Brahmin Gene Controversy: ಉರ್ಸೋಣ ಬನ್ನಿ, "ಬ್ರಾಹ್ಮಿಣ್ ಜೀನ್" ಹ್ಯಾಷ್‌ಟ್ಯಾಗ್ ಟ್ರೆಂಡ್ ಯಾಕೆ ?
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅನುರಾಧಾ ತಿವಾರಿ ಎನ್ನುವ ಯುವತಿ ಮತ್ತೆ ಟ್ರೆಂಡ್‌ನಲ್ಲಿ ಇದ್ದಾರೆ. ಅನುರಾಧಾ ತಿವಾರಿ ಈಚೆಗೆ ಬ್ರಾಹ್ಮಿಣ್ ಜೀನ್ಸ್'(ಬ್ರಾಹ್ಮಣ ವಂಶವಾಹಿ) ಹ್ಯಾಷ್ ಟ್ಯಾಗ್‌ನಿಂದ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದರು. ಅವರ ಹ್ಯಾಷ್‌ಟ್ಯಾಗ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ವಿವಾದ ತಣ್ಣಗಾಗುವ ಮೊದಲೇ ಅವರು ಮತ್ತೊಂದು ಹೊಸ ಕಿಡಿಯನ್ನು ಹೊತ್ತಿಸಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ಬ್ರಾಹ್ಮಿಣ್ ಜೀನ್ಸ್ ಹ್ಯಾಷ್ ಟ್ಯಾಗ್‌ನಿಂದಲೇ ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದ ಅನುರಾಧ ಇದೀಗ ಮತ್ತೆ ಬ್ರಾಹ್ಮಿಣ್ ಜೀನ್ಸ್ ವಿಷಯದ ವಿಚಾರದಿಂದಲೇ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಬೆಂಗಳೂರಿನಿ ನಿವಾಸಿಯಾಗಿರುವ (ನೆಲೆಸಿರುವ) ಅನುರಾಧ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಬ್ರಾಹ್ಮಿಣ್ ಜೀನ್ಸ್ ಎಂದು ಹ್ಯಾಷ್‌ಟ್ಯಾಗ್ ಯೂಸ್ ಮಾಡಿದ್ದರು. ಅನುರಾಧ ಕಂಟೆಂಟ್ ಮಾರ್ಕೆಟಿಂಗ್‌ಗೆ ಸಂಬಂಧಪಟ್ಟಂತೆ ಖಾಸಗಿ ಕಂಪನಿಯೊಂದರಲ್ಲಿ ಸಿಇಒ ಆಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಇವರು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಪೋಸ್ಟ್‌ಗಳು ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿವೆ. ಈಚೆಗೆ ಒಂದು ಕೈಯಲ್ಲಿ ಎಳನೀರು ಹಿಡಿದುಕೊಂಡು ಮತ್ತೊಂದು ಕೈಯಿಯ ತೋಳ್ಬಲವನ್ನು ತೋರಿಸುವ ಪೋಟೋ ಶೇರ್ ಮಾಡಿದ್ದ ಅನುರಾಧ, ಬ್ರಾಹ್ಮಿಣ್ ಜೀನ್ಸ್ ಎಂದು ಹೇಳಿಕೊಂಡಿದ್ದರು. ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಈಗ ಮಾಡಿರುವ ಟ್ವೀಟ್ ಫುಲ್ ವೈರಲ್: ಇದೀಗ ಅನುರಾಧಾ ತಿವಾರಿ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು, ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ನನ್ನ ಕಾರಿಗೆ ಬ್ರಾಹ್ಮಿಣ್ ಜೀನ್ಸ್'(ಬ್ರಾಹ್ಮಣ ವಂಶವಾಹಿ) ಎನ್ನುವ ಸ್ಟಿಕ್ಕರ್ ಅಂಟಿಸಿದ್ದೇನೆ ಎಂದು ಪೋಟೋ ಶೇರ್ ಮಾಡಿದ್ದಾರೆ. ಮುಂದುವರಿದು ಅರಿವಿನಿಂದ ಬೆಳೆದು, ಶಕ್ತಿಯಿಂದ ಬೆಳೆದು ಹಾಗೂ ಹಿಂದೂತ್ವದ ದ್ವೀಪ ಹೊತ್ತು ಸಾಗುತ್ತಿದ್ದೇವೆ. ಬ್ರಾಹ್ಮಿಣ ಸಮುದಾಯಕ್ಕೆ ಸೇರಿರುವುದಕ್ಕೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ವಂಡರ್‌ಫುಲ್ ಎಂದ ಕ್ಷಿತಿಜ್ ಅರಸ್: ತನ್ನ ಕಾರಿನ ಮೇಲೆ ಬ್ರಾಹ್ಮಿಣ್ ಜೀನ್ ಎನ್ನುವ ಸ್ಟಿಕ್ಕರ್ ಅಂಟಿಸಿರುವುದಕ್ಕೆ ಜಲತಜ್ಞ ಹಾಗೂ ಫ್ರೋಫೆಸರ್ (ಹವಾಮಾನ ನೀತಿ) ಡಾ.ಕ್ಷಿತಿಜ್ ಅರಸ್ ಅವರು ಕಾಲೆಳೆದಿದ್ದಾರೆ. ಅದು ಜಪಾನ್ ಮೇಡ್ ಕಾರ್, ಡಿಸೈನರ್ ಜರ್ಮನ್ ಔಟ್‌ಲುಕ್ಕರ್, ಫ್ರೆಂಚ್‌ನ ಟೈರ್, ಜೈನ್ ಫ್ಯಾಕ್ಟರಿಯಲ್ಲಿ ತಯಾರಿಸಿದ ಸ್ಟೀಲ್, ದಲಿತ ಸ್ಪೇರ್ ಪಾರ್ಟ್ ಅಸೆಂಬ್ಲರ್ ಹಾಗೂ ಅರಬ್ ದೇಶಗಳ ಪೆಟ್ರೋಲ್‌ನಿಂದ ಚಲಿಸುವ ಕಾರಿಗೆ ಬ್ರಾಹ್ಮಿಣ್ ಜೀನ್ ಎನ್ನುವ ಸ್ಟಿಕರ್.. ವಂಡರ್‌ಫುಲ್ ಎಂದು ವ್ಯಂಗ್ಯವಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್: ಈ ಪೋಸ್ಟರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಪೋಸ್ಟ್‌ಗೆ 3.7ಕೆ ಜನ ಕಾಮೆಂಟ್ ಮಾಡಿದ್ದರೆ. 4.7ಕೆ ಜನ ಈ ಟ್ವೀಟ್‌ಅನ್ನು ರೀ ಪೋಸ್ಟ್ ಮಾಡಿದ್ದಾರೆ. 25 ಸಾವಿರ ಜನ ಈ ಪೋಸ್ಟ್ ಲೈಕ್ ಮಾಡಿದ್ದು, 3.6 ಮಿಲಿಯಲ್ ರೀಚ್ ಕಂಡಿದೆ.
Just got my car stamped with #BrahminGenes
— Anuradha Tiwari (@talk2anuradha) October 7, 2024
Born of wisdom, built on strength, and a torchbearer of Hinduism.
Proud to be a Brahmin ! pic.twitter.com/maWXqIUWWd
ಉರ್ಸೋಣ ಬನ್ನಿ ಎಂದು ಟ್ವೀಟ್: ಮತ್ತೊಂದು ಟ್ವೀಟ್ ಮಾಡಿರುವ ಅನುರಾಧ ಉರ್ಸೋಣ ಬನ್ನಿ ಎಂದೂ ಟ್ವೀಟ್ ಮಾಡಿದ್ದಾರೆ. ಈ ಮಾದರಿಯ ಕಾರ್ ಸ್ಟಿಕ್ಕರ್‌ಗಾಗಿ ಡಿ.ಎಂ ಮಾಡಿ ಎಂದಿದ್ದಾರೆ. ನಿಮಗೆ ಬೇಕಾದ ಸ್ಟಿಕ್ಕರ್‌ಗಳು ಲಭ್ಯವಿವೆ. ಹೆಮ್ಮೆಯಿಂದ ಗಾಡಿ ಚಲಾಯಿಸಿ, ದ್ವೇಷಿಗಳನ್ನು ಸುಡಲಿ (ದ್ವೇಷಿಗಳು ಉರ್ಕೊಳ್ಳಲಿ) ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಹ ವೈರಲ್ ಆಗಿದೆ.
Been flooded with DM requests for the car sticker! Here are the designs you can print and use.
— Anuradha Tiwari (@talk2anuradha) October 8, 2024
Drive with Pride and let the haters burn! #BrahminGenes https://t.co/yEIuddNcRq pic.twitter.com/Y7My662Zaa
ಯಾರು ಇದು ಅನುರಾಧ: ಅನುರಾಧಾ ತಿವಾರಿ ಎನ್ನುವ ಯುವತಿ ಮೂಲತಃ ಹೊಸ ದೆಹಲಿಯ ಯುವತಿ. ಈಕೆ ಮೆಕಾನಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ. ವಿಶಿಷ್ಟ ಉದ್ಯಮಿ ಎನ್ನುವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಹಲವು ಪ್ರತಿಷ್ಠಿತ ಕಂಪನಿಗಳಿಗೆ ಸಲಹೆಗಾರರಾಗಿ ಸೇವೆ ನೀಡಿದ್ದಾರೆ ಎನ್ನಲಾಗಿದೆ.
-
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಪತಿಯ ಧುರಂಧರ್-2 ಸಿನಿಮಾ ಪ್ರದರ್ಶನಕ್ಕೆ ಗೈರು, ಪೋಸ್ಟ್ ಕೂಡ ಹಂಚಿಕೊಳ್ಳದ ದೀಪಿಕಾ ಪಡುಕೋಣೆ: ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral












Click it and Unblock the Notifications