ಹೆಚ್ಚುವರಿ ಶುಲ್ಕ'ವಾಗಿ ಸಂಗ್ರಹಿಸಲಾಗಿದ್ದ 1.01 ಕೋಟಿ ರೂ.ಗಳನ್ನು ಮರುಪಾವತಿಸುವಂತೆ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಿನಂತಿಸಿಕೊಂಡಿತ್ತು.
ಅರ್ಜಿಗೆ ಸಂಬಂಧಿಸಿದಂತೆ ವಾದ ವಿವಾದ ಆಲಿಸಿದ ಹೈಕೋರ್ಟ್, ಅರ್ಜಿದಾರರ ಎಲ್ಲಾ ಪ್ರಮುಖ ವಾದಗಳನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಬಿಡಬ್ಲ್ಯುಎಸ್‌ಎಸ್‌ಬಿ ಕಾಯ್ದೆಯ ಸೆಕ್ಷನ್ 16 ರ ಅಡಿ ಪ್ರೊ-ರೇಟಾ ಶುಲ್ಕ ವಿಧಿಸಲು ಜಲಮಂಡಳಿಗೆ ಪೂರ್ಣ ಅಧಿಕಾರವಿದೆ. ಎರಡು ಸಂಸ್ಥೆಗಳ ನಡುವಿನ 2004ರ ಒಪ್ಪಂದವಾಗಿದ್ದರೂ ಕೂಡಾ, ಅದು ಮಂಡಳಿಯ ಶಾಸನಬದ್ಧ ನಿಯಮಗಳನ್ನು ಮೀರುವಂತಿಲ್ಲ. ಮಂಡಳಿಯು ಈ ಹಿಂದೆ ಈ ಶುಲ್ಕವನ್ನು ಸಂಗ್ರಹಿಸದಿದ್ದರೂ, ನಂತರದ ಹಂತದಲ್ಲಿ ಅದನ್ನು ವಿಧಿಸುವ ಕಾನೂನುಬದ್ಧ ಹಕ್ಕನ್ನು ಹೊಂದಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನೀರಿನ ಪೂರೈಕೆಯ ದರ ನಿಗದಿ ವಿಚಾರದಲ್ಲಿ ಕೇವಲ 'ವಸತಿ' ಮತ್ತು 'ವಸತಿಯೇತರ/ವಾಣಿಜ್ಯ' (Non-residential/Commercial) ಎಂಬ ಎರಡು ವಿಭಾಗಗಳು ಮಾತ್ರ ಶಾಸನಬದ್ಧವಾಗಿ ಅಸ್ತಿತ್ವದಲ್ಲಿವೆ. ಶೈಕ್ಷಣಿಕ ಸಂಸ್ಥೆಗಳಿಗೆ ಯಾವುದೇ ಪ್ರತ್ಯೇಕ ವಿಭಾಗವಿಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಶಾಲೆಯ ವಾದವನ್ನು ತಳ್ಳಿಹಾಕಿರುವ ಪೀಠ, ಅರ್ಜಿದಾರರೇ ಖುದ್ದಾಗಿ ತಮ್ಮ ಆವರಣವನ್ನು 'ವಾಣಿಜ್ಯ ಸಂಕೀರ್ಣ' ಎಂದು ಉಲ್ಲೇಖಿಸಿರುವುದನ್ನು ಕೋರ್ಟ್ ಪುನರಚ್ಚರಿಸಿದೆ. ಬಳಿಕ ರಿಟ್ ಅರ್ಜಿಯನ್ನು ಸಂಪೂರ್ಣವಾಗಿ ಹೈಕೋರ್ಟ್ ವಜಾಗೊಳಿಸಿದೆ. ಜಲಮಂಡಳಿಯ ಡಿಮ್ಯಾಂಡ್ ನೋಟಿಸ್‌ಗಳನ್ನು ಎತ್ತಿ ಹಿಡಿದಿದೆ. 1.01 ಕೋಟಿ ರೂ. ಮರುಪಾವತಿಯ ಶಾಲೆಯ ಬೇಡಿಕೆಯನ್ನು ತಿರಸ್ಕರಿಸಿ, ಶುಲ್ಕದ ಲೆಕ್ಕಾಚಾರದಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಮಾತ್ರ ಕಾಯ್ದೆಯ ಸೆಕ್ಷನ್ 120 ರ ಅಡಿಯಲ್ಲಿ ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಲು ಅರ್ಜಿದಾರರಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications