'ಹುಸಿ' ಬೆದರಿಕೆ ಕರೆ ಮಾಡಿದ್ದವ ಹೇಳಿದ ಕೊಲೆ 'ಸತ್ಯ' ಕಥೆ
ಬೆಂಗಳೂರು, ಸೆ. 07: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಕರೆ ಮಾಡಿ ಬೆಚ್ಚು ಬೀಳಿಸಿದ ಪ್ರಕರಣ ಕುತೂಹಲಕಾರಿಯಾಗುತ್ತಿದೆ. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿಯ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಕೊಲೆ ಪ್ರಕರಣವೊಂದರ ಮಾಹಿತಿ ಸಿಕ್ಕಿದೆ. ಬೆಂಗಳೂರಿನ ಟೆಕ್ಕಿ ಎಂ. ಜಿ. ಗೋಕುಲ್ ತನ್ನ ಪತ್ನಿ ಕೊಂದಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಹುಸಿ ಬಾಂಬ್ ಬದರಿಕೆ ಕರೆ ಪ್ರಕರಣದ ಪ್ರಮುಖ ಅರೋಪಿ ಬೆಂಗಳೂರಿನ ಟೆಕ್ಕಿ ಎಂ. ಜಿ. ಗೋಕುಲ್ ಅವರು ಪೊಲೀಸ್ ವಿಚಾರಣೆ ವೇಳೆ ಪತ್ನಿಯನ್ನು ಕೊಂದಿದ್ದೇನೆ ಎಂದು ಬಾಯ್ಬಿಟ್ಟಿದ್ದಾರೆ. [ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬೆದರಿಕೆ ಕರೆ]
ಶನಿವಾರದಂದು ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ್ದಲ್ಲದೆ, ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದ ಗೋಕಲ್, ಏರ್ ಅರೇಬಿಯಾ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಕೆ ಹಾಕಿದ್ದರು.

ಸತ್ಯ ಹೇಳಿದ ಸಿಮ್: ಫೋನ್ ಕರೆ ಮೂಲ ಹುಡುಕಿದ ಪೊಲೀಸರಿಗೆ ಸಿಮ್ ಯಾರ ಹೆಸರಿನಲ್ಲಿದೆ ಎಂಬುದು ತಿಳಿದು ಬಂದಿದೆ. ಹುಡುಕಿಕೊಂಡು ಬಂದರೆ ಗೋಕುಲ್ ಪಕ್ಕದ ಮನೆ ನಿವಾಸಿಯ ಹೆಸರಿನಲ್ಲಿ ಸಿಮ್ ಖರೀದಿಸಲಾಗಿದೆ. ಪಕ್ಕದ ಮನೆಯವರ ಪತ್ನಿ ಮೇಲೆ ಕಣ್ಣು ಹಾಕಿದ್ದ ಸಾಫ್ಟ್ ವೇರ್ ಸಂಸ್ಥೆ ಉದ್ಯೋಗಿ ಗೋಕುಲ್ ಈ ಕುತಂತ್ರ ಹೆಣೆದಿದ್ದಾರೆ.
ನೆರಮನೆಯಾತನ ಸಿಮ್ ಬಳಸಿಕೊಂಡು ಬೆದರಿಕೆ ಕರೆ ಮಾಡುವುದು, ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ದ ಮೇಲೆ ಆತನ ಪತ್ನಿ ಜೊತೆ ಸುಖವಾಗಿರುವುದು ಗೋಕುಲ್ ಉದ್ದೇಶವಾಗಿತ್ತು.
ಮುಚ್ಚಿ ಹೋಗಿದ್ದ ಪತ್ನಿ ಕೊಲೆ ಕೇಸ್: ಸುಮಾರು 7 ವರ್ಷಗಳ ಹಿಂದೆ ಪಶ್ಚಿಮ ಬಂಗಾಲದ ಯುವತಿಯನ್ನು ಮದುವೆಯಾಗಿದ್ದ. ದಿನನಿತ್ಯ ಜಗಳದಿಂದ ಬೇಸತ್ತ ಗೋಕುಲ್ ಜುಲೈ 28ರಂದು ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದ. ಆದರೆ, ಅತ್ಮಹತ್ಯೆ ಎಂದು ಕಥೆ ಕಟ್ಟಿದ್ದ. ಯಾರು ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಕೂಡಾ ಹೆಚ್ಚಿನ ತನಿಖೆ ಮುಂದುವರೆಸಿರಲಿಲ್ಲ. ಈಗ ಮಡಿವಾಳ ಪೊಲೀಸರು ಈಗ ಕೊಲೆ ಕೇಸಾಗಿರುವ ಈ ಪ್ರಕರಣದ ಮುಂದಿನ ತನಿಖೆಯನ್ನು ಸೆಂಟ್ರಲ್ ಕ್ರೈಂ ಬ್ರ್ಯಾಂಚಿಗೆ ಒಪ್ಪಿಸಿದ್ದಾರೆ. ತನಿಖೆ ಮುಂದುವರೆದಿದೆ. (ಒನ್ ಇಂಡಿಯಾ ಸುದ್ದಿ)
-
2nd PUC 'ವಾಣಿಜ್ಯ' ವಿಭಾಗದಲ್ಲಿ ಶೇ.88.4ರಷ್ಟು ಸಾಧನೆ: ಇಬ್ಬರಿಗೆ 600ಕ್ಕೆ 600 ಅಂಕ, ಇವರೇ ಟಾಪರ್ಸ್ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
2nd PUC ಫಲಿತಾಂಶದಲ್ಲಿ ಶೇ. 13ರಷ್ಟು ಏರಿಕೆ; ಕಲಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಫಸ್ಟ್: ಮಧು ಬಂಗಾರಪ್ಪ -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ











Click it and Unblock the Notifications