Get Updates
Get notified of breaking news, exclusive insights, and must-see stories!

Business License: ಬೆಂಗಳೂರಲ್ಲಿ ಬಿಸಿನೆಸ್ ಲೈಸೆನ್ಸ್ ಬಗ್ಗೆ ಮಹತ್ವದ ಅಪ್ಡೇಟ್ಸ್‌ ಕೊಟ್ಟ ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಉದ್ದಿಮೆ ಪರವಾನಿಗೆಗೆ / Business license ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ ಕೊಟ್ಟಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಲ್ಲಿನ ಉದ್ದಿಮೆಗಳಿಗೆ ಈ ನಿಯಮವು ಅನ್ವಯಿಸಲಿದೆ. 2026-27ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಹತ್ವದ ಅಪ್ಡೇಟ್ಸ್‌ ಕೊಟ್ಟಿದ್ದಾರೆ.

ಏಪ್ರಿಲ್ 1ರ ನಂತರ ಉದ್ದಿಮೆ ಪರವಾನಿಗೆ ಶುಲ್ಕದ ಮೇಲೆ ಶೇ100 ರಷ್ಟು ದಂಡದ ಮೊತ್ತದೊಂದಿಗೆ ಪರವಾನಿಗೆ ಪಡೆಯಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ತಿಳಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 2026-27ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಕಾರ್ಯಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಫೆಬ್ರವರಿ 2ರಂದು ಸುತ್ತೋಲೆ ಹೊರಡಿಸಿದ್ದಾರೆ.

Business License

1. ಉದ್ದಿಮೆದಾರರ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ (ಏಪ್ರಿಲ್ ನಿಂದ ಮಾರ್ಚ್) ನವೀಕರಣ ಮಾಡಲು ಸೂಚಿಸಬಹುದಾಗಿದೆ.

2. ನವೀಕರಣ ಶುಲ್ಕವನ್ನು ಉದ್ದಿಮೆದಾರರು ಕೋರುವ ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸಿಕೊಳ್ಳಲು ಸೂಚಿಸಬಹುದಾಗಿರುತ್ತದೆ.

3. ಕಳೆದ ಸಾಲಿನಂತೆ ಉದ್ದಿಮೆ ಲೈಸೆನ್ಸ್ ಶುಲ್ಕವನ್ನು ಆನ್‌ಲೈನ್ ಮುಖಾಂತರ ಹಾಗೂ ಬ್ಯಾಂಕ್ ಚಲನ್ ಮೂಲಕ ಕೆನರಾ ಬ್ಯಾಂಕಿನಲ್ಲಿ ಪಾವತಿಸಿಕೊಳ್ಳಬಹುದು.

4. ದಿನಾಂಕ 01-02-2026 00 28-02-2026 ರವರೆಗೆ ದಂಡವಿಲ್ಲದೇ ಲೈಸೆನ್ಸ್ ಶುಲ್ಕವನ್ನು ಪಾವತಿಸಿಕೊಳ್ಳಬೇಕಿದೆ.

5. ದಿನಾಂಕ: 01-03-2026 ರಿಂದ 31-03-2026 ರವರೆಗೆ ಪರವಾನಿಗೆ ನವೀಕರಣ ಶುಲ್ಕದ ಶೇಕಡಾ 25% ರಷ್ಟು ದಂಡ ಮೊತ್ತದೊಂದಿಗೆ‌ ಲೈಸೆನ್ಸ್ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ.

6. ದಿನಾಂಕ : 01-04-2026 ರಿಂದ ಉದ್ದಿಮೆ ಲೈಸೆನ್ಸ್ ಶುಲ್ಕದ ಶೇಕಡಾ 100% ರಷ್ಟು ದಂಡದ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ.

7. ಲೈಸೆನ್ಸ್ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮುಖಾಂತರವೇ ಮಾಡಲು ಸೂಚಿಸಬಹುದಾಗಿರುತ್ತದೆ.

ವಲಯ ವರ್ಗೀಕರಣ ನಿಯಮಾವಳಿಯಂತೆ ಕ್ರಮ: ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಸತಿ ಪ್ರದೇಶದಲ್ಲಿ 40 ಅಡಿ ಅಗಲಕ್ಕಿಂತ ಕಡಿಮೆ ಇರುವ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆ ಲೈಸೆನ್ಸ್‌ ಅನ್ನು ತಡೆಹಿಡಿದು ಹಿಂಬರಹ ನೀಡಿ ತಿರಸ್ಕರಿಸುವುದಕ್ಕೆ ಸೂಚನೆ ನೀಡಲಾಗಿದೆ. ವಸತಿ ಪ್ರದೇಶದಲ್ಲಿ 40 ಅಡಿ ಅಗಲಕ್ಕಿಂತ ಜಾಸ್ತಿಯಿರುವ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ಯಮಗಳನ್ನು ಮತ್ತು ನಿಗದಿಪಡಿಸಿರುವ ಉದ್ದಿಮೆಗಳಿಗೆ ಮಾತ್ರ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ, ಇತರೆ ಉದ್ದಿಮಗಳ ಪರವಾನಿಗೆ ನವೀಕರಣವನ್ನು ತಡೆಹಿಡಿದು ಹಿಂಬರಹ ನೀಡಿ ತಿರಸ್ಕರಿಸುವುದಕ್ಕೆ ಸೂಚನೆ ನೀಡಲಾಗಿದೆ.

