BMTC; ಬಿಎಂಟಿಸಿ ನೌಕರರಿಗೆ ಸಿಹಿಸುದ್ದಿ ಕೊಟ್ಟ ಸಂಸ್ಥೆ

ಬೆಂಗಳೂರು, ನವೆಂಬರ್ 17: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರ ಎರವಲು ಸೇವೆಯ ಕುರಿತು ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿನ ಮಾರ್ಗಸೂಚಿ ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ
ಸಂಸ್ಥೆಯ ನೌಕರರನ್ನು ಎರವಲು ಸೇವೆಯ ಮೇಲೆ ನಿಯೋಜಿಸುವ ಕುರಿತು ಪರಿಷ್ಕೃತ ಮಾರ್ಗಸೂಚಿ ಎಂಬ ವಿಷಯ ಒಳಗೊಂಡಿದೆ.

BMTC Employees Deputation New Circular And Guidelines

ಸುತ್ತೋಲೆಯ ವಿವರಗಳು; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದ್ದು, ಸಂಸ್ಥೆಯ ಎಲ್ಲಾ ನೌಕರರು ಶಿಸ್ತು ಬದ್ಧರಾಗಿ ಕರ್ತವ್ಯ ನಿರ್ವಹಿಸುವುದು ಅತಿ ಮುಖ್ಯವಾಗಿರುತ್ತದೆ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಯ ನೌಕರರನ್ನು ಸರ್ಕಾರದ ಸಚಿವಾಲಯ/ ವಿವಿಧ ಇಲಾಖೆ ಹಾಗೂ ಇತರೆ ಸರ್ಕಾರಿ ಸ್ವಾಮ್ಯದ ನಿಗಮ ಮಂಡಳಿಗಳಿಗೆ ಎರವಲು ಸೇವೆ [Deputation] ಹಾಗೂ ಅನ್ಯ ಸೇವೆ ಆಧಾರದ ಮೇಲೆ ನಿಯೋಜಿಸಲು ಸಂಸ್ಥೆಯ ಸುತ್ತೋಲೆಯಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿರುತ್ತದೆ.

3/10/2023ರಂದು ನಡೆದ ಸಂಸ್ಥೆಯ 104ನೇ ನಿರ್ದೇಶಕ ಮಂಡಳ ಸಭೆಯ ಠರಾವು ಅಲ್ಲಿ ಅನುಮೋದಿಸಿರುವಂತೆ ಸರ್ಕಾರದ ಸುತ್ತೋಲೆಯ ಮಾರ್ಗಸೂಚಿಗಳನ್ನು ಕ್ರೂಡೀಕರಿಸಿ ಈ ಕೆಳಕಂಡಂತೆ ಪರಿಷ್ಕೃತ ಸಮಗ್ರ ಸೀತಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದೆ.

* ಎರವಲು ಸೇವೆ ನಿಯೋಜನೆಯ ಮಿತಿಯನ್ನು ಸಂಸ್ಥೆಯ ಒಟ್ಟು ಸಿಬ್ಬಂದಿಗಳ ಶೇಕಡಾ 0.25ಕ್ಕೆ ಮಾತ್ರ ಸೀಮಿತಗೊಳಸಲಾಗಿದೆ ಮತ್ತು ಮೇಲ್ಕಂಡ ಗರಿಷ್ಠ ಮಿತಿಗೆ ಒಳಪಟ್ಟು ಸಂಸ್ಥೆಯಿಂದ ಎರವಲು ಸೇವೆಯ ಮೇರೆಗೆ ನಿಯೋಜನೆ ಮಾಡುವ ವಿವೇಚನಾಯುತ ಅಧಿಕಾರವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಲಾಗಿದೆ.

* ಎರವಲು ಸೇವೆ ಮೇಲೆ ನಿಯೋಜನೆಯು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಯವ್ಯಾಪ್ತಿ ಪ್ರದೇಶಕ್ಕೆ ಮಾತ್ರ ಒಳಪಟ್ಟಿರುತ್ತದೆ.

