Namma Metro: ಬಿಎಂಟಿಸಿ ರೀತಿ ಆದಾಯ ಹೆಚ್ಚಳಕ್ಕೆ ನಮ್ಮ ಮೆಟ್ರೋ ಜಾಹೀರಾತು ಪ್ರಚಾರ
ಬೆಂಗಳೂರು, ಜೂನ್ 10: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ ಬಳಿಕ ಬೆಂಗಳೂರಿನ ನಾಗರಿಕರು ನೀವು ಜಾಹೀರಾತು, ಪಾರ್ಕಿಂಗ್, ನಿಲ್ದಾಣಗಳ ಕಟ್ಟಡಗಳಲ್ಲಿ ಮಳಿಗೆ ಬಾಡಿಗೆ ಮೂಲಕ ಆದಾಯ ಹೆಚ್ಚಿಸುವ ಮೂಲ ಕಂಡುಕೊಳ್ಳುವಂತೆ ಸಲಹೆ ನೀಡಿದ್ದರು. ಅದರಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಆದಾಯಕ್ಕೆ ಹೊಸ ದಾರಿ ಕಂಡುಕೊಂಡಿದೆ. ಪರಿಣಾಮ ಹಸಿರು ಮತ್ತು ನೇರಳೆ ಮಾರ್ಗದ ರೈಲುಗಳು ಗುರುತೇ ಸಿಗದಂತೆ ಬದಲಾಗಿವೆ.
ಹೌದು, ಬೆಂಗಳೂರು ನಮ್ಮ ಮೆಟ್ರೋ ರೈಲುಗಳ ಬಣ್ಣ ಬದಲಾಗಿವೆ. ರೈಲು ಪೂರ್ತಿ ಜಾಹೀರಾತು ಅಳವಡಿಕೆ ಆಗಿದೆ. ಮೆಟ್ರೋ ರೈಲು ಕೆಂಪು ಬಣ್ಣದ ರೈಲುಗಳಾಗಿ ಬದಲಾಗಿವೆ, ಕಾರಣ ಜಾಹೀರಾತು ಅಳವಡಿಸಿಕೊಂಡಿರುವುದು. ಜಾಹೀರಾತು ಮೂಲಕ ಆದಾಯ ಹೆಚ್ಚಳಕ್ಕೆ BMRCL ನಿರ್ಧರಿಸಿದೆ. ಮೆಟ್ರೋ ರೈಲುಗಳ ಹೊರ ಭಾಗವನ್ನು ಜಾಹೀರಾತುಗಳಿಂದಲೇ ತುಂಬಿಸಲು ನಿರ್ಧರಿಸಿದೆ. ಅದರ ಭಾಗವಾಗಿ ಈಗಾಗಲೇ ರೈಲುಗಳ ಸುತ್ತಮುತ್ತ ಕೆಂಪು ಬಣ್ಣದ ಜಾಹೀರಾತುಗಳು ರಾರಾಜಿಸುತ್ತಿವೆ.

57 ರೈಲುಗಳಿಗೆ ಜಾಹೀರಾತು..
ನಮ್ಮ ಮೆಟ್ರೋ ಹೊಸ ಪ್ರಯತ್ನ ಕಂಡು ವಿವಿಧ ಬ್ರ್ಯಾಂಡ್‌ಗಳ ಕಂಪನಿಗಳು ಸಹ ನಮ್ಮ ಮೆಟ್ರೋ ಜಾಹೀರಾತು ಯೋಜನೆಯತ್ತ ಮುಖ ಮಾಡುವ ನಿರೀಕ್ಷೆ ಇದೆ. ಸದ್ಯ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗ ಸೇರಿ ಒಟ್ಟು 57ರೈಲುಗಳು ಸಂಚರಿಸುತ್ತವೆ. ಅದರಲ್ಲಿ ಬಹುಪಾಲು ರೈಲುಗಳು ವೈಟ್‌ಫಿಲ್ಡ್-ಚಲಘಟ್ಟ ಮಾರ್ಗದಲ್ಲಿ ಸಂಚರಿಸುತ್ತವೆ. ಕೆಲವು ಮೆಟ್ರೋ ರೈಲುಗಳಿಗೆ ಜಾಹೀರಾತು ಅಳವಡಿಸಿದ ಮೆಟ್ರೋ ರೈಲಿನ ವಿಡಿಯೋ ಹಾಗೂ ಫೋಟೋಗಳನ್ನು BMRCL ಹಂಚಿಕೊಂಡಿದೆ. ಎಲ್ಲ ಮೆಟ್ರೋ ರೈಲುಗಳಿಗೂ ಈ ಉಪಕ್ರಮ ವಿಸ್ತರಣೆ ಆಗಲಿದೆ.
ನಮ್ಮ ಮೆಟ್ರೋ ದರ ಏರಿಕೆ ಜೊತೆಗೆ ಜಾಹೀರಾತುಗಳಿಂದ ವಾರ್ಷಿಕವಾಗಿ 25 ಕೋಟಿ ರೂಪಾಯಿ ಆದಾಯ ಗಳಿಕೆಗೆ ಈಗಾಗಲೇ ಪ್ಲಾನ್ ಮಾಡಿಕೊಂಡಿತ್ತು. ಅದರಂತೆ ವಿವಿಧ ಕಂಪನಿಗಳ ಜಾಹೀರಾತು ಪ್ರದರ್ಶನಕ್ಕೆ ಮುಂದಾಗಿದೆ. ಇಂತಿಷ್ಟು ವಾರ ಇಲ್ಲವೇ ತಿಂಗಳುಗಳ ಕಾಲ ಒಪ್ಪಂದ ಮೇರೆಗೆ ಜಾಹೀರಾತು ಪ್ರದರ್ಶಿಸಿಸುವ ಉಪಕ್ರಮ ಇದಾಗಿದೆ. ಬೇರೆ ಬೇರೆ ಮೂಲಗಳಿಂದ ಜಾಹೀರಾತು ಬಂದರೂ ಸಹಿತ, ಜನಾಕ್ರೋಶ ವ್ಯಕ್ತವಾದರೂ ಮೆಟ್ರೋ ದರ ಇಳಿಕೆಗೆ BMRCL ಮುಂದಾಗಿಲ್ಲ.
ಬಿಎಂಟಿಸಿ ನಿಮಮ ಅನುಸರಿಸಿದ ನಮ್ಮ ಮೆಟ್ರೋ
ಬೆಂಳೂರಿನಲ್ಲಿ ಜಾಹೀರಾತು, ಬ್ಯಾನರ್ ಇತರ ಜಾಹೀರಾತು ಹಾಕಿ, ಎಲ್ಲೆಂದರಲ್ಲಿ ಅಳವಡಿಸಿ ನಗರದ ಸೌಂದರ್ಯ ಹಾಳು ಮಾಡಿದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ದಂಡ ಕಟ್ಟಬೇಕಾಗುತ್ತದೆ. ಅನುಮತಿ ಮೆರೆಗೆ ಪ್ರದರ್ಶಿಸಬಹುದು. ಈ ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳ ಸುತ್ತಲೂ ಪಾನ್‌ಮಸಾಲಾ, ಮಸಾಲೆ ಇನ್ನಿತರ ಕಂಪನಿಗಳ ಜಾಹೀರಾತು ನೋಡಿದ್ದೇವೆ. ಈ ಮೂಲದಿಂದ ಆದಾಯ ತರುವುದು ಈ ಉಪಕ್ರಮ ಉದ್ದೇಶವಾಗಿದೆ. ಇದೀಗ ಅದೇ ಉಪಾಯವನ್ನು ನಮ್ಮ ಮೆಟ್ರೋ ಅನುಸರಿಸಿದೆ.












Click it and Unblock the Notifications