ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

Recommended Video

      ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ | Oneindia Kannada

      ಬೆಂಗಳೂರು, ಜೂನ್‌ 29:ಆರು ಬೋಗಿಯ ಮೆಟ್ರೋ ರೈಲು ನೇರಳೆ ಮಾರ್ಗದಲ್ಲಿ ಈಗಾಗಲೇ ಸಂಚಾರ ಆರಂಭಿಸಿದೆ. ಕೇವಲ ಪೀಕ್‌ ಅವಧಿಯಲ್ಲಿ ಮಾತ್ರ ಮೆಟ್ರೋ ಸಂಚಾರ ಮಾಡುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿತ್ತು. ಆದರೆ ಇದೀಗ ಪ್ರಯಾಣಿಕರಿಂದ ಭಾರಿ ಬೇಡಿಕೆ ಕೇಳಿಬಂದಿರುವುದರಿಂದ ರೈಲು ಸೇವೆಯನ್ನು ಒಂದು ಗಂಟೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.

      ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಪೂರ್ಣ ಮಾರ್ಗದಲ್ಲಿ ಒಟ್ಟು ಎರೆಡು ಟ್ರಿಪ್‌ ನಡೆಸಲು ತೀರ್ಮಾನಿಸಲಾಗಿದೆ. ಆರು ಬೋಗಿಯ ಮೆಟ್ರೋ ಸೇವೆ ಆರಂಭವಾದರೂ ಬೆಳಗ್ಗೆ ಪೂರ್ಣ ಮಾರ್ಗದ ಸಂಚಾರ ನಡೆಯುತ್ತಿರಲಿಲ್ಲ.

      ಇದನ್ನು ಶಾರ್ಟ್ ಲೂಪ್‌ ಸೇವೆಗಾಗಿ ಬಳಸಿಕೊಳ್ಳುತ್ತಿದ್ದರಿಂದ ಬೈಯಪ್ಪನಹಳ್ಳಿ-ವಿಜಯನಗರ ನಿಲ್ದಾಣಗಳ ನಡುವೆ ಮಾತ್ರ ಸಂಚಾರ ನಡೆಸಲಾಗುತ್ತಿತ್ತು. ಪ್ರತಿ ದಿನ ಬೆಳಗ್ಗೆ ಕಚೇರಿಗೆ ಹೋಗುವವರಿಗೆ ಆರು ಬೋಗಿಯ ಮೆಟ್ರೋದಿಂದ ಹೆಚ್ಚು ಲಾಭವಾಗುತ್ತಿರಲಿಲ್ಲ.

      BMRCL extends six coaches metro service to two hour

      ಮೈಸೂರು ರಸ್ತೆ ನಿಲ್ದಾಣದಿಂದ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರಿಗೆ ಆರು ಬೋಗಿ ಮೆಟ್ರೋ ಸೇವೆ ದೊರೆಯುತ್ತಿರಲಿಲ್ಲ. ಸಂಜೆ 5 ಗಂಟೆ ಬಳಿಕ ಮಾತ್ರ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಪೂರ್ಣ ಮಾರ್ಗದಲ್ಲಿ ಸಂಚಾರ ನಡೆಸಲಾಗುತ್ತಿತ್ತು. ಈಗ ವೇಳಾಪಟ್ಟಿ ಬದಲಿಸಿರುವ ನಿಗಮ, ಬೆಳಗ್ಗೆ ಎರಡು ಟ್ರಿಪ್‌ ನಡೆಸಲು ತೀರ್ಮಾನಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+