Get Updates
Get notified of breaking news, exclusive insights, and must-see stories!

Lalbagh Flower Show .ಬೆಂಗಳೂರು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಜ.26ಕ್ಕೆ ಮೆಟ್ರೋ ಪ್ರಯಾಣಿಕರಿಗೆ ಪೇಪರ್ ಟಿಕೆಟ್

ಬೆಂಗಳೂರು, ಜನವರಿ 23: ಗಣರಾಜ್ಯೋತ್ಸವ (ಜ.26) ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನಕ್ಕೆ '213ನೇ ಫಲಪುಷ್ಪ ಪ್ರದರ್ಶನ' ಕಣ್ತುಂಬಿಕೊಳ್ಳಲು ಬರುವವರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಪೇಪರ್ ಟಿಕೆಟ್ ಪರಿಚಯಿಸಿದೆ.

ಜನವರಿ 26ರಂದು ಗುರುವಾರ ಒಂದು ದಿನ ಲಾಲ್‌ ಬಾಗ್ ಉದ್ಯಾನಕ್ಕೆ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅಲ್ಲಿನ ಜನದಟ್ಟಣೆ ಕಡಿಮೆ ಮಾಡಲು ಹಾಗೂ ಉದ್ಯಾನಕ್ಕೆ ಫಲಪುಷ್ಪ ಪ್ರದರ್ಶನ ನೋಡಲು ಬರುವವರಿಗೆ ಸಹಾಯಾರ್ಥವಾಗಿ ಬಿಎಂಆರ್‌ಸಿಎಲ್‌ ಪೇಪರ್ ಟಿಕೆಟ್ ನೀಡಲಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 08 ಗಂಟೆವರೆಗೆ ಲಾಲ್ ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು 30ರೂ. ನೀಡಿ ಪೇಪರ್ ಟಿಕೆಟ್ ಪಡೆದು ಸಂಚರಿಸಬಹುದಾಗಿದೆ. ಈ ವ್ಯವಸ್ಥೆ ಸದರಿ ದಿನ ಮಾತ್ರ ಮಾನ್ಯವಾಗಿರುತ್ತದೆ. ಜೊತೆಗೆ ಬೆಳಗ್ಗೆ 08 ಗಂಟೆಯಿಂದ ಸಂಜೆ 06 ಗಂಟೆವರೆಗೆ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಈ ಪೇಪರ್ ಟಿಕೆಟ್ ಖರೀದಿಸಬಹುದಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

BMRCL Introduced Paper Ticket on Republic Day for easy travel to Lal Bagh Flower Show.

ಮೆಟ್ರೋ ಪ್ರಯಾಣಿಕರು ಲಾಲ್ ಬಾಗ್ ನಿಲ್ದಾಣದ ಎಎಫ್‌ಸಿ ಗೇಟ್ ಪ್ರವೇಶಿಸಲು ಮತ್ತು ಯಾವುದೇ ನಿಲ್ದಾಣದಿಂದ ನಿರ್ಗಮಿಸಲು ಈ ಪೇಪರ್ ಟಿಕೆಟ್ ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ. ಸಾರ್ವಜನಿಕರು ಈ ಸೇವೆಯ ಸದುಪರಯೋಗ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಗಣರಾಜ್ಯೋತ್ಸವ (ಜ.26) ಪ್ರಯುಕ್ತ ರಾಜ್ಯ ತೋಟಗಾರಿಕೆ ಇಲಾಖೆಯು ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನದಲ್ಲಿ ಜನವರಿ 20ರಿಂದ 31ರವರೆಗೆ ಹನ್ನೊಂದು ದಿನಗಳ ಕಾಲ 'ಫಲಪುಷ್ಪ ಪ್ರದರ್ಶನ' ನಡೆಸುತ್ತಿದೆ. ಸುಮಾರು 15ಲಕ್ಷಕ್ಕೂ ಹೆಚ್ಚು ಮಂದಿ ಉದ್ಯಾನಕ್ಕೆ ಬರುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ. ಹೀಗಾಗಿ ಲಾಲ್‌ ಮೆಟ್ರೋ ನಿಲ್ದಾಣ, ಉದ್ಯಾನದ ಸುತ್ತಮುತ್ತಲಿನ ರಸ್ತರೆಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು, ಸರಿತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ ಸಮಯ ಉಳಿತಾಯ ಮಾಡಲು ಬೆಂಗಳೂರು ಮೆಟ್ರೋ ರೈಲ್ ಕಾಪೋರೇಷನ್ ಲಿಮಿಟೆಡ್ ಈ ಪೇಪರ್ ಟಿಕೆಟ್ ಪರಿಚಯಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+