Breaking News: ಜನಪ್ರಿಯ ನಟ, ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ

ಬೆಂಗಳೂರು, ಏಪ್ರಿಲ್ 29: ಜನಪ್ರಿಯ ನಟ, ನಿರ್ದೇಶಕ ಅರವಿಂದ್ ಕೌಶಿಕ್ ರನ್ನು ಪೊಲೀಸರು ಬಂಧಿಸಿದ್ದಾರೆ. ಕಮಲಿ ಧಾರಾವಾಹಿ ನಿರ್ಮಾಪಕ ರೋಹಿತ್ ನೀಡಿದ್ದ ದೂರಿನ ಮೇರೆಗೆ ವಯ್ಯಾಲಿಕಾವಲ್ ಪೊಲೀಸರು ಕೌಶಿಕ್ ರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

'ಕಮಲಿ' ಧಾರಾವಾಹಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದ ನಿರ್ಮಾಪಕ ರೋಹಿತ್.ಎಸ್, ತಮಗೆ ಸಿಗಬೇಕಾದ ರಿಟರ್ನ್ಸ್ ಸಿಕ್ಕಿಲ್ಲ ಎಂದು ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ ಮೊರೆ ಹೋಗಿದ್ದರು.

ಸರಿ ಸುಮಾರು 73 ಲಕ್ಷ ರು ಹೂಡಿಕೆ ಮಾಡಿದ್ದೇನೆ, ಆದರೆ, ಹಣ ಹಿಂತಿರುಗಿಸಿಲ್ಲ ಹಾಗೂ ಲಾಭಾಂಶವೂ ಸಿಕ್ಕಿಲ್ಲ ಎಂದು ರೋಹಿತ್ ದೂರು ನೀಡಿದ್ದರು. ಅರವಿಂದ್ ಕೌಶಿಕ್ ಹಾಗೂ ಧಾರಾವಾಹಿಗೆ ಸಂಬಂಧಿಸಿದಂತೆ ಇನ್ನಿತರರ ಮೇಲೆ ಐಪಿಸಿ ಸೆಕ್ಷನ್ 420 ಅನ್ವಯ ವಯ್ಯಾಲಿಕಾವಲ್ ಪೊಲೀಸರು ಪ್ರಕರಣಾ ದಾಖಲಿಸಿಕೊಂಡಿದ್ದರು.

ರೋಹಿತ್ ನೀಡಿದ್ದ ದೂರೇನು?:

28 ಮೇ 2018 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಸೀರಿಯಲ್ 'ಕಮಲಿ'. ಈ ಧಾರಾವಾಹಿಯನ್ನು ರೋಹಿತ್.ಎಸ್ ನಿರ್ಮಾಣ ಮಾಡಿದ್ದಾರೆ. ಮೊದಮೊದಲು 'ಕಮಲಿ' ಸಂಚಿಕೆಗಳ ಟೈಟಲ್ ಕಾರ್ಡ್ ನಲ್ಲಿ 'ನಿರ್ಮಾಪಕ: ರೋಹಿತ್.ಎಸ್' ಎಂದೇ ತೋರಿಸಲಾಗಿದೆ. ಬಳಿಕ ನನ್ನ ಹೆಸರನ್ನು ತೆಗೆದು ಹಾಕಲಾಗಿದೆ.

Breaking News: Bengaluru Police arrested Kannada film director Aravind Kaushik

'ಕಮಲಿ' ಧಾರಾವಾಹಿಗಾಗಿ ನಿರ್ದೇಶಕ ಅರವಿಂದ್ ಕೌಶಿಕ್ ರವರ ಸತ್ವ ಮೀಡಿಯಾಗೆ ರೋಹಿತ್ ಒಟ್ಟು 73 ಲಕ್ಷ ರೂಪಾಯಿಗಳನ್ನು ನೀಡಿದ್ದೆ. ಮನೆಯವರ ಒಡವೆಗಳನ್ನು ಅಡವಿಟ್ಟು, ಸಂಬಂಧಿಕರು ಮತ್ತು ಲೇವಾದೇವಿಯವರಿಂದ ಸಾಲ ಪಡೆದು 73 ಲಕ್ಷ ರೂಪಾಯಿಗಳನ್ನು ಹೊಂದಿಸಿದ್ದೆ. 287ನೇ ಸಂಚಿಕೆಯಿಂದ 'ಕಮಲಿ' ಧಾರಾವಾಹಿಯ ಟೈಟಲ್ ಕಾರ್ಡ್ ನಲ್ಲಿ ನಿರ್ಮಾಪಕ ರೋಹಿತ್ ಹೆಸರನ್ನು ಪ್ರಸ್ತಾಪಿಸಿಲ್ಲ. ಸಾಲದಕ್ಕೆ, ಧಾರಾವಾಹಿಯಿಂದ ಬಂದ ಲಾಭವನ್ನೂ ನೀಡಿಲ್ಲ ಎಂದು ರೋಹಿತ್ ದೂರಿದ್ದರು.

ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ, ನವೀನ್ ಸಾಗರ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ನಿರ್ಮಾಪಕ ರೋಹಿತ್ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದರು.

Bengaluru Police arrested Kannada film director Aravind Kaushik

ಸ್ಪಷ್ಟನೆ ನೀಡಿದ್ದ ಅರವಿಂದ್ ಕೌಶಿಕ್:
ಕಮಲಿ ಧಾರಾವಾಹಿ ಅಲ್ಲದೆ, ಹುಲಿರಾಯ, ಶಾರ್ದೂಲ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಅರವಿಂದ್ ಅವರು ನಟರಾಗಿ ಕೂಡಾ ಕಿರುತೆರೆ, ಬೆಳ್ಳಿತೆರೆಯಲ್ಲಿ ಜನಪ್ರಿಯರಾಗಿದ್ದಾರೆ.

ಈ ಹಿಂದೆ ಒನ್ಇಂಡಿಯಾದ ಸೋದರ ತಾಣ ಫಿಲ್ಮೀಬೀಟ್ ಕನ್ನಡ ತಂಡದ ಜೊತೆ ಮಾತನಾಡಿದ್ದ ಅರವಿಂದ್ ಕೌಶಿಕ್ ಹಣಕಾಸು ವ್ಯವಹಾರದ ಬಗ್ಗೆ ಸ್ಪಷ್ಟನೆ ನೀಡಿದ್ದರು.

Recommended Video

      ರಾಜಕೀಯಕ್ಕೆ ಬರೋದು ಬಿಡೋದು ಅವನಿಗೆ ಬಿಟ್ಟಿದ್ದು ! | Oneindia Kannada

      ''ಅವರು ಧಾರಾವಾಹಿಗೆ ಫೈನಾನ್ಸ್ ಹಾಕಿದ್ದರು. ಅವರಿಗೆ ಏನು ನೀಡಬೇಕೋ ಅದನ್ನು ನೀಡಿದ್ದೇವೆ. ಆದರೂ ಸುಮ್ಮನೆ ಈ ರೀತಿ ಮಾಡುತ್ತಿದ್ದಾರೆ. ತಮ್ಮ ಪ್ರಚಾರಕ್ಕಾಗಿ ನಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.'' ಎಂದು ನಿರ್ದೇಶಕ, ನಿರ್ಮಾಪಕ ಅರವಿಂದ ಕೌಶಿಕ್ ಘಟನೆಯ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ವಿವರಿಸಿದ್ದರು.

      ''ಫೈನಾನ್ಸ್ ಹಾಕಿದ್ದೇನೆ ಎಂಬ ಕಾರಣಕ್ಕೆ ಧಾರಾವಾಹಿಯ ಹಣಕಾಸಿನ ವ್ಯಾವಹಾರದ ಬಗ್ಗೆ ಕೇಳುತ್ತಿದ್ದರು. ಕೊನೆಗೆ ಇದ್ದಕ್ಕಿದ್ದ ಹಾಗೆ ಲೀಗನ್ ನೋಟಿಸ್ ಕಳುಹಿಸಿದರು. ಇವರು ಸಹ ನಿರ್ಮಾಪಕ ಎಂಬುದನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಅನಿಸಿ ಹೆಸರು ತೆಗೆದ್ವಿ. ಸಮಸ್ಯೆ ಬಗೆ ಹರಿಯುವವರೆಗೆ ಅವರ ಹೆಸರು ಮಾತ್ರವಲ್ಲ ಎಲ್ಲ ನಿರ್ಮಾಪಕರ ಹೆಸರನ್ನು ಹಾಕುವುದು ಬೇಡ ಎಂದು ಸುಮ್ಮನಾದ್ವಿ.'' - ಎಂದು ಅರವಿಂದ್ ಕೌಶಿಕ್ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+