* ಎರವಲು ಸೇವೆ ಆಧಾರದ ಮೇಲೆ ನಿಯೋಜನೆಗೊಳ್ಳುವ ನೌಕರರು ಮಾತೃ ಸಂಸ್ಥೆಯಲ್ಲಿ ಕಡ್ಡಾಯವಾಗಿ ಕನಿಷ್ಠ 10 ವರ್ಷಗಳ ಸೇವೆಯನ್ನು ಮೂಲ ಹುದ್ದೆಯಲ್ಲಿ ಸಲ್ಲಿಸಿರಬೇಕು.

* ಎರವಲು ಸೇವೆ ಆಧಾರದ ಮೇಲೆ ನಿಯೋಜನೆಗೊಳ್ಳುವ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಗೆ ಸಮನಾದ ದರ್ಜೆ/ ಹುದ್ದೆಯಲ್ಲಿ ಮಾತ್ರ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ನಿಯೋಜಿಸುವುದು. (ಸಾಮಾನ್ಯ ಕಛೇರಿ ಕೆಲಸ ಕಾರ್ಯದ ಹುದ್ದೆಗಳಿಗೆ ತಾಂತ್ರಿಕ, ಚಾಲನಾ ಮತ್ತು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲು ಅವಕಾಶವಿರುವುದಿಲ್ಲ).

* ಎರವಲು ಸೇವೆ ಆಧಾರದ ಮೇಲೆ ನಿಯೋಜನೆಗೊಳ್ಳುವ ನೌಕರರು ಸಂಸ್ಥೆಯ ಸೇವೆಯಿಂದ ವಜಾಗೊಂಡು ನಂತರ ಮರುನೇಮಕಗೊಂಡಿದ್ದಲ್ಲ ಅಂತವರು ನಿಯೋಜನೆಗೆ ಅರ್ಹರಲ್ಲ.

* ಎರವಲು ಸೇವೆ ಆಧಾರದ ಮೇಲೆ ನಿಯೋಜನೆಗೊಳ್ಳುವ ನೌಕರರ ವಿರುದ್ಧ ಸಂಸ್ಥೆಯಲ್ಲಿ ಯಾವುದೇ ಪ್ರಕರಣ (ಶಿಸ್ತು/ ಗೈರು / ಅಪಘಾತ) ಬಾಕಿ ಇದ್ದಲ್ಲಿ ಅಂತವರು ನಿಯೋಜನೆಗೆ ಅರ್ಹರಲ್ಲ.

* ಎರವಲು ಸೇವೆ ಆಧಾರದ ಮೇಲೆ ನಿಯೋಜನೆಗೊಳ್ಳುವ ನೌಕರರು ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ನಿಯೋಜನೆಗೆ ಅರ್ಹರು.

* ನೌಕರರುಗಳನ್ನು ಸರ್ಕಾರ ಮತ್ತು ಇತರೆ ಇಲಾಖೆಗಳಿಗೆ ಗರಿಷ್ಠ 5 ವರ್ಷದ ಅವಧಿಗೆ ಎರವಲು ಸೇವೆಯ ಆಧಾರದ ಮೇಲೆ ನಿಯೋಜಿಸುವುದು.

* ನಿಯೋಜನೆ ಪಡೆಯುವ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಎರವಲು ಸೇವೆಯ ಮೇಲೆ ನಿಯೋಜನೆ ಪಡೆಯಲು ಅವಕಾಶವಿದ್ದಲ್ಲಿ ಮಾತ್ರ ನಿಯೋಜಿಸುವುದು.

ಮೇಲ್ಕಂಡ ಮಾರ್ಗದರ್ಶನಗಳನ್ನು ಸಂಬಂಧಪಟ್ಟವರೆಲ್ಲರೂ ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಂಡು ಕಟ್ಟುನಿಟ್ಟಾಗಿ ಪಾಲಿಸುವುದು. ಸದರಿ ಸುತ್ತೋಲೆಯು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಸುತ್ತೋಲೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+