BMTC: ಬಿಎಂಟಿಸಿ ಹೊಸ ಮಾರ್ಗ ವಿದ್ಯಾರ್ಥಿಗಳು, ಮೆಟ್ರೋ ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು, ಜನವರಿ 20: ಉದ್ಯಾನ ನಗರಿ ಬೆಂಗಳೂರಿನ ಜೀವನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸ ಮಾರ್ಗವೊಂದನ್ನು ಪರಿಚಯಿಸಿದೆ. ನಮ್ಮ ಮೆಟ್ರೋ ಪ್ರಯಾಣಿಕರು, ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಈ ಮಾರ್ಗದ ಬಸ್ ಸಂಚಾರವನ್ನು ನಡೆಸಲಿದ್ದು, ಜನರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಬಿಎಂಟಿಸಿ ಜನವರಿ 16ರಿಂದಲೇ MF8-A ಎಂಬ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ಈ ಮಾರ್ಗದ ಬಸ್ ಮಂತ್ರಿ ಸ್ಕ್ವೇರ್‌ ಮೆಟ್ರೋ ನಿಲ್ದಾಣ (ಸೆಂಟ್ರಲ್‌)-ಶಿವಾಜಿನಗರವನ್ನು ಸಂಪರ್ಕಿಸುತ್ತದೆ. ಮೌಂಟ್ ಕಾರ್ಮಲ್ ಕಾಲೇಜು ಮಾರ್ಗವಾಗಿ ಬಸ್ ಸಂಚರಿಸಲಿದ್ದು, ಕಾಲೇಜು ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ.

BMTC New Route Shivajinagara Bus Station To Mantri Square

ನೂತನ ಮಾರ್ಗದ ವಿವರ: ಬಿಎಂಟಿಸಿ ಮಾಹಿತಿ ಪ್ರಕಾರ MF8-A ಮಾರ್ಗದ ಬಸ್ ಮಂತ್ರಿ ಸ್ಕ್ವೇರ್‌ ಮೆಟ್ರೋ ನಿಲ್ದಾಣ (ಸೆಂಟ್ರಲ್‌), ಮಲ್ಲೇಶ್ವರಂ ವೃತ್ತ, ಲಿಂಕ್ ರಸ್ತೆ, ಆರ್‌ಎಂಎಸ್‌ ಶೇಶಾದ್ರಿಪುರ, ಆರ್‌ಎಂ ಗುಟ್ಟಹಳ್ಳಿ ಅಂಚೆ ಕಛೇರಿ, ಗುಟ್ಟಹಳ್ಳಿ ಅಂಡರ್‌ಪಾಸ್, ಮೌಂಟ್ ಕಾರ್ಮಲ್ ಕಾಲೇಜು, ಕಂಟೋನ್ಮೆಂಟ್ ರೈಲು ನಿಲ್ದಾಣ, ಸಿಎಸ್‌ಐ ಆಸ್ಪತ್ರೆ, ಇಂಡಿಯನ್ ಎಕ್ಸ್‌ಪ್ರೆಸ್ ಮೂಲಕ ಶಿವಾಜಿನಗರವನ್ನು ತಲುಪಲಿದೆ.

ಈ ಬಸ್ ಸ್ಕ್ವೇರ್‌ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ7.15, 8.45, 12.15, 1.30, 2.40, 4.25ಕ್ಕೆ ಹೊರಡಲಿದೆ. ಶಿವಾಜಿನಗರವನ್ನು ಬೆಳಗ್ಗೆ 7.55, 9.25, 12.50, 2, 3.15, ಸಂಜೆ 5 ಗಂಟೆಗೆ ತಲುಪಲಿದೆ. ಈ ಬಸ್ ಮೌಂಟ್ ಕಾರ್ಮಲ್ ಕಾಲೇಜು ನಿಲ್ದಾಣಕ್ಕೆ ಬೆಳಗ್ಗೆ 7.35, 9.05, 12.35, 1.50, 3 ಗಂಟೆ, 4.45ಕ್ಕೆ ಆಗಮಿಸುತ್ತದೆ.

ಈ ಬಸ್ ಶಿವಾಜಿನಗರದಿಂದ ಬೆಳಗ್ಗೆ 8.05, 11.15, 12.55, 2.05, 3.45ಕ್ಕೆ ಹೊರಡಲಿದೆ. ಬಸ್ ಸ್ಕ್ವೇರ್‌ ಮೆಟ್ರೋ ನಿಲ್ದಾಣ (ಸೆಂಟ್ರಲ್‌) ನಿಲ್ದಾಣಕ್ಕೆ 8.35, 11.45, 1.25, 2.35, 4.15ಕ್ಕೆ ತಲುಪುತ್ತದೆ. ಈ ಬಸ್ ಮೌಂಟ್ ಕಾರ್ಮಲ್ ಕಾಲೇಜಿಗೆ 8.15, 11.25, 1.05, 2.15, 3.55ಕ್ಕೆ ಆಗಮಿಸುತ್ತದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಮ್ಮ ಮೆಟ್ರೋ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸುತ್ತಿದೆ. ಈ ಬಸ್‌ಗಳು ನಮ್ಮ ಮೆಟ್ರೋ ನಿಲ್ದಾಣವನ್ನು ವಿವಿಧ ಬಡಾವಣೆಗಳಿಂದ ಸಂಪರ್ಕಿಸುತ್ತವೆ. ಆದರೆ ಈಗ ನಮ್ಮ ಮೆಟ್ರೋ ನಿಲ್ದಾಣದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಹೊಸ ಬಸ್ ಸೇವೆಯನ್ನು ಬಿಎಂಟಿಸಿ ಆರಂಭಿಸಿದೆ.

ಹೊಸ ಮಾರ್ಗ 168-E: ಬಿಎಂಟಿಸಿ ಕೆಲವು ದಿನಗಳ ಹಿಂದೆ 168-ಇ ಮಾರ್ಗದಲ್ಲಿ ಹೊಸ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)- ಜೈ ಭೀಮ ನಗರವನ್ನು ಸಂಪರ್ಕಿಸುತ್ತದೆ.

ಈ ಬಸ್ ಮೆಜೆಸ್ಟಿಕ್‌ನಿಂದ ಹೊರಟು ಕೆ. ಆರ್. ಮಾರುಕಟ್ಟೆ, ಕಾರ್ಪೊರೇಷನ್, ಡಬಲ್ ರಸ್ತೆ, ಶಾಂತಿ ನಗರ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ನಿಮ್ಹಾನ್ಸ್, ಮುನೇಶ್ವರ ದೇವಸ್ಥಾನ, ಸದ್ದುಗುಂಟೆಪಾಳ್ಯ, ಚಿಕ್ಕ ಆಡುಗೋಡಿ, ತಾವರೆಕೆರೆ ಮೋರಿ, ತಾವರೆಕೆರೆ ಆಲದ ಮರ, ಗಂಗೋತ್ರಿ ವೃತ್ತ ಮೂಲಕ ಜೈ ಭೀಮ ನಗರ ತಲುಪುತ್ತದೆ.

ಈ ಬಸ್ ಮೆಜೆಸ್ಟಿಕ್‌ನಿಂದ ಹೊರಡುವ ಸಮಯ 6.25, 8.05, 10.35, 12.25, 15.40, 17.45, 19.50. ಜೈ ಭೀಮ ನಗರದಿಂದ ಹೊರಡುವ ಸಮಯ 7.15, 9.25, 11.30, 14.50, 16.30, 18.55, 20.45.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+