ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲು ಬಿಎಂಟಿಸಿಯ 2 ಹೊಸ ರೂಟ್
ಬೆಂಗಳೂರು, ಫೆಬ್ರವರಿ 23 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಕ್ಷಿಣ ಬೆಂಗಳೂರಿನಿಂದ ಸಂಪರ್ಕಿಸಲು ಬಿಎಂಟಿಸಿ ಎರಡು ಹೊಸ ರೂಟ್‌ಗಳನ್ನು ಪರಿಚಯಿಸಿದೆ. ಇದರಿಂದಾಗಿ ನಗರದ ದಕ್ಷಿಣ ಭಾಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಸಹಾಯಕವಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೂತನ ವಾಯುವಜ್ರ ಬಸ್‌ಗಳನ್ನು ಆರ್ಟ್ ಆಫ್ ಲೀವಿಂಗ್ ಮತ್ತು ಡಿಎಲ್‌ಎಫ್ ಅಪಾರ್ಟ್‌ಮೆಂಟ್‌ನಿಂದ ವಿಮಾನ ನಿಲ್ದಾಣಕ್ಕೆ ಓಡಿಸುತ್ತಿದೆ.
ಕೆಐಎಬಿ-13 ಮಾರ್ಗದ ಬಸ್ ವಿಮಾನ ನಿಲ್ದಾಣ ಮತ್ತು ಆರ್ಟ್ ಆಫ್ ಲೀವಿಂಗ್ ಕ್ಯಾಂಪಸ್ ನಡುವೆ ಸಂಚಾರ ನಡೆಸಲಿದೆ. ಈ ಬಸ್ 22 ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ. ಬಸ್ ತಲಘಟ್ಟಪುರ, ರಘುವನಹಳ್ಳಿ ಕ್ರಾಸ್, ಕೋನಕುಂಟೆ ಕ್ರಾಸ್, ಬನಶಂಕರಿ ಬಸ್ ನಿಲ್ದಾಣ, ಮಿನರ್ವ ಸರ್ಕಲ್, ಮೈಸೂರು ಬ್ಯಾಂಕ್, ಮೇಖ್ರಿ ಸರ್ಕಲ್, ಹೆಬ್ಬಾಳ, ಕೋಗಿಲು ಕ್ರಾಸ್, ಹುಣಸೇಮಾರನಹಳ್ಳಿಯಲ್ಲಿ ನಿಲುಗಡೆಗೊಳ್ಳಲಿದೆ.

ಕೆಐಎಬಿ-14 ಬಸ್ ವಿಮಾನ ನಿಲ್ದಾಣ ಮತ್ತು ಡಿಎಲ್‌ಎಫ್ ಅಪಾರ್ಟ್‌ಮೆಂಟ್ ನಡುವೆ 37 ಟ್ರಿಪ್ ಸಂಚಾರ ನಡೆಸಲಿದೆ. ಹುಳಿಮಾವು, ಐಐಎಂಬಿ, ಗುರಪ್ಪನಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ ಗಾರ್ಡನ್, ಬೆಂಗಳೂರು ಕ್ಲಬ್, ಮೇಖ್ರಿ ಸರ್ಕಲ್, ಹೆಬ್ಬಾಳ, ಹುಣಸೇಮಾರನಹಳ್ಳಿಯಲ್ಲಿ ನಿಲುಗಡೆಗೊಳ್ಳಲಿದೆ.












Click it and Unblock the Notifications