ನಂದಿನಿ ಹಾಲು ಹಂಚಿ ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಕ್ಯಾಂಪೇನ್!

ಬೆಂಗಳೂರು: ಅಮುಲ್ ಯಾವಾಗ ಬೆಂಗಳೂರಿನಲ್ಲಿ ಆನ್‌ಲೈನ್ ಮೂಲಕ ತನ್ನ ಉತ್ಪನ್ನ ಮಾರಾಟ ಮಾಡುವುದಾಗಿ ಘೊಷಣೆ ಮಾಡಿತೋ, ಆ ಕ್ಷಣದಿಂದಲೇ ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ 'ನಂದಿನಿ VS ಅಮುಲ್' (KMF) ಫೈಟ್ ಎಂಟ್ರಿಯಾದಂತೆ ಭಾಸವಾಗುತ್ತಿದೆ. ಈಗ ಬೊಮ್ಮನಹಳ್ಳಿ (Bommannahalli) ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ನಾಯಕರು ಇದೇ ವಿಚಾರ ಮುಂದಿಟ್ಟುಕೊಂಡು ಕ್ಯಾಂಪೇನ್ ಶುರು ಮಾಡಿದ್ದಾರೆ.

ಬೆಂಗಳೂರಿನ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಬೊಮ್ಮನಹಳ್ಳಿ ಕ್ಷೇತ್ರ ಮುಂಚೂಣಿಯಲ್ಲಿದೆ. ಕಳೆದ 3 ಚುನಾವಣೆಯಲ್ಲಿ ಸತತ ಗೆಲುವು ಕಾಣುತ್ತಾ, ಬೊಮ್ಮನಹಳ್ಳಿಯನ್ನ ಬಿಜೆಪಿ ಭದ್ರಕೋಟೆ ಮಾಡಿದ್ದಾರೆ ಶಾಸಕ ಸತೀಶ್ ರೆಡ್ಡಿ. ಆದರೆ ಈ ಬಾರಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿಯೇ ತೀರುತ್ತೇವೆ ಅಂತಾ ಸ್ಥಳೀಯ ಕಾಂಗ್ರೆಸ್ ನಾಯಕರು ಪಣತೊಟ್ಟಿದ್ದಾರೆ. ಇಷ್ಟೆಲ್ಲದರ ನಡುವೆ ಬೊಮ್ಮನಹಳ್ಳಿ ಅಖಾಡಕ್ಕೆ ಅಧಿಕೃತವಾಗಿ 'ನಂದಿನಿ VS ಅಮುಲ್' ಫೈಟ್ ಎಂಟ್ರಿಯಾಗಿದೆ. 'ನಂದಿನಿ ಉಳಿಸಿ' ಅಭಿಯಾನದ ಮೂಲಕ ಸ್ಥಳೀಯ ಮತದಾರರ ಗಮನ ಸೆಳೆಯುತ್ತಿದ್ದಾರೆ 'ಕೈ' ನಾಯಕರು.

Bommanahalli congress leaders distributed free nandini milk and asked to support KMF

ಉಚಿತವಾಗಿ ನಂದಿನಿ ಹಾಲು ವಿತರಣೆ

HSR ಬಡಾವಣೆಯ ಪಾರ್ಕ್‌ಗಳಲ್ಲಿ ನಂದಿನಿ ಹಾಲು ಉಚಿತವಾಗಿ ವಿತರಿಸಿದ್ದಾರೆ ಕಾಂಗ್ರೆಸ್ ನಾಯಕರು. ದಿ.ಪುನೀತ್ ರಾಜ್‌ಕುಮಾರ್ ಕೆಎಂಎಫ್‌ಗೆ ಉಚಿತವಾಗಿ ಪ್ರಚಾರ ನೀಡಿದ್ದರು. ಇಂತಹ ಸಂಸ್ಥೆ ಉಳಿಸಿ, ಸ್ಥಳೀಯ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು. ಹೀಗೆ ಕಾಂಗ್ರೆಸ್ ನಾಯಕರು ಉಚಿತವಾಗಿ ನೀಡಿದ ನಂದಿನಿ ಹಾಲನ್ನು ಕೆಲವರು ಸ್ವೀಕರಿಸಿದರೆ, ಮತ್ತೆ ಕೆಲವರು ಸಬೂಬು ಹೇಳಿದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಉಮಾಪತಿ ಶ್ರೀನಿವಾಸ್, ಸ್ಥಳೀಯ ಮುಖಂಡರಾದ ಟಿ. ವಾಸುದೇವ ರೆಡ್ಡಿ, ಕೆ. ವಾಸುದೇವ್ ಹಾಗೂ ಅನಿಲ್ ರೆಡ್ಡಿ ನೇತೃತ್ವದಲ್ಲಿ ಅಭಿಯಾನ ನಡೆಯಿತು.

