ಇಂದಿನಿಂದ 3 ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಸೇವೆ, ಎಲ್ಲೆಲ್ಲಿ?
ಬೆಂಗಳೂರು, ಮಾರ್ಚ್ 5: ಬಿಎಂಟಿಸಿಯು ನಗರದ ಮೂರು ಹೊಸ ಮಾರ್ಗಗಳಿಗೆ ಸೇವೆ ನೀಡಲು ಮುಂದಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಹೊರ ವರ್ತುಲ ರಸ್ತೆ ಪ್ರದೇಶದಲ್ಲಿರುವ ಐಟಿ ಬಿಟಿ ಕಾರಿಡಾರ್‌ಗಳ ಉದ್ಯೋಗಿಗಳನ್ನು ಸಾರ್ವಜನಿಕ ಸಾರಿಗೆಯತ್ತ ಆಕರ್ಷಿಸಲು ಬಿಎಂಟಿಸಿ ಮುಂದಾಗಿದೆ.
ಈ ನಿಟ್ಟಿನಲ್ಲಿ ಮೂರು ಹೊಸ ಮಾರ್ಗಗಳಲ್ಲಿ ಮಂಗಳವಾರ(ಮಾರ್ಚ್ 5)ರಿಂದ ಬಸ್ ಕಾರ್ಯಾಚರಣೆಗೆ ಅಣಿಯಾಗಿದೆ.
ಆರ್ಗ ಸಂಖ್ಯೆ 505 ಆರ್ ಬಸ್ ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಕ್ಯಾಂಪಸ್‌ನಿಂದ ಹೊರಟು ಹೊಸ ರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ ದೊಡ್ಡಕನಳ್ಳಿ, ನ್ಯೂ ಹೊರೈಜನ್ ಕಾಲೇಜು, ಇಬ್ಬಲೂರು, ಎಚ್‌ಎಸ್‌ಆರ್ ಲೇಔಟ್, ಹರಳೂರು, ಕೂಡ್ಲು, ಹೊಸ ರೋಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಕ್ಯಾಂಪಸ್ ತಲುಪಲಿದೆ.

505 ಆರ್ಎ-ಬಸ್ ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಕ್ಯಾಂಪಸ್‌ನಿಂದ ಹೊರಟು ಹೊಸ ರಸ್ತೆ, ಕೂಡ್ಲು, ಹರಳೂರು, ಎಚ್‌ಎಸ್‌ಆರ್ ಲೇಔಟ್, ಕೈಕೊಂಡ್ರಹಳ್ಳಿ, ನ್ಯೂ ಹೊರೈಜಾನ್ ಕಾಲೇಜು, ದೊಡ್ಡಕನಳ್ಳಿ, ಹೊಸ ರೋಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಕ್ಯಾಂಪಸ್ ತಲುಪಲಿದೆ.
ಬಾಣಸವಾಡಿ-ಹೊಸೂರು ಡೆಮು ರೈಲು ಆರಂಭವಾದ ಬಳಿಕ ಎಲೆಕ್ಟ್ರಾನಿಕ್ಸ್ ಸಿಟಿ, ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳು ರೈಲು ಪ್ರಯಾಣ ಆಯ್ಕೆ ಮಾಡುತ್ತಿದ್ದಾರೆ. ಇದರಿಂದಾಗಿ ಕಾರ್ಮೆಲ್ ರಾಂ, ಹೀಳಲಿಗೆ ರೈಲು ನಿಲ್ದಾಣಕ್ಕೆ ಅಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಾರ್ಗ ಸಂಖ್ಯೆ 505 ಸಿಸಿ ಪರಿಚಯಿಸಲಾಗಿದೆ.












Click it and Unblock the Notifications