ಹೊಸ ಮಾರ್ಗದಲ್ಲಿ ಬಿಎಂಟಿಸಿ ಚಕ್ರಸಾರಿಗೆ ಸಂಚಾರ
ಬೆಂಗಳೂರು, ಮಾ.10 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆಲವು ದಿನಗ ಹಿಂದೆ ಆರಂಭಿಸಿದ್ದ ಚಕ್ರ ಸಾರಿಗೆ ಮಾರ್ಗವನ್ನು ಮತ್ತಷ್ಟು ವಿಸ್ತರಣೆ ಮಾಡಿದೆ. ಇದರಿಂದ ಬನಶಂಕರಿ, ವಿಜಯನಗರ ಮತ್ತು ಸಿಟಿ ಸಿವಿಲ್ ಕೋರ್ಟ್ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಬನಶಂಕರಿ ಟಿಟಿಎಂಸಿ, ವಿಜಯನಗರ ಟಿಟಿಎಂಸಿ ಮತ್ತು ಸಿಟಿ ಸಿವಿಲ್ ಕೋರ್ಟ್ ಸುತ್ತ-ಮುತ್ತಲು ಕೆಲವು ದಿನಗಳ ಹಿಂದೆ ಚಕ್ರ ಸಾರಿಗೆಯನ್ನು ಬಿಎಂಟಿಸಿ ಪರಿಚಯಿಸಿತ್ತು. ಸದ್ಯ ಅದರ ಮಾರ್ಗಗಳನ್ನು ಮತ್ತಷ್ಟು ವಿಸ್ತರಣೆ ಮಾಡಿದ್ದು, ಹಲವು ಬಡಾವಣೆಗಳ ಮೂಲಕ ಈ ಮೂರು ಸ್ಥಳಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ. [ಬೆಂಗಳೂರು ರಸ್ತೆಯಲ್ಲಿ ವಿದ್ಯುತ್ ಚಾಲಿತ ಬಸ್]

ಚಕ್ರ 3 ಮತ್ತು 3ಎ : ಬನಶಂಕರಿ ಟಿಟಿಎಂಸಿಯಿಂದ ಬನಶಂಕರಿ ಟಿಟಿಎಂಸಿ ಮಾರ್ಗ ದಯಾನಂದ ಸಾಗರ್ ಕಾಲೇಜ್, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಜೌಟ್, ವಸಂತಪುರ, ಉತ್ತರಹಳ್ಳಿ, ಚನ್ನಸಂದ್ರ, ಬಿಇಎಂಎಲ್ ಲೇಔಟ್, ರಾಜರಾಜೇಶ್ವರಿ ದೇವಾಲಯ, ನಾಯಂಡನಹಳ್ಳಿ, ಪಿಇಎಸ್ ಕಾಲೇಜ್, ಕತ್ರಿಗುಪ್ಪೆ, ಕದಿರೇನಹಳ್ಳಿ.[ಬಿಎಂಟಿಸಿ ಪ್ರಯಾಣದರ 1 ರೂ ಹೆಚ್ಚಳ]
ಚಕ್ರ 4 ಮತ್ತು 4ಎ : ವಿಜಯನಗರ ಟಿಟಿಎಂಸಿಯಿಂದ ವಿಜಯನಗರ ಟಿಟಿಎಂಸಿ ಮಾರ್ಗ ಶ್ರೀನಿವಾಸನಗರ, ಬಿಡಿಎ ಕಾಂಪ್ಲೆಕ್ಸ್, ಅನ್ನಪೂರ್ಣೇಶ್ವರಿನಗರ, ಡಿಗ್ರೂಪ್ ಲೇಔಟ್, ವಿದ್ಯಾನಿಕೇತನ ಶಾಲೆ, ಮಲ್ಲತ್ತಹಳ್ಳಿ ಕ್ರಾಸ್, ಪಾಪರೆಡ್ಡಿ ಪಾಳ್ಯ, ನಾಗರಭಾವಿ 2ನೇ ಹಂತ, ನಾಗರಭಾವಿ ಸರ್ಕಲ್, ಚಂದ್ರ ಲೇಜೌಟ್.
ಚಕ್ರ 6 ಮತ್ತು 6 ಎ : ಸಿಟಿ ಸಿವಿಲ್ ಕೋರ್ಟ್ ನಿಂದ ಸಿಟಿ ಸಿವಿಲ್ ಕೋರ್ಟ್ ಮಾರ್ಗ ಕೆಆರ್ ಸರ್ಕಲ್, ಕಾರ್ಪೊರೇಷನ್, ಮಿಷನ್ ರಸ್ತೆ, ಊರ್ವಶಿ ಚಿತ್ರಮಂದಿರ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಮಯೋ ಹಾಲ್, ಶಿವಾಜಿನಗರ ಬಸ್ ನಿಲ್ದಾಣ, ಇಂಡಿಯನ್ ಎಕ್ಸ್ ಪ್ರೆಸ್ ಸರ್ಕಲ್, ವಿಧಾನಸೌಧ ಮತ್ತು ಕೆಆರ್ ಸರ್ಕಲ್.












Click it and Unblock the Notifications