ಬೊಮ್ಮನಹಳ್ಳಿ ಬಿಜೆಪಿ ಭದ್ರಕೋಟೆ

ಬೊಮ್ಮನಹಳ್ಳಿ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. 2008ರಲ್ಲಿ ವಿಧಾನಸಭಾ ಕ್ಷೇತ್ರದ ಸ್ಥಾನಮಾನವನ್ನು ಪಡೆದ ನಂತರ ಬೊಮ್ಮನಹಳ್ಳಿ ಬಿಜೆಪಿ ಪಕ್ಷದ ಭದ್ರಕೋಟೆ ಎಂದೇ ಕರೆಯಲ್ಪಡುತ್ತಿದೆ. ಇದಕ್ಕೂ ಮೊದಲು ಕೂಡ ಈ ಭಾಗದಲ್ಲಿ ಬಿಜೆಪಿ ಬಲವಾದ ವೋಟ್ ಬ್ಯಾಂಕ್ ಹೊಂದಿತ್ತು. ಆದರೆ ಈ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ನಿರೀಕ್ಷೆ ಸ್ಥಳೀಯ ನಾಯಕರದ್ದು.

Bommanahalli congress leaders distributed free nandini milk and asked to support KMF

ಸಮಸ್ಯೆಗಳೇ ಕಾಂಗ್ರೆಸ್ ಅಸ್ತ್ರ?

2008ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಜನರು ಸಮಸ್ಯೆಯಲ್ಲೇ ಬದುಕುತ್ತಿದ್ದಾರೆ. ಈ ಎಲ್ಲಾ ವಿಚಾರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ ಎಂದು ಬೊಮ್ಮನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಉಮಾಪತಿ ಶ್ರೀನಿವಾಸ್ ಗೌಡ ಒನ್‌ಇಂಡಿಯಾಗೆ ತಿಳಿಸಿದ್ದಾರೆ. ಪ್ರಮುಖವಾಗಿ ಬೊಮ್ಮನಹಳ್ಳಿ ಮತ್ತು ಹೊಂಗಸಂದ್ರ ರಸ್ತೆಯೇ ಕಾಂಗ್ರೆಸ್ ಅಸ್ತ್ರವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ಗೆ ಒಳಜಗಳದ ಸಂಕಷ್ಟ

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದರೂ, ಒಳಜಗಳದ ಸಂಕಷ್ಟ ತಪ್ಪುತ್ತಿಲ್ಲ. ಅದರಲ್ಲೂ ಸ್ಥಳೀಯ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಕೇಂದ್ರದ ವರಿಷ್ಠರ ಎದುರಲ್ಲೇ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಗರಂ ಆಗಿದ್ದರು. ಮತ್ತೊಂದೆಡೆ ಇನ್ನೂ ಹಲವರು ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಫೈನಲ್ ಆಗುವುದು ತಡವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

Bommanahalli congress leaders distributed free nandini milk and asked to support KMF

ಒಟ್ಟಾರೆ ರಾಜ್ಯ ಮಟ್ಟದಲ್ಲಿ ಹೇಗೆ ಕಾಂಗ್ರೆಸ್ ನಾಯಕರು 'ನಂದಿನಿ' ಅಸ್ತ್ರ ಪ್ರಯೋಗಿಸುತ್ತಿದ್ದಾರೋ, ಅದೇ ರೀತಿ ಬೊಮ್ಮನಹಳ್ಳಿಯಲ್ಲಿ ಸ್ಥಳೀಯ ಮಟ್ಟದಲ್ಲೂ 'ನಂದಿನಿ' ಅಸ್ತ್ರ ಪ್ರಯೋಗಕ್ಕೆ 'ಕೈ' ಲೀಡರ್ಸ್ ಮುಂದಾಗಿದ್ದಾರೆ. ಇದು ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿಯ ತಿರುವು ನೀಡಲಿದೆ ಎಂಬುದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+