Namma Metro Tragedy: ಮೃತ ಆಟೋ ಚಾಲಕ ಕುಟುಂಬಕ್ಕೆ BMRCL ಪರಿಹಾರ: ಗುತ್ತಿಗೆದಾರ ಅಮಾನತಿಗೆ ಆಗ್ರಹ
ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಜಾಲ ವಿಸ್ತರಿಸುತ್ತಿರುವ ನಮ್ಮ ಮೆಟ್ರೋ ಕಾಮಗಾರಿಗೆಂದು ತರಲಾಗುತ್ತಿದ್ದ ವಯಾಡೆಕ್ಟ್ ಬಿದ್ದ ಆಟೋ ಚಾಲಕ ಸಾವನ್ನಪ್ಪಿದ್ದಾನೆ. ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಾವಿಗೆ BMRCL ಹೊಣೆ ಮಾಡಬೇಕು. ಗುತ್ತಿಗೆದಾರರನ್ನು ಅಮಾನತು ಮಾಡಬೇಕು ಎಂದು ಬಿಜೆಪಿ ಸಂಸದರು ಆಗ್ರಹಿಸಿದ್ದಾರೆ. ಇದೇ ವೇಳೆ ಘಟನೆ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರತಿಕ್ರಿಯಿಸಿದೆ.
ಬೆಂಗಳೂರು ಮೆಟ್ರೋದಿಂದ ನೀಲಿ ಮಾರ್ಗದ ಕಾಮಗಾರಿ ಕೆಲಸ ನಡೆಯುತ್ತಿದೆ. ಈ ಮಾರ್ಗಕ್ಕಾಗಿ ಮಂಗಳವಾರ ರಾತ್ರಿ 12:00 ಗಂಟೆಗೆ ಯಲಹಂಕದ ಕೂಗಿಲು ಕ್ರಾಸ್ ಬಳಿ ವಯಾಡೆಕ್ಟ್ ಹೊತ್ತು ತಂದ ಲಾರಿ ತೆರಳುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಈ ದುರದೃಷ್ಟಕರ ಘಟನೆಯಲ್ಲಿ ಆಟೋ ಚಾಲಕನೊಬ್ಬ ಸಾವನ್ನಪ್ಪಿದ ಮಾರಕ ಅಪಘಾತದ ಬಗ್ಗೆ ವಿಷಾಧವಿದೆ ಎಂದು BMRCL ಬುಧವಾರ ತಿಳಿಸಿದೆ.

ವಾಡಿಯಾರ್‌ಪುರ ಕಾಸ್ಟಿಂಗ್ ಯಾರ್ಡ್‌ನಿಂದ ಗರ್ಡರ್ ಅನ್ನು ಸಾಗಿಸುತ್ತಿದ್ದ ಲಾಂಗ್ ಕ್ಯಾರಿಯರ್ ಟ್ರಕ್ ಗರ್ಡರ್‌ನ ಸರಂಜಾಮು ಟ್ರಕ್ ತಿರುವು ಪಡೆಯುವಾಗ ತುಂಡಾಗಿದೆ. ಈ ವೇಳೆ ಗರ್ಡರ್ ಆಟೋರಿಕ್ಷಾದ ಮೇಲೆ ಬಿದ್ದು ಚಾಲಕ ಸಾವನ್ನಪ್ಪಿದ್ದಾನೆ. ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಆಟೋರಿಕ್ಷಾ ಚಾಲಕನ ಶವವನ್ನು ಕ್ರೇನ್ ಬಳಸಿ ಹೊರತೆಗೆದು ವೈದ್ಯಕೀಯ ಚಿಕಿತ್ಸೆ ಗೆ ಒಳಪಡಿಸದ್ದರೂ ಫಲಿಸಲಿಲ್ಲ. ವೈದ್ಯಕೀಯ ಅಧಿಕಾರಿಗಳು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಈ ಅಕಾಲಿಕ ಜೀವಹಾನಿಗೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸುತ್ತದೆ. ಮೃತ ಆಟೋ ಚಾಲಕ ಕುಟುಂಬಕ್ಕೆ ನಮ್ಮ ತೀವ್ರ ಸಂತಾಪ ಸೂಚಿಸುತ್ತೇವೆ. ಪ್ರೋಟೋಕಾಲ್ ಪ್ರಕಾರ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಾಗಲಿ ಅಥವಾ ನಿರ್ಮಾಣದಲ್ಲಾಗಲಿ, ಸಾರ್ವಜನಿಕರ ಸುರಕ್ಷತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅತ್ಯಂತ ಅಧ್ಯತೆ ನೀಡುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು BMRCL ಭರವಸೆ ನೀಡಿದೆ.
Tragic incident late last night in Bengaluru, where an auto driver was killed after a Namma Metro viaduct segment collapsed. A life lost due to gross negligence. BMRCL must be held accountable. Contractor must be suspended, booked, and a thorough safety audit launched. pic.twitter.com/oSHn2ZP1xR
— P C Mohan (@PCMohanMP) April 16, 2025
ಘಟನೆಗೆ ಬಿಜೆಪಿ ಸಂಸದ ಆಕ್ರೋಶ
ಬೆಂಗಳೂರಿನ ಈ ಘಟನೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ಆಕ್ರೋಶ ಹೊರ ಹಾಕಿದ್ದಾರೆ. ನಿನ್ನೆ ತಡರಾತ್ರಿ ನಡೆದ ದುರಂತ ಘಟನೆಯಲ್ಲಿ, ನಮ್ಮ ಮೆಟ್ರೋ ವಯಾಡಕ್ಟ್ ಭಾಗ ಕುಸಿದು ಆಟೋ ಮೇಲೆ ಬಿದ್ದಿದೆ. ಭಾರೀ ಗ್ರಾತದ ವಯಾಡೆಕ್ಟ್ ಬಿದ್ದ ರಭಸಕ್ಕೆ ಆಟೋ ಅಪಚ್ಚಿಯಾಗಿದ್ದು, ಚಾಲಕ ಸಾವನ್ನಪ್ಪಿದ್ದಾನೆ. ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಒಂದು ಜೀವ ಬಲಿಯಾಗಿದೆ ಎಂದು ಅವರು ದೂರಿದರು.
ಈ ಘಟನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೊಣೆಗಾರರನ್ನಾಗಿ ಮಾಡಬೇಕು. ವಯಾಡೆಕ್ಟ್ ತರಿಸುತ್ತಿದ್ದ ಗುತ್ತಿಗೆದಾರರನ್ನು ಅಮಾನತುಗೊಳಿಸಬೇಕು. ಪ್ರಕರಣ ದಾಖಲಿಸಬೇಕು ಮತ್ತು ಸಂಪೂರ್ಣ ಸುರಕ್ಷತಾ ಲೆಕ್ಕಪರಿಶೋಧನೆ ಆರಂಭಿಸುವಂತೆ ಅವರು ಒತ್ತಾಯಿಸಿದ್ದಾರೆ.













Click it and Unblock the Notifications