ಬೆಂಗಳೂರು ಜಲಮಂಡಳಿ ವೆಬ್‌ಸೈಟ್‌ಗೆ ನಿತ್ಯ 14,000 ಹಿಟ್ಸ್!
ಬೆಂಗಳೂರು, ಜೂ. 15 : ಗ್ರಾಹಕ ಸ್ನೇಹಿಯಾಗಲು ಬೆಂಗಳೂರು ಜಲಮಂಡಳಿ ಸಿದ್ಧತೆ ನಡೆಸಿದ್ದು, ನೂತನ ವೆಬ್‌ಸೈಟ್‌ಅನ್ನು ಆರಂಭಮಾಡಲಿದೆ. ಹೊಸದಾಗಿ ನೀರಿನ ಸಂಪರ್ಕ ಪಡೆಯಲು ವೆಬ್‌ಸೈಟ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಜೂನ್ ಅಂತ್ಯದ ವೇಳೆಗೆ mybwssb.com ವೆಬ್‌ಸೈಟ್ ಉದ್ಘಾಟನೆಯಾಗಲಿದೆ. ಪುಣೆ ಮೂಲದ ಕಂಪನಿಯೊಂದು ವೆಬ್‌ಸೈಟ್ ನಿರ್ವಹಣೆ ಮಾಡಲಿದ್ದು, 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಜಲಮಂಡಳಿಯ ಸೇವೆ, ಬಿಲ್, ಪಾವತಿ, ಹೊಸ ನೀರಿನ ಸಂಪರ್ಕ ಮುಂತಾದವುಗಳ ಎಲ್ಲಾ ವಿವರಗಳು ನೂತನ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ.

ಜಲಮಂಡಳಿಯ ಹಿರಿಯ ಅಧಿಕಾರಿಗಳ ತಂಡವೊಂದನ್ನು ವೆಬ್‌ಸೈಟ್‌ಗೆ ನಿರ್ವಹಣೆಗೆ ನೇಮಿಸಲಾಗುತ್ತದೆ. ಹೊಸ ವಿಷಯಗಳನ್ನು ಸೇರಿಸುವುದು, ದೂರುಗಳ ಪರಿಶೀಲನೆ ಸೇರಿದಂತೆ ವಿವಿಧ ವಿಷಯಗಳ ಉಸ್ತುವಾರಿಯನ್ನು ಈ ತಂಡ ನೋಡಿಕೊಳ್ಳಲಿದೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]
ಹೊಸ ವೆಬ್‌ಸೈಟ್ ಆರಂಭವಾದರೂ ಈಗಿರುವ http://www.bwssb.org/ ಕೆಲವು ತಿಂಗಳ ಮಟ್ಟಿಗೆ ಕಾರ್ಯ ನಿರ್ವಹಣೆ ಮಾಡಲಿದೆ. ನಂತರ ಜನರು mybwssb.com ವೆಬ್‌ಸೈಟ್ ಬಳಕೆ ಮಾಡಬೇಕಾಗಿದೆ. ಸದ್ಯ, ಜಲಮಂಡಳಿ ವೆಬ್‌ಸೈಟ್‌ಗೆ ನಿತ್ಯ 14,000 ಜನರು ಭೇಟಿ ನೀಡುತ್ತಿದ್ದಾರೆ. [ಬೆಂಗಳೂರು ಬಿಟ್ಟು ಬೇರೆ ಜಿಲ್ಲೆಯವರು ಈ ಸುದ್ದಿ ಓದಿ]
ನೀರಿನ ಸಂಪರ್ಕಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು, ನೀರಿನ ಪೂರೈಕೆ ಸ್ಥಗಿತದ ಕುರಿತ ಮಾಹಿತಿಗಳು, ಜಲ ಮಂಡಳಿ ಬಿಲ್ ಪಾವತಿ ಸೇರಿದಂತೆ ವಿವಿಧ ಸೇವೆಗಳನ್ನು ಹೊಸ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಜೂನ್ ಅಂತ್ಯದ ವೇಳೆಗೆ ನೂತನ ವೆಬ್‌ಸೈಟ್ ಕಾರ್ಯಾರಂಭ ಮಾಡಲಿದೆ.












Click it and Unblock the Notifications