BMTC ಬಸ್ ಇದೀಗ ಹಸಿರಿನ ತೋಟ! ಚಾಲಕನ 'ಹಸಿರು' ಪ್ರೀತಿಗೆ ಪ್ರಯಾಣಿಕರು ಫಿದಾ...Viral News
ಬೆಂಗಳೂರು, ಜುಲೈ 17: ಬೆಂಗಳೂರು ನಗರ ಸಾರಿಗೆಯು ಲಕ್ಷಾಂತರ ಜನರ ಜೀವನಾಡಿಯಾಗಿದೆ. ನಿತ್ಯ ಉದ್ಯೋಗ, ಇತರ ಕೆಲಸ, ವಿದ್ಯಾಭ್ಯಾಸ, ಆಸ್ಪತ್ರೆ ಹೀಗೆ ಅನೇಕ ಕಾರಣಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳು ಆಸರೆಯಾಗಿವೆ. ಇಂತಹ ಬಸ್ ಓಡಿಸುವ ಬಸ್ ಚಾಲಕರೊಬ್ಬರು ಬಸ್ ಅನ್ನು ತನ್ನ ಎರಡನೇ ಮನೆಯಾಗಿಸಿಕೊಂಡಿದ್ದಾರೆ. ಬಸ್ ಅನ್ನು ಹಸಿರುಮಯವಾಗಿಸಿದ್ದಾರೆ. ಇದು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಬೆಂಗಳೂರಲ್ಲಿ ಈ ಬಸ್ ಒಳ ಹೋದರೆ ಸಾಕು ಇದೇನು ಬಸ್ಸಾ? ಇಲ್ಲ ಉದ್ಯಾನವೇ ಎಂದು ಪ್ರಯಾಣಿಕರು ಕನ್ಫ್ಯೂಸ್ ಆಗುತ್ತಾರೆ. ಅಷ್ಟರ ಮಟ್ಟಿಗೆ ಬಸ್ ಅನ್ನು ಹಸಿರಿನಿಂದ ಸಿಂಗಾರ ಗೊಳಿಸಲಾಗಿದೆ. ಬಸ್ ಚಾಲಕ, ಮುಂಬದಿ ಬಳಿ ಹೂಕುಂಡಗಳನ್ನು ಇಡಲಾಗಿದೆ. ಚೆಂದದ ಹೂವಿನ ಗಿಡಗಳ ಕುಂಡವನ್ನು ಪ್ರತಿ ಸೀಟು ಪಕ್ಕದಲ್ಲಿ ಇಡಲಾಗಿದೆ. ಒಳ ಬರುತ್ತಿದ್ದಂತೆ ಸಾಲಾಗಿ ಕಾಣುವ ಹೂವುಗಿಡಗಳು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ.

ಈ ಹಸಿರು ಬಸ್ ವಾತಾವರಣ ನಿಮಗೆ ಬಿಎಂಟಿಸಿಯ ರಾಜರಾಜೇಶ್ವರಿ ನಗರ ಡಿಪೋ-21 ರಲ್ಲಿ ಕಾಣಿಸುತ್ತದೆ. ಆರ್‌ಆರ್ ಡಿಫೋ ಚಾಲಕ ಬಸವರಾಜ್ ಅವರು ತಮ್ಮ KA 57 5779 ಬಸ್ಸನ್ನು ಎರಡನೇ ಮನೆಯಂತೆ ಪರಿಗಣಿಸಿದ್ದಾರೆ. ಅವರ ಈ ಕಾರ್ಯಕ್ಕೆ ಡಿಪೋ ವ್ಯವಸ್ಥಾಪಕ ಪ್ರದೀಪ್ ಅವರು ಚಾಲಕನ ಉಪಕ್ರಮವನ್ನು ಗೌರವಿಸಿದ್ದಾರೆ. ಪ್ರಯಾಣಿಕರಿಗಾಗಿ ನೀರಿನ ಬಾಟಲಿಗಳನ್ನು ಸಹ ಇರಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಹಸಿರು ಬಸ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಸ್‌ನಲ್ಲಿ ಎರಡು ಬದಿಯ ಸೀಟುಗಳ ಸಾಲಿನಲ್ಲಿ ಮೂರು ನಡುವೆ ಅಲ್ಲಲ್ಲಿ ಪ್ರಯಾಣಿಕರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿದೆ. ಬಾಟಲಿ ನೀರನ್ನೇ ಇಟ್ಟಿದ್ದಾರೆ. ನಿತ್ಯ ಹೂವುಕುಂಡಗಳಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಈ ಭಾಗದ ಪ್ರಯಾಣಿಕರು ಬಸ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಸ್ ಚಾಲಕರ ಹಸಿರು ಪ್ರೇಮಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಶೀಘ್ರವೇ ಬಸ್‌ಗಳಲ್ಲಿ ಇನ್ನಷ್ಟು ಗಿಡಗಳನ್ನು ಇಟ್ಟು ಸಿಂಗರಿಸುವ ಪ್ಲಾನ್ ಚಾಲಕ ಬಸವರಾಜ್ ಹೊಂದಿದ್ದಾರೆ.
One of the latest routes introduced by BMTC!
— Yathish (@YathishKumarS5) July 16, 2025
V-MF-1D
KR Pura Metro Station ↔️ Sarjapura
ಕೆ ಆರ್ ಪುರ ಮೆಟ್ರೋ ನಿಲ್ದಾಣ ↔️ ಸರ್ಜಾಪುರ
Refer to image alt for details
Frequency: 15-20 minutes
L: KA 57 F 2237
Depot: 28 (Hebbala)
R: KA 57 F 0318
Depot: 25 (HSR Layout)
📍📸: Sarjapura pic.twitter.com/hs9LJd5aBk
ಹೊಸ ಮಾರ್ಗದಲ್ಲಿ ಬಿಎಂಟಿ ಬಸ್ ಸಂಚಾರ
ಹೊಸ ಮಾರ್ಗಗಳಲ್ಲಿ ಬಸ್ ಸೇವೆ ಆರಂಭಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇದೀಗ ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಸರ್ಜಾಪುರವರೆಗೆ ಹೊಸ ಮಾರ್ಗದಲ್ಲಿ (V-MF-1D) ಬಸ್ ಸೇವೆ ಆರಂಭಿಸಿದೆ. ಪ್ರತಿ 15 ರಿಂದ 20 ನಿಮಿಷಗಳಿಗೆ ಒಂದರಂತೆ ಬಸ್‌ಗಳು ಸೇವೆ ಲಭ್ಯ ಇದೆ. ಹೆಬ್ಬಾಳ ಡಿಪೋ 28 ರಿಂದ KA 57 F 2237 ಸಂಖ್ಯೆ ಹಾಗೂ HSR ಲೇಔಟ್ ಡಿಪೋ 25ರಿಂದ KA 57 F 0318 ಸಂಖ್ಯೆಯ ಬಸ್‌ಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಲಿವೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.












Click it and Unblock the Notifications