Get Updates
Get notified of breaking news, exclusive insights, and must-see stories!

Water: ಕಾವೇರಿ ನೀರಿನ ಅಕ್ರಮ ಸಂಪರ್ಕ ಪಡೆದ 'ಪಿಜಿ'ಗಳ ವಿರುದ್ಧ ಸಮರ: BWSSB

ಬೆಂಗಳೂರು, ಏಪ್ರಿಲ್ 05: ಬೆಂಗಳೂರಿನ ಜಲಮಂಡಳಿಯು ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ ಪಡೆದ 'ಪಿಜಿ' ಗಳ (ಪೇಯಿಂಗ್ ಗೆಸ್ಟ್) ವಿರುದ್ಧ ಸಮರ ಸಾರಿದೆ. ಅಕ್ರಮ ಸಂಪರ್ಕಗಳ ಪತ್ತೆ ಮಾಡಿ ವಾರದೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಶುಕ್ರವಾರ 'ನೇರ ಫೋನ್ ಇನ್' ಕಾರ್ಯಕ್ರಮ ನಡೆಸಿದ ಜಲಮಂಡಳಿ ಅಧ್ಯಕ್ಷರು, ನೀರು ಮತ್ತು ಒಳಚರಂಡಿ ಕುರಿತ ವಿವಿಧ ಅಹವಾಲುಗಳನ್ನು ಆಲಿಸಿದರು. ಸಾರ್ವಜನಿಕರು ತಮ್ಮ ವಲಯ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ನೀಡಿ ನೇರವಾಗಿ ಪರಿಹಾರ ಪಡೆದುಕೊಂಡರು.

BWSSB Will Take Cction Against PGs in Bengaluru that are Unlawfully Get Connected of Cauvery water

'ಪಿಜಿ'ಗಳ ವಿರುದ್ಧ ಕ್ರಮಕ್ಕೆ ಸೂಚನೆ

ನಗರದ ಕಾಡುಗೋಡಿ ವಾರ್ಡ್ ಅಂಬೇಡ್ಕರ್ ನಗರದಲ್ಲಿ ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಪಡೆದಿರುವ 43 ಜನರು ಪಿಜಿಗಳನ್ನು ನಡೆಸುತ್ತಿದ್ದಾರೆ. ಈ ಕುರಿತು ಅಲ್ಲಿನ ನಿವಾಸಿಯೊಬ್ಬರು ಜಲಮಂಡಳಿ ಅಧ್ಯಕ್ಷರಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಅಧ್ಯಕ್ಷರು, ನಗರದ ಹಲವಾರು ಭಾಗಗಳಿಂದ ಇಂತಹ ದೂರುಗಳು ಬರುತ್ತಿವೆ. ವಾಣಿಜ್ಯ ಉದ್ದೇಶದ ಸಂಪರ್ಕ ಪಡೆದುಕೊಂಡು ಪಿಜಿಗಳನ್ನು ನಡೆಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅನಧಿಕೃತವಾಗಿ ನೀರಿನ ಮತ್ತು ಒಳಚರಂಡಿ ಸಂಪರ್ಕ ಪಡೆದುಕೊಳ್ಳುವುದು ಹಾಗೂ ಆ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಒಂದು ವೇಳೆ ಅಕ್ರಮ ಸಂಪರ್ಕ ಪಡೆದಿದ್ದರೆ ಅದರಿಂದ ಜಲಮಂಡಳಿಗೆ ನಷ್ಟವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ಒಂದು ವಾರದೊಳಗೆ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹೇಳಿದರು.