ಕಟ್ಟಡ ನಿಯಮಾವಳಿ ಅನುಸಾರ ಕ್ರಮ

ಉದ್ದಿಮೆಯು ಅನಧಿಕೃತವಾಗಿ ನಕ್ಷೆ ಉಲ್ಲಂಘನೆಯಾಗಿ ನಿರ್ಮಿಸಿರುವ ಕಟ್ಟಡಗಳಲ್ಲಿ ಪೂರ್ತಿ ಅಥವಾ ಭಾಗಶಃ ಬಳಸುತ್ತಿರುವ ಬಗ್ಗೆ ದೂರುಗಳಿದ್ದಲ್ಲಿ, ವಾಹನ ನಿಲುಗಡೆ ಪ್ರದೇಶದಲ್ಲಿ ಅಥವಾ ರೂಫ್ ಟಾಪ್‌ಗಳಲ್ಲಿ ನಡೆಸುತ್ತಿದ್ದಲ್ಲಿ ಪರವಾನಿಗೆ ನವೀಕರಣವನ್ನು ತಡೆಹಿಡಿದು ಹಿಂಬರಹ ನೀಡಿ ತಿರಸ್ಕರಿಸಲು ತಿಳಿಸಬಹುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಹೊಸ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ಘನತ್ಯಾಜ್ಯ ಮತ್ತು ಸಾರ್ವಜನಿಕ ಆರೋಗ್ಯ ನಿಯಮಾವಳಿಯಂತೆ:

1. 100 ಕೆ.ಜಿ.ಗಿಂತ ಹೆಚ್ಚಾಗಿ ತ್ಯಾಜ್ಯ ಉತ್ಪತ್ತಿ ಮಾಡುವ ಉದ್ದಿಮೆಗಳಿಂದ ಮೂಲ ಸ್ಥಳದಲ್ಲಿ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆದು ಅಥವಾ Empaneled Vendorಗೆ ನೀಡುತ್ತಿದ್ದ ಪಕ್ಷದಲ್ಲಿ ಎಲ್ಲಾ ವಿಧದ ತ್ಯಾಜ್ಯಗಳ ವಿಲೇವಾರಿಗೆ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಪ್ರತಿಯನ್ನು ಪಡೆದು ನವೀಕರಿಸುವುದು.

2. ಉಲ್ಲೇಖ ಪತ್ರದಂತೆ ಕಛೇರಿ ಆದೇಶವನ್ನು ಪಾಲಿಸುತ್ತಿರುವ ಬಗ್ಗೆ ಕಲ್ಯಾಣ ಮಂಟಪ ಉದ್ದಿಮೆದಾರರಿಂದ ಲಿಖಿತ ಹೇಳಿಕೆ ಪಡೆದು ಸದರಿ ಕಛೇರಿ ಆದೇಶವನ್ನು ಸ್ಥಳದಲ್ಲಿ ಪ್ರದರ್ಶಿಸಿರುವ ಛಾಯಾ ಚಿತ್ರವನ್ನು ಪಡೆದು ನವೀಕರಿಸುವುದು.

3. ಹೋಟೆಲ್ / ರೆಸ್ಟೋರೆಂಟ್ ಮತ್ತು ಆಹಾರ ಸರಬರಾಜು ಮಾಡುವ ಉದ್ದಿಮೆಗಳು ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸುವ ಕುರಿತು ಲಿಖಿತ ಹೇಳಿಕೆ ಪಡೆದುಕೊಳ್ಳುವುದು.

4. ಉದ್ದಿಮೆ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಹಾಗೂ ಒಮ್ಮೆ ಬಳಸಿ ಬಿಸಾಡುವ ಸಾಮಗ್ರಿಗಳನ್ನು ಉಪಯೋಗಿಸದಂತೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲು ಸೂಚಿಸುವುದು.

5. ಉದ್ದಿಮೆ ಸ್ಥಳಗಳಲ್ಲಿ ಹಸಿ ಕಸಕ್ಕೆ (ಹಸಿರು ಬಣ್ಣ) ಮತ್ತು ಒಣ ಕಸಕ್ಕೆ (ನೀಲಿ ಬಣ್ಣ) ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಟ್ಟುಕೊಂಡು ವೈಜ್ಞಾನಿಕವಾಗಿ ಅದನ್ನು ವಿಲೇವಾರಿ ಮಾಡುವುದು.

ಈ ನಿಯಮದ ಅನುಸಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಬೆಂಗಳೂರು ನಗರ ಪಾಲಿಕೆಗಳ ಆರೋಗ್ಯಾಧಿಕಾರಿಗಳು, ಉಪ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮೇಲಿನ ಅಂಶಗಳನ್ನು ಪರಿಗಣಿಸಿ, 2026-27ನೇ ಸಾಲಿನ ನವೀಕರಣವನ್ನು ಹಮ್ಮಿಕೊಳ್ಳಲು ಸೂಚಿಸಿದೆ. ಅಲ್ಲದೆ ಪಾಲಿಕೆಯ ಉದ್ದಿಮೆ ಪರವಾನಿಗೆ ತಂತ್ರಾಂಶದಲ್ಲಿ 2026-27 ನೇ ಸಾಲಿನ ನವೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+