NCMC: ಬಿಎಂಟಿಸಿಯಲ್ಲಿ ಅನುಷ್ಠಾನಕ್ಕೆ ಬಾರದ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್
ಬೆಂಗಳೂರು, ಡಿಸೆಂಬರ್ 07: ಬೆಂಗಳೂರಿನಲ್ಲಿ ಸುಮಾರು 73 ಕಿಲೋ ಮೀಟರ್ ವೇಗದ ಸಾರಿಗೆ ಸೇವೆ ನೀಡುತ್ತಿರುವ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (BMRCL) ನಮ್ಮ ಮೆಟ್ರೋ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಪರಿಚಯಿಸಿದೆ. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMRCL) ಇದರ ಅಳವಡಿಕೆಯತ್ತ ಗಮನ ಹರಿಸಿಲ್ಲ ಎಂದು ಬೇಸರದ ಸಂಗತಿಯಾಗಿದೆ.

ಒಂದೇ ಕಾರ್ಡಿನಲ್ಲಿ ಹಲವು ಸೇವೆಗಳನ್ನು ಒದಗಿಸುವ ಈ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಅನುಷ್ಠಾನ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಚರ್ಚೆಯ ಹಂತದಲ್ಲಿದೆ ಎಂದು ತಿಳಿದು ಬಂದಿದೆ. ಬಿಎಂಟಿಸಿ ಮತ್ತು ಮೆಟ್ರೊವನ್ನು ಸಂಯೋಜಿಸಬೇಕು ಹಾಗೂ ಇವುಗಳ ಪ್ರತಿಸ್ಪರ್ಧಿಗಳಾಗಬಾರದು ಎಂಬ ಉದ್ದೇಶವೂ ಇದೆ.
ಬಿಎಂಟಿಸಿ ಸಾರಿಗೆ ಹಾಗೂ ಮೆಟ್ರೋ ಸಾರಿಗೆ ಸಾರ್ವಜನಿಕರಿಗೆ ಪೂರಕವಾಗಿ ಸೇವೆ ನೀಡುವಂತಾಗಬೇಕು. ಸದ್ಯ ನಮ್ಮ ಮೆಟ್ರೋವನ್ನು ವೈಟ್‌ಫೀಲ್ಡ್‌ವರೆಗೆ ವಿಸ್ತರಿಸಿರುವುದು ಬಿಎಂಟಿಸಿಗೆ ಪೂರಕವಾಗಿದೆ ಅಂತಲೂ ಭಾವಿಸಲಾಗುತ್ತಿದೆ.
ಬೆಂಗಳೂರು ಟ್ರಾಫಿಕ್‌ಗೆ ಪರಿಹಾರ
ವೈಟ್‌ಫಿಲ್ಡ್‌ವರೆಗೆ ಮೆಟ್ರೋ ವಿಸ್ತರಣೆ ಬಹುದಿನಗಳ ಬೇಡಿಕೆ ಆಗಿತ್ತು. ಅದು ಈಡೇರುತ್ತಿದ್ದಂತೆ ಬಿಎಂಟಿಸಿ ಫೀಡರ್ ಬಸ್ ಸೇವೆಗಳು ಆರಂಭವಾದವು. ಇದರಿಂದ ನಿಗಮದ ಮೇಲೆ ಒತ್ತಡ ಹೆಚ್ಚಾಯಿತು. ಫೀಡರ್ ಬಸ್‌ಗಳು ಹಾಗೂ ವಿಸ್ತರಿತ ನಮ್ಮ ಮೆಟ್ರೋ ಸೇವೆಗಳ ಸಂಯೋಜನೆ ಮಹಾನಗರದ ಸಂಚಾರ ದಟ್ಟಣೆ ಸಮಸ್ಯೆಗೆ ತಕ್ಕಮಟ್ಟಿನ ಕಡಿವಾಣ ಹಾಕಿದೆ ಎಂದು ಬಿಎಂಟಿಸಿ, ಮೆಟ್ರೋ ಮೊಬಿಲಿಟಿ ಕಾರ್ಡ್ ಕುರಿತು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ತಿಳಿಸಿದರು.

ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಮಾತನಾಡಿದ ಅಂಜುಮ್ ಪರ್ವೇಜ್ ಅವರು ಮಹಾನಗರಗಳ ಮೆಟ್ರೋದಲ್ಲಿ ಮೊಬಿಲಿಟಿ ಕಾರ್ಡ್ ಬಳಿಕೆಗೆ ಬರಲಿವೆ ಎಂದಿದ್ದರು. ಅಲ್ಲದೇ ಮೆಟ್ರೋ ನಿಲ್ದಾಣಗಳಲ್ಲಿ ಬೈಕ್-ಟ್ಯಾಕ್ಸಿಗಳನ್ನು BMRCL ಪರಿಚಯಿಸಲು ಯೋಜಿಸಿದೆ ಎಂದು ತಿಳಿಸಿದ್ದರು.
ಬಹುಮಾದರಿ ಸಾರಿಗೆ ಸೇವೆಗೆ ಚಿಂತನೆ
ಮಟ್ರೋ ಇಳಿದ ಕೂಡಲೇ ಗಮ್ಯಸ್ಥಾನಕ್ಕೆ ತೆರಳಲು ಸಾರ್ವಜನಿಕರಿಗೆ ತೊಂದರೆ ಆಗದಂತೆ ತಡೆರಹಿತ ಸೇವೆ ನೀಡುವ ಉದ್ದೇಶ ಹೊಂದಿದ್ದೇವೆ. ಬಹು-ಮಾದರಿ ಸಾರಿಗೆ ಸೇವೆಗಳನ್ನು ಬಳಸುವುದು ಪ್ರಾಥಮಿಕ ಚಿಂತನೆ ಆಗಿದೆ. ಒಂದು ರಾಷ್ಟ್ರಕ್ಕೆ ಒಂದು ಪ್ರಯಾಣ ಕಾರ್ಡ್ ಹೊಂದಿರಬೇಕು. ಇದು ಕ್ರಮೇಣ ಇತರ ಕ್ಷೇತ್ರಗಳಿಗೂ ವಿಸ್ತರಣೆ ಆಗಬೇಕು. ಅಂದರೆ ಮೆಟ್ರೊ, ಬಿಎಂಟಿಸಿ, ಬಸ್, ಕ್ಯಾಬ್, ಆಟೋಗಳ ಮೂಲಕ ತಡೆರಹಿತ ಪ್ರಯಾಣ ಸಾಧಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಈ ಸ್ಮಾರ್ಟ್ ಮೊಬಿಲಿಟಿ ಕಾರ್ಡ್‌ಗಳ ಬಳಕೆ ವಿಚಾರ ಇನ್ನೂ ಚರ್ಚೆ ಹಂತದಲ್ಲಿದೆ. ನನಸಾಗಿಸುವಲ್ಲಿ ನಿಗಮ ಆದಷ್ಟು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications