Bengaluru Property: ಬೆಂಗಳೂರಲ್ಲಿ ಭೂಮಿ & ಜಾಗ ಖರೀದಿ: "ರಿಯಾಲಿಟಿ ಚೆಕ್‌"ಗೆ ಇದು ಬೆಸ್ಟ್‌ ಟೈಮ್‌ ?!

Bengaluru Property: ಬೆಂಗಳೂರು ಇಲ್ಲವೇ ಕರ್ನಾಟಕದ ಯಾವುದೇ ಭಾಗದಲ್ಲಿ ಪ್ರಾಪರ್ಟಿ ಹಾಗೂ ಜಾಗ ಖರೀದಿ ಮಾಡುವುದಕ್ಕೆ ಇಲ್ಲೊಂದು ಬೆಸ್ಟ್‌ ಟಿಪ್ಸ್‌ ಇದೆ. ಬೆಂಗಳೂರಿನಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇದೆ. ಆದರೆ, ಎಲ್ಲಿ ಭೂಮಿ ಹಾಗೂ ಜಾಗ ಖರೀದಿ ಮಾಡಿದರೆ ಒಳ್ಳೆಯದು, ಎಲ್ಲಿ ರಿಯಲ್‌ ಎಸ್ಟೇಟ್‌ ಹೂಡಿಕೆ ಮಾಡಿದರೆ ಲಾಭ ಎನ್ನುವ ಚರ್ಚೆ ನಡೆಯುತ್ತಲ್ಲೇ ಇರುತ್ತದೆ. ಬೆಂಗಳೂರಿನ ಯಾವುದೇ ಭಾಗದಲ್ಲಿ ಯಾವುದಾದರೂ ಹೊಸ ಯೋಜನೆಗಳು ಬಂದರೂ ಭೂಮಿಗೆ ಬಂಪರ್ ಬೆಲೆ ಬರುತ್ತದೆ. ಇದೀಗ ರಿಯಲ್‌ ಎಸ್ಟೇಟ್‌ ವಿಚಾರದಲ್ಲಿ ಈ ಸರಳ ವಿಷಯವನ್ನು ನೋಡಿದರೆ ಸಾಕು ಅಂತಿದ್ದಾರೆ ನೆಟ್ಟಿಗರು ಅದೇನು ಎನ್ನುವ ಡೀಟೆಲ್ಸ್‌ ಇಲ್ಲಿದೆ.

ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ ನಿಜ. ಆದರೆ, ಎಲ್ಲಿ ಭೂಮಿ ಖರೀದಿ ಮಾಡಬೇಕು ಹಾಗೂ ಎಲ್ಲಿ ಖರೀದಿ ಮಾಡಬಾರದು ಎನ್ನುವ ಬಗ್ಗೆ ಜನರಲ್ಲಿ ಇಂದಿಗೂ ಗೊಂದಲ ಇದ್ದೇ ಇದೆ. ಬೆಂಗಳೂರಿನಲ್ಲಿ ಭಾರೀ ಮಳೆಯಾದ ಮೇಲೆ ಜನ ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿ ಜನ ಪರದಾಡಿದ್ದಾರೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಈಗ ಮಳೆಯಿಂದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ.

Buying Land amp amp Plots in Bengaluru Rain Season Best Time for Reality Check

ನೀವು ಎಲ್ಲಿಯಾದರೂ ಭೂಮಿ ಅಥವಾ ಜಾಗವನ್ನು ಖರೀದಿ ಮಾಡಬೇಕು ಎಂದಾದರೆ, ಸಿಂಪಲ್‌ ಆ ಜಾಗ ಅಥವಾ ಪ್ರದೇಶಕ್ಕೆ ಮಳೆಗಾಲದಲ್ಲಿ ಭೇಟಿ ನೀಡಿದರೆ ಸಾಕು ನಿಮಗೆ ಆ ಜಾಗದ ಎಲ್ಲಾ ವಿಷಯಗಳೂ ತಿಳಿಯಲಿದೆ. ಇದೊಂದು ಅತ್ಯುತ್ತಮ ರಿಯಲ್ ಎಸ್ಟೇಟ್‌ನ ಸಿಂಪಲ್‌ ಪರೀಕ್ಷೆ. ನೀವು ಜಾಹೀರಾತು ಅಥವಾ ಮತ್ಯಾವುದೇ ವೆಬ್‌ಸೈಟ್‌ ಪರೀಕ್ಷೆ ಮಾಡುವುದಕ್ಕಿಂತ ಸಿಂಪಲ್‌ ಹಾಗೂ ಉತ್ತಮ ಎನ್ನುವ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಜೋರಾಗಿದೆ.

ಆಸ್ತಿ ಖರೀದಿ ಮಾಡುವುದಕ್ಕೆ ಮುಂಚೆ ಮಳೆಗಾಲದಲ್ಲಿ ಭೇಟಿ ನೀಡಿ, ಒಳಚರಂಡಿ ಹಾಗೂ ಡ್ರೈನೇಜ್‌ ಸಿಸ್ಟಂಗಳನ್ನು ಪರಿಶೀಲನೆ ಮಾಡಿ ಇಷ್ಟು ನೋಡಿದರೆ ಸಾಕು ನೀವು ಆಸ್ತಿ ಖರೀದಿ ಮಾಡಬೇಕೋ ಬೇಡವೋ ಅಂತ ತಿಳಿಯಲಿದೆ. ಸುಮ್ಮನೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟುವುದಕ್ಕಿಂತಲೂ ಇದೊಂದು ಬೆಸ್ಟ್‌ ಆಪ್ಷನ್ ಅಂತ ನೆಟ್ಟಿಗರು ಹೇಳಿದ್ದಾರೆ. ಅಲ್ಲದೇ ರಿಯಲ್‌ ಎಸ್ಟೇಟ್‌ ತಜ್ಞರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಯಾವೆಲ್ಲಾ ಪ್ರದೇಶಗಳು ಹೆಚ್ಚು ಪ್ರವಾಹ ಪೀಡಿತವಾಗಿವೆ. ಅಲ್ಲದೇ ಯಾವ ಭಾಗದಲ್ಲಿ ಭೂಮಿ, ಮನೆ ಹಾಗೂ ಜಾಗವನ್ನು ಖರೀದಿ ಮಾಡಬಾರದು ಎನ್ನುವ ಬಗ್ಗೆ ಜನ ರಿಯಾಕ್ಟ್‌ ಮಾಡುತ್ತಿದ್ದಾರೆ. ಸರ್ಜಾಪುರ ರೋಡ್‌, ವರ್ತೂರು, ಐಐಎಂ ಹಾಗೂ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಭೂಮಿ ಅಥವಾ ಜಾಗ ಖರೀದಿ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಅದರೊಂದಿಗೆ ಆ ಪ್ರದೇಶ ಮುಂದಿನ ದಿನಗಳಲ್ಲಿ ಹೇಗೆ ಇರಲಿದೆ. ಪ್ರವಾಹ ಪರಿಸ್ಥಿತಿಗಳು ಎದುರಾದರೆ ಉಳಿದುಕೊಳ್ಳಲು ಯೋಗ್ಯವೇ ಹಾಗೂ ಭಾರೀ ಮಳೆಯಾದರೆ ಆಸ್ತಿಗೆ ಹಾನಿಯಾಗಲಿದೆಯೇ ಎನ್ನುವುದನ್ನು ನೋಡಿಕೊಳ್ಳಿ ಎನ್ನುತ್ತಾರೆ ನೆಟ್ಟಿಗರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+