ದಿಟ್ಟ ಅಧಿಕಾರಿ ಡಿ.ರೂಪಾ ಅವರಿಗೆ ಮತ್ತೆ ವರ್ಗಾವಣೆ ಭಾಗ್ಯ
ಬೆಂಗಳೂರು, ಜನವರಿ 01: ದಿಟ್ಟ ಅಧಿಕಾರಿ ಡಿ.ರೂಪಾ ಅವರಿಗೆ ಹೊಸ ವರ್ಷದಂದು ಸೇವಾ ಬಡ್ತಿ ಜೊತೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆ ಆಯುಕ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಡಿ.ರೂಪಾ ಅವರಿಗೆ ಐಜಿಪಿ ಆಗಿ ಬಡ್ತಿ ದೊರೆತಿದೆ. ಅವರು ಇನ್ನು ಮುಂದೆ ಅಡಿಶನಲ್ ಕಮಾಂಡೆಟ್ ಜನರಲ್, ಹೋಮ್ ಗಾರ್ಡ್ಸ್ ಮತ್ತು ಹೆಚ್ಚುವರಿ ನಿರ್ದೇಶಕಿಯಾಗಿ ನಾಗರಿಕ ಭದ್ರತೆ ಇಲಾಖೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಈ ವಿಷಯವನ್ನು ಡಿ.ರೂಪಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಕಾರಾಗೃಹ ಡಿಐಜಿ ಆಗಿದ್ದಾಗ ಅಕ್ರಮ ಆಸ್ತಿಗಳಿಕೆ ಆರೋಪಿ ತಮಿಳುನಾಡಿನ ಶಶಿಕಲಾ ಅವರಿಗೆ ಕಾರಾಗೃಹದಲ್ಲಿ ನೀಡಲಾಗುತ್ತಿದ್ದ ರಾಜಾತಿಥ್ಯದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ರಾಜ್ಯಾದ್ಯಂತ ಹೆಸರು ಮಾಡಿದ್ದರು. ಇದರಿಂದಾಗಿ ಸರ್ಕಾರದಲ್ಲಿ ಕೆಲವರ ಕೆಂಗಣ್ಣಿಗೂ ಗುರಿ ಆಗಿದ್ದರು.
ಶಶಿಕಲಾ ರಾಜಾತಿಥ್ಯ ವರದಿಯ ನಂತರ ಡಿ.ರೂಪಾ ಅವರನ್ನು ಸಂಚಾರ ವಿಭಾಗದ ಆಯುಕ್ತೆಯಾಗಿ ವರ್ಗಾಯಿಸಲಾಗಿತ್ತು. ಈಗ ಮತ್ತೆ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಇನ್ನು ಮುಂದೆ ಅವರು ನಾಗರಿಕ ಭದ್ರತೆ ಇಲಾಖೆಯ ಮಹಾನಿರ್ದೇಶಕಿಯಾಗಿ ಸೇವೆ ಸಲ್ಲಿಸಲಿದ್ದಾರೆ.












Click it and Unblock the Notifications