BWSSB Will Take Cction Against PGs in Bengaluru that are Unlawfully Get Connected of Cauvery water

ಸಲ್ಲಿಕೆಯ ದೂರುಗಳನ್ನು ಮೊದಲು ಪರಿಹರಿಸಿ

ಇಂದು ದಾಖಲಾದ ದೂರಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಇದನ್ನ ಖಚಿತ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ದೂರುಗಳನ್ನು ಲಿಖಿತ ರೂಪದಲ್ಲಿ ಸಂಬಂಧ ಪಟ್ಟ ಮುಖ್ಯ ಇಂಜಿನೀಯರ್ ಗಳಿಗೆ ಕಳುಹಿಸಿಕೊಡಬೇಕು. ಸಮಸ್ಯೆಗಳನ್ನು ಪರಿಹರಿಸಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ವಾರದೊಳಗೆ ವರದಿ ಸಲ್ಲಿಸಬೇಕು ಎಂದರು.

ಕೊಳವೆ ಬಾಗಿ ಆಳಕ್ಕೆ ಕೊರೆಸಲು ಮನವಿ

ಹಾರೋಹಳ್ಳಿಯ ಮಾಗಡಿ ರಸ್ತೆಯ ಬಳಿಯ ತುಂಗಾಭದ್ರಾ ಬಡಾವಣೆ ನಿವಾಸಿ ವಿದ್ಯಾ ಅವರು ಬೆಂಗಳೂರು ಜಲಮಂಡಳಿಯ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇನ್ನಷ್ಟು ಆಳಕ್ಕೆ ಕೊರೆಯಿಸಿದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಮೊದಲಿನಂತೆಯೇ ಹೆಚ್ಚಿನ ನೀರು ನಮ್ಮ ಬಡಾವಣೆ ಜನರಿಗೆ ಸಿಗುತ್ತದೆ. ಈ ಮೂಲಕ ಅನುಕೂಲವಾಗುತ್ತದೆ ಎನ್ನುವುದನ್ನು ಅಧ್ಯಕ್ಷರ ಗಮನಕ್ಕೆ ತಂದರು. ಇದೇ ವೇಳೆ ಕೊಳವೆ ಬಾವಿಗೆ ಅಗತ್ಯ ಪೈಪ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ವಿಲ್ಸನ್ ಗಾರ್ಡ್ ನ ಬಳಿಯ ಬಿಟಿಎಸ್ ರಸ್ತೆಯ ಬಳಿ ಜಲಮಂಡಳಿ ಪೈಪ್ ನಿಂದ ನೀರು ಸೋರಿಕೆಯಾಗುತ್ತಿದೆ ಎಂದು ವೀಣಾ ಅವರು ದೂರು ನೀಡಿದರು. ನೀರು ಸೋರಿಕೆಯ ತಡೆಯಲು ಇಂದೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅಧ್ಯಕ್ಷರು, ವಾರದೊಳಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ 1916 ಗೆ ದೂರು ನೀಡುವಂತೆ ವೀಣಾ ಅವರಿಗೆ ತಿಳಿಸಲಾಯಿತು.

ಇನ್ಮುಂದೆ ಪ್ರತಿ ಶುಕ್ರವಾರ 'ನೇರ ಫೋನ್‌ ಇನ್'

ನೀರು ಉಳಿತಾಯ ಹಾಗೂ ಅಂತರ್ಜಲ ವೃದ್ಧಿಗೆ ಜಲಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆಯೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ಮುಂದೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ಶುಕ್ರವಾರ ಅಧ್ಯಕ್ಷರು ಫೋನ್-ಇನ್ ಕಾರ್ಯಕ್ರಮ ನಡೆಸಲಿದ್ದು, ನೀರು ಮತ್ತು ಒಳಚರಂಡಿ ಸಮಸ್ಯೆ ಕುರಿತ ಅಹವಾಲುಗಳನ್ನು ಆಲಿಸಲಿದ್ದಾರೆ.

ನೇರ್ ಫೋನ್‌ ಇನ್ ಕಾರ್ಯಕ್ರಮದಲ್ಲಿ ಜಲಮಂಡಳಿ ಅಧ್ಯಕ್ಷರ ಜೊತೆಗೆ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ, ಮುಖ್ಯ ಎಂಜನಿಯರ್ ಗಳಾದ ಎಲ್.ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ್, ಅಪರ ಮುಖ್ಯ ಎಂಜನಿಯರ್ ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+