ತನ್ನ ಜ್ಯುವೆಲ್ಲರಿ ಮ್ಯಾನೇಜರನ್ನೇ ಕಿಡ್ನಾಪ್ ಮಾಡಿದ್ರಂತೆ ಕೆ.ಪಿ ನಂಜುಂಡಿ
ಉದ್ಯಮಿ ಕೆ.ಪಿ ನಂಜುಂಡಿ ವಿರುದ್ಧ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿದೆ. ತನ್ನ ಮಾಲಿಕತ್ವದ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ನ ಮ್ಯಾನೇಜರನ್ನೇ ಕಿಡ್ನ್ಯಾಪ್ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ಬೆಂಗಳೂರು, ಫೆಬ್ರವರಿ 23: ಉದ್ಯಮಿ ಕೆ.ಪಿ ನಂಜುಂಡಿ ವಿರುದ್ಧ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿದೆ. ತನ್ನ ಮಾಲಿಕತ್ವದ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ನ ಮ್ಯಾನೇಜರನ್ನೇ ಕಿಡ್ನ್ಯಾಪ್ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ವಿಜಯ್ ಕುಮಾರ್ ಪತ್ನಿ ಅಲಮೇಲು ತನ್ನ ಗಂಡನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಕೆ.ಪಿ ನಂಜುಂಡಿ ಹಾಗೂ ಅವರ ಸ್ನೇಹಿತರಾದ ರಾಜನ್, ರಾಮಕೃಷ್ಣ, ರಾಜು, ಕಾರ್ಯ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.[ಶಶಿಕಲಾ ಜೈಲ್ ಫ್ರೆಂಡ್ ಸೈನೈಡ್ ಮಲ್ಲಿಕಾ ಹಿಂಡಲಗಾ ಜೈಲಿಗೆ ಶಿಫ್ಟ್]

ದೂರಿನಲ್ಲಿ ಅಲಮೇಲು, ನನ್ನ ಪತಿ ವಿಜಯ್ ಕುಮಾರ್ ಗೆ ನಂಜುಂಡಿ ಅವರ ಸಕಲ ಅಕ್ರಮಗಳೂ ತಿಳಿದಿವೆ. ಎಲ್ಲಿ ಅದನ್ನು ಬಹಿರಂಗಪಡಿಸುತ್ತಾರೋ ಎಂಬ ಭಯದಲ್ಲಿ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್ ಮಾಡಿ ಮೂರು ದಿನಗಳಿಂದ ಮೈಸೂರಿನಲ್ಲಿ ಕೂಡಿಹಾಕಿದ್ದು, ಪತಿಗೆ ಅನ್ನ ನೀರು ಸಹ ನೀಡದೆ ಪೀಡಿಸಿದ್ದಾರೆ," ಎಂದು ಉಲ್ಲೇಖಿಸಿದ್ದಾರೆ.[ಬೆಂಗಳೂರಿನ ಶಾಲೆಯೊಂದರಲ್ಲಿ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ]

ಈ ಕುರಿತು ಪ್ರತಿಕ್ರಿಯಿಸಿದ ಉದ್ಯಮಿ ಕೆ.ಪಿ ನಂಜುಂಡಿ, "ವಿಜಯ್ ಕುಮಾರ್ ಮೈಸೂರಿನಲ್ಲಿ ಮ್ಯಾನೇಜರ್ ಆಗಿದ್ದಾಗ 40 ಗ್ರಾಂ ಚಿನ್ನದ ಸರ ಕಳ್ಳತನವಾಗಿತ್ತು. ಅಲ್ಲದೆ ಆತ ಹುಬ್ಬಳ್ಳಿಯಲ್ಲಿದ್ದಾಗಲೂ ಅಲ್ಲೂ ಚಿನ್ನ ಕಳ್ಳತನವಾಗಿತ್ತು. ಕಳ್ಳತನ ಮಾಡಿರುವ ಬಗ್ಗೆ ದಾಖಲೆ ಇದೆ. ಈ ಬಗ್ಗೆ ದೂರು ಕೊಡಬೇಡಿ ಎಂದು ವಿಜಯ್ ಕುಮಾರ್ ಮನವಿ ಮಾಡಿದ್ದನು. ಹೀಗಾಗಿ ಮಾನವೀಯತೆ ಮೇರೆಗೆ ದೂರು ನೀಡಿರಲ್ಲಿಲ್ಲ," ಎಂದು ತಿಳಿಸಿದ್ದಾರೆ. ವಿಜಯ್ ಕುಮಾರ್ ಮೈಸೂರು ಶಾಖೆಯ ನಮ್ಮ ಮ್ಯಾನೇಜರ್ ಆಗಿದ್ದು, ಅವರನ್ನ ಕಿಡ್ನ್ಯಾಪ್ ಮಾಡಿಲ್ಲ ಎಂದು ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ನ ಮಾಲೀಕ ನಂಜುಂಡಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಬ್ಲಾಂಕ್ ಚೆಕ್ ಅನ್ನೂ ಸಹ ವಿಜಯ್ ಕುಮಾರ್ ಬಳಸಿಕೊಂಡಿದ್ದಾರೆ. ಹೀಗಿರುವಾಗ ನಮ್ಮ ಮೇಲೆಯೇ ಅವರ ಪತ್ನಿ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications