Budget 2024: ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ನಿರೀಕ್ಷೆಗಳೇನು? ಪಟ್ಟಿ
ಬೆಂಗಳೂರು, ಜುಲೈ 21: ಕೇಂದ್ರ ಸರ್ಕಾರದ ಅಧಿಕಾರಕ್ಕೆ ಬಂದ ಬೆನ್ನಲ್ಲೆ ಬಜೆಟ್ ಮೇಲಿನ ಅಧಿವೇಶನ ಆರಂಭಿಸಿದೆ. ಇದೇ ಜುಲೈ 23ರಂದು 2024-25ರ ಬಜೆಟ್ ಮಂಡನೆ ಆಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ ಬಜೆಟ್ ಮುಂಗಡಪತ್ರ ಮಂಡಿಸಲಿದ್ದಾರೆ. ಇತರ ರಾಜ್ಯದಂತೆ ಅತ್ಯಧಿಕ ತೆರಿಗೆ ಪಾವತಿಸುವ ಕರ್ನಾಟಕವು ಹಲವು ಭರವಸೆಗಳನ್ನು ಹೊಂದಿದೆ.
ಕರ್ನಾಟಕದಲ್ಲಿ ತೆರಿಗೆದಾರರು, ಉದ್ಯಮ ಕ್ಷೇತ್ರ, ರೈತರು, ಕೈಗಾರಿಕೆಗಳು, ಶಿಕ್ಷಣ, ಮಹಿಳೆ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಕ್ಷೇತ್ರಗಳ ಕಾರ್ಮಿಕರು, ಉದ್ಯೋಗದಾರರು ಸಾಕಷ್ಟು ಆಕಾಂಕ್ಷೆಗಳು, ತಮಗೂ ಬಜೆಟ್‌ನಲ್ಲಿ ಕೊಡುಗೆ ಸಿಗಬಹುದೆಂದು ಆಸೆಯಿಂದ ಬಜೆಟ್‌ನತ್ತ ದೃಷ್ಟಿ ನೆಟ್ಟಿದ್ದಾರೆ.

ಈ ಕುರಿತು ಬಹಿರಂಗವಾಗಿ ನಿರೀಕ್ಷೆಗಳನ್ನು ಹೊರ ಹಾಕಿರುವು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘವು ಒಂದಷ್ಟು ಬೇಡಿಕೆಗಳನ್ನು ಕೇಂದ್ರದ ಮುಂದೆ ಇಟ್ಟಿದೆ. ಈ ಕುರಿತು ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಬೇಡಿಕೆ, ನಿರೀಕ್ಷೆಗಳು
* ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರವಾಸಿಗರು ನಿರ್ವಹಿಸುವ ವಾಹನಗಳ ಮೇಲಿನ ಜಿಎಸ್‌ಟಿ ಇಳಿಸಿ. ಇಧನವನ್ನು ಜಿಎಸ್‌ಟಿ ನೀತಿಯೊಳಗೆ ತರಬೇಕು.
* ಟಯರ್ ಮತ್ತು ವಾಹನ ಬಿಡಿಭಾಗಗಳ ಮೇಲಿನ ಜಿಎಸ್‌ಟಿ ಶೇಕಡಾ 28 ರಿಂದ ಶೇಕಡಾ 18ಕ್ಕೆ ಇಳಿಸುವ ಮೂಲಕ ತಯಾರಿಕಾ ಸಂಸ್ಥೆಗಳಿಗೆ ಹಾಗೂ ಸಾರಿಗೆ ವ್ಯವಸಾಯಕ್ಕೆ ಅನುಕೂಲ ವಾತಾವರಣ ಕಲ್ಪಿಸಬೇಕಿದೆ.
* ಹೈಬ್ರಿಡ್ ವಾಹನಗಳು ಮತ್ತು ಹೊಸ ತಲೆಮಾರಿನ ಪ್ರವಾಸಿ ವಾಹನಗಳನ್ನು ಪರಿಗಣಿಸಿ ಇವಿ ವಾಹನಗಳಿಗೆ ಒದಗಿಸುವ ಫೇಮ್-2 ಸಬ್ಸಿಡಿಗಳ ವಿಸ್ತರಣೆ ಹೈಬ್ರಿಡ್ ವಾಹನಗಳಿಗೂ ದೊರಕುವಂತೆ ಮಾಡಬೇಕು.
* ಎಲ್ಲಾ ಪ್ರವಾಸಿ ಮತ್ತು ಆಧ್ಯಾತ್ಮಿಕ ಸ್ಥಳಗಳನ್ನು ಸಂಪರ್ಕಿಸುವ ಸಮಗ್ರ ಮಲ್ಟಿಮೋಡಲ್ ಎಕ್ಸ್‌ಪ್ರೆಸ್‌ವೇ ನಿರ್ಮಿಸಬೇಕೆಂದು ಬೇಡಿಕೆ ಇಟ್ಟಿದೆ.
ಕರ್ನಾಟಕ ರಾಜ್ಯ ಟ್ರಾವೆಲ್ಸ್ ವಲಯದ ಪರವಾದ ಹಾಗೂ ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದ ಒಂದಷ್ಟು ಘೋಷಣೆಗಳು, ಕೊಡುಗೆಗಳು ಜುಲೈ 23ರ ಬಜೆಟ್ 2024-25ರಲ್ಲಿ ಘೋಷಣೆ ಆಗಬಹುದೆಂಬ ಉತ್ಸುಕತೆಯಿಂದ ನಿರೀಕ್ಷಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications