Get Updates
Get notified of breaking news, exclusive insights, and must-see stories!

Umapathy Srinivas Election Result 2023: ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿಗೆ ಗೆಲುವು

ಬೆಂಗಳೂರು, ಮೇ 13: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ 6421 ಮತಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ. ಸತೀಶ್ ರೆಡ್ಡಿ 19474 ಮತಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್‌ನ ಉಮಾಪತಿಗೌಡ 13053 ಮತಗಳನ್ನು ಪಡೆದುಕೊಂಡಿದ್ದಾರೆ.

ಬೇಗೂರು ಜಿಲ್ಲಾ ಪಂಚಾಯಿತಿ ಹಾಗೂ ಬೊಮ್ಮನಹಳ್ಳಿ ನಗರಸಭೆ ಸದಸ್ಯರಾಗಿ ಅನುಭವ ಪಡೆದುಕೊಂಡಿದದ ಬಿಜೆಪಿಯ ಸತೀಶ್ ರೆಡ್ಡಿ, 2008ರಿಂದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ, ಹ್ಯಾಟ್ರಿಕ್ ಗೆಲುವು ಪಡೆದಿರುವ ಅವರು ನಾಲ್ಕನೇ ಬಾರಿ ಆಯ್ಕೆಯಾಗುವ ಉತ್ಸಾಹದಲ್ಲಿದ್ದಾರೆ.

Bommanahalli Assembly Election Result 2023

ನಿರ್ಮಾಪಕ, ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿರುವ ಉಮಾಪತಿ ಗೌಡ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಮೂರು ಬಾರಿ ಸತತ ಗೆಲುವು ಕಂಡಿರುವ ಸತೀಶ್ ರೆಡ್ಡಿ ವಿರುದ್ಧ ಗೆಲುವು ಸುಲಭವಲ್ಲ ಎನ್ನುವುದು ಉಮಾಪತಿ ಗೌಡ ಅವರಿಗೆ ತಿಳಿದಿದೆ, ಆದರೂ ಒಕ್ಕಲಿಗ ಮತಗಳು ತಮ್ಮ ಕೈಹಿಡಿಯುತ್ತವೆ ಎನ್ನುವ ವಿಶ್ವಾಸ ಅವರಲ್ಲಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಬರುವುದರ ಜೊತೆಗೆ ಹೆಚ್ಚಿನ ಒಕ್ಕಲಿಗ ಮತಗಳನ್ನು ಪಡೆದರೆ ಉಮಾಪತಿ ಗೌಡ ಅವರಿಗೆ ಗೆಲುವಿನ ಸಾಧ್ಯತೆ ಇದೆ.

ಕಳೆದ ಚುನಾವಣೆಯಲ್ಲಿ ಏನಾಗಿತ್ತು

2008ರ ವಿಧಾನಸಭಾ ಚುನಾವಣೆಯಲ್ಲಿ ಸತೀಶ್ ರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಕುಪೇಂದ್ರ ರೆಡ್ಡಿ ವಿರುದ್ಧ 13,640 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಸತೀಶ್‌ ರೆಡ್ಡಿ 62,993 ಮತಗಳನ್ನು ಪಡೆದಿದ್ದರೆ, ಕುಪೇಂದ್ರ ರೆಡ್ಡಿ 49,353 ಮತಗಳನ್ನು ಗಳಿಸಿದ್ದರು ಜೆಡಿಎಸ್‌ನ ಮುನಿನಾರಾಯಣ ಎಚ್ ಎಂ 6,313 ಮತ ಪಡೆದಿದ್ದರು.

Bommanahalli Assembly Election Result 2023

2018ರ ಚುನಾವಣೆಯಲ್ಲಿ ಸತೀಶ್‌ ರೆಡ್ಡಿ 1,11,863 ಮತಗಳನ್ನು ಪಡೆಯುವ ಮೂಲಕ ಎಕಾಂಗ್ರೆಸ್‌ನ ಸುಷ್ಮಾ ರಾಜಗೋಪಾಲ ರೆಡ್ಡಿ (64,701) ವಿರುದ್ಧ 47,162 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಜೆ ಡಿಎಸ್‌ನ ಟಿ ಆರ್ ಪ್ರಸಾದ್ 9,379 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಜಾತಿವಾರು ಲೆಕ್ಕಾಚಾರ

ಬೊಮ್ಮನಹಳ್ಳೀ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,27,300 ಮತದಾರರಿದ್ದಾರೆ. ಇಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಮತಗಳು 1,23,300 ಇದ್ದು ಅತಿ ದೊಡ್ಡ ಮತದಾರರ ವರ್ಗ ಎನಿಸಿಕೊಂಡಿದೆ. ನಂತರ 95,000 ಒಕ್ಕಲಿಗರು, 55,000 ಇತರೆ ಹಿಂದುಳಿದ ಸಮುದಾಯಗಳು, 43,000 ಬ್ರಾಹ್ಮಣರು, 27,500 ಅಲ್ಪಸಂಖ್ಯಾತರು ಹಾಗೂ 2,000 ಲಿಂಗಾಯತ ಮತದಾರರಿದ್ದಾರೆ. ರೆಡ್ಡಿ ಮತ್ತು ಒಕ್ಕಲಿಗರ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಇಲ್ಲಿ ಮೂಲ ನಿವಾಸಿಗಳಿಗಿಂತ ವಲಸಿಗರ ಮತಗಳೇ ಹೆಚ್ಚಾಗಿರುವುದು ಮುಖ್ಯ ಅಂಶವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+