BMTC: ಹೊಸ ಮಾರ್ಗದಲ್ಲಿ ಹೆಚ್ಚುವರಿ ಬಸ್ ಕಾರ್ಯಾಚರಣೆ: ಮಾಹಿತಿ
ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಸದಾ ಕಾರ್ಯ ನಿರತವಾಗಿರುವ ಸಾರಿಗೆ ಇಲಾಖೆಯು ನಗರದಲ್ಲಿ ಹೊಸ ಮಾರ್ಗಗಳಲ್ಲಿ ಬಸ್‌ಗಳ ಕಾರ್ಯಾಚರಣೆ ಆರಂಭಿಸಿದೆ.
ಹೌದು, ಬೆಂಗಳೂರಿನ ಹೊರವಲಯ ಮತ್ತು ನಗರದೊಳಗಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಟ್ರಾಫಿಕ್ ಇಳಿಕೆಯ ದೃಷ್ಟಿಯಿಂದ ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಿಎಂಟಿಸಿ ಬಸ್‌ಗಳನ್ನು ಮಂಗಳವಾರ (ಫೆ.20ರಿಂದ) ಆರಂಭಿಸಿದೆ. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ಬಿಎಂಟಿಸಿ ಬಸ್ ಹೆಚ್ಚುವರಿ ಮಾರ್ಗಗಳ ವಿವರ
ನಗರದ ಸರ್ಜಾಪುರದಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ಗೆ ನಾಲ್ಕು ವಾಯು ವಜ್ರ ಬಸ್‌ಗಳು 30 ಟ್ರಿಪ್ ಸಂಚರಿಸಲಿವೆ. ಇಲ್ಲಿಂದಲೇ ಹೆಬ್ಬಾಳಕ್ಕೆ ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್, ಸರ್ಜಾಪುರ ರಸ್ತೆ ಜಂಕ್ಷನ್, ಮಾರತ್‌ಹಳ್ಳಿ ಮೇಲ್ಸೇತುವೆ ಮಾರ್ಗವಾಗಿ ನಿತ್ಯ 4 ವಜ್ರ ಬಸ್‌ಗಳು ನಿತ್ಯ 16 ಟ್ರಿಪ್ ಹೊಡೆಯಲಿವೆ.
ನಗರದ ಸರ್ಜಾಪುರದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ನಿತ್ಯ 4 ವಾಯುವಜ್ರ ಬಸ್‌ಗಳು ಸಂಚರಿಸಲಿವೆ. ಪ್ರತಿ ನಿತ್ಯ ಈ ಬಸ್‌ಗಳು ಇಲ್ಲಿಂದ ನಾಲ್ಕು 4 ಟ್ರಿಪ್ ಹೊಡೆಯಲಿವೆ. ಈ ಭಾಗದ ಸಾವಿರಾರು ಜನರಿಗೆ ಸಹಾಯವಾಗಲಿದೆ. ಈ ಭಾಗದಲ್ಲಿ ಸಂಚಾರ ದಟ್ಟಣೆಯು ಕಡಿಮೆ ಆಗಲಿದೆ.

ವಾಯುವಜ್ರ ಬಸ್‌ಗಳು ಸರ್ಜಾಪುರ, ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್, ಸರ್ಜಾಪುರ ಜಂಕ್ಷನ್, ಮಾರತ್‌ಹಳ್ಳಿ ಮೇಲ್ಸೇತುವೆ ಮೂಲಕ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣ ತಲುಪಲಿವೆ. ವಾಯು ವಜ್ರಬಸ್‌ಗಳಿಗೆ ಕಿಲೋ ಮೀಟರ್ ಆಧಾರದಲ್ಲಿ ಹೇಗೆ ಟಿಕೆಟ್ ದರ ನಿಗದಿ ಆಗಿರುತ್ತದೆಯೋ ಇಲ್ಲಿ ಅದೇ ರೀತಿಯ ಪ್ರಯಾಣದ ದರ ಇರಲಿದೆ.
ಬಿಎಂಟಿಸಿ ಸಾಮಾನ್ಯ ಬಸ್‌ಗಳು ಹೊರವಲಯದ ಸರ್ಜಾಪುರ ದಿಂದ ಹೆಬ್ಬಾಳಕ್ಕೆ ದೊಮ್ಮಸಂದ್ರ, ಕೊಡತಿ ಗೇಟ್, ದೊಡ್ಡಕನ್ನಲ್ಲಿ, ಕಾಡುಬೀಸನಹಳ್ಳಿ, ಮಾರತ್‌ಹಳ್ಳಿ ಮೇಲ್ಸೇತುವೆ ಮೂಲಕ ಶಿವಾಜಿನಗರಕ್ಕೆ ಹಾಗೂ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಶಾಂತಿನಗರ ಟಿಟಿಎಂಸಿ ಮೂಲಕ ಡೈರಿ ಸರ್ಕಲ್, ಗುರಪ್ಪನಪಾಳ್ಯ ಮಾರ್ಗದಲ್ಲಿ ಓಡಾಡುತ್ತವೆ.
ಬಿಎಂಟಿಸಿಗೆ 1300 ಬಸ್ ಸೇರ್ಪಡೆ
ಕರ್ನಾಟಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಆದಷ್ಟು ಶೀಘ್ರವೇ 5800 ಬಸ್‌ಗಳ ಸೇರ್ಪಡೆ ಆಗಲಿವೆ. ಇವು ಎಲ್ಲ ನಾಲ್ಕು ನಿಗಮಗಳಿಗೂ ಹಂಚಿಕೆ ಆಗಲಿವೆ. ಏಪ್ರೀಲ್ ವೇಳೆಗೆ 5000 ಬಸ್‌ಗಳನ್ನು ಖರೀದಿಸಲಾಗುವುದು. ಇದಕ್ಕೆ ಈಗಾಗಲೇ ಸರ್ಕಾರ ಅನುಮತಿ ನೀಡಿದೆ.
ಇತ್ತೀಚಿನ ಬಜೆಟ್ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಸಾರಿಗೆ ಸುಧಾರಣೆಗೆ ಹೊಸ ಬಸ್ ಸೇರ್ಪಡೆ ಬಗ್ಗೆ ಘೋಷಿಸಿದ್ದಾರೆ. ಒಟ್ಟು 1300 ಅಧಿಕ ಎಲೆಕ್ಟ್ರಿಕ್ ಬಸ್ ಹಾಗೂ 820 ಬಿಎಸ್ 6ನ ಡೀಸೆಲ್ ಇಂಧನ ಬಳಕೆಯ ಹೊಸ ಬಸ್‌ಗಳನ್ನು ಬಿಎಂಟಿಸಿ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದ್ದರು.












Click it and Unblock the Notifications