Get Updates
Get notified of breaking news, exclusive insights, and must-see stories!

Namma Metro: ಮೆಟ್ರೋ ನಿಲ್ದಾಣದಿಂದ ಶುಲ್ಕ ರಹಿತ ಆದಾಯ ಸಂಗ್ರಹಕ್ಕೆ ನಿರ್ಧಾರ, ಪೂರ್ಣ ಮಾಹಿತಿ ತಿಳಿಯರಿ

ಬೆಂಗಳೂರು ನಮ್ಮ ಮೆಟ್ರೋ ಶುಲ್ಕ ವಿಲ್ಲದೇ ಆದಾಯವನ್ನು ಗಳಿಸುವ ಮೆಟ್ರೋ ನಿಲ್ದಾಣಗಳಲ್ಲಿ ವಿನೂತನ ಪ್ರಯತ್ನವೊಂದನ್ನು ಮಾಡಲು ಮುಂದಾಗಿದೆ. ಈ ಸಂಬಂಧ ಟೆಂಡರ್ ಕರೆದಿದೆ. ಏನು ಈ ಯೋಜನೆ ಎಂಬ ಮಾಹಿತಿ ನಿಮ್ಮ ಮುಂದೆ.

ಬೆಂಗಳೂರು, ಫೆಬ್ರವರಿ 08: ಬೆಂಗಳೂರು ನಮ್ಮ ಮೆಟ್ರೋ ಶುಲ್ಕ ವಿಲ್ಲದೇ ಆದಾಯವನ್ನು ಗಳಿಸುವ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಈ ಸಂಬಂಧ ಟೆಂಡರ್ ಕರೆದಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಜಾಗ ಅಭಿವೃದ್ಧಿಪಡಿಸವುದು ಸೇರಿದಂತೆ ಹೊಸ ಯೋಜನೆಗೆ ಅಗತ್ಯ ಸಲಹೆಗಾರರನ್ನು ಆಯ್ಕೆ ಮಾಡಲು ಅಲ್ಪಾವಧಿಯ ಟೆಂಡರ್ ಆಹ್ವಾನಿಸಿದೆ. ಟೆಂಡರ್ ಪಡೆಯುವವರು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಖಾಲಿ ಜಾಗವನ್ನು ಯೋಜನೆಗೆ ಬೇಕಾದಂತೆ ಇನ್ನಷ್ಟು ಅಭವೃದ್ಧಿಗೊಳಿಸುವ ಜೊತೆಗೆ ನಿಲ್ದಾಣಗಳಲ್ಲಿ ಹೆಚ್ಚಿನ ಚಿಲ್ಲರೆ ಮಾರಾಟ ಮಳಿಗೆ ವ್ಯವಸ್ಥೆ ಮಾಡಲಿದೆ. ಒಳಾಂಗಣ ಜಾಹೀರಾತುಗಳಿಗೆ ಅವಕಾಶ ನೀಡುವುದು ಸೇರಿದಂತೆ ಹಲವು ಉಪಕ್ರಮಗಳನ್ನು ನಮ್ಮ ಮೆಟ್ರೋ ಪರಿಚಯಿಸಲಿದೆ.

BMRCL decided to toll-free revenue collection through indoor advertising, setup retail outlets

ಈ ಕುರಿತು ಟೆಂಡರ್ ಮುಂದಿನ ತಿಂಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಇದಾದ ಬಳಿಕವೆ ಸಲಹೆಗಾರು ಆಯ್ಕೆಯಾಗುತ್ತಾರೆ. ಅವರು ನಿಲ್ದಾಣದ ವಿಶ್ಲೇಷಣೆ, ಉಪಕ್ರಮದ ಪರಿಕಲ್ಪನೆ ಯೋಜನೆ, ಖಾಸಗಿ ವಲಯದ ಸಹಭಾಗಿತ್ವದ ಮೂಲಕ ನಿಲ್ದಾಣದ ಜಾಗವನ್ನು ಅಭಿವೃದ್ಧಿಪಡಿಸುತ್ತಾರೆ. ನಂತರ ಶುಲ್ಕ ರಹಿತ ಆದಾಯ ಸಂಗ್ರಹ ಯೋಜನೆ ಅನುಷ್ಠಾನ, ಮೌಲ್ಯಮಾಪನ ಸೇರಿದಂತೆ ಮಾರುಕಟ್ಟೆ ಮತ್ತು ಬೇಡಿಕೆಯ ಮೌಲ್ಯಮಾಪನದ ಜವಾಬ್ದಾರಿ ಹೊರುತ್ತಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

12 ವರ್ಷಗಳ ಪರವಾನಗಿ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನಗರದ ಒಟ್ಟು 22 ಮೆಟ್ರೋ ನಿಲ್ದಾಣಗಳಲ್ಲಿ ಚಿಲ್ಲರೆ ಮಳಿಗೆಗಳ ಸ್ಥಾಪನೆಗೆ ಆಸಕ್ತರಿಗೆ ಸ್ಥಳಾವಕಾಶ ಒದಗಿಸಲು ಪರವಾನಗಿ ನೀಡಲು ಮುಂದಾಗಿದೆ. ಈ ಸಂಬಂಧ ಟೆಂಡರ್ ಆಹ್ವಾನಿಸಿದೆ.

ವಿವಿಧೆಡೆ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಿರುವ 1.4 ಲಕ್ಷ ಚದರ ಅಡಿ ಖಾಲಿ ಜಾಗಗಳಿಗೆ (97 ಸ್ಥಳಗಳು) ಪರವಾನಗಿ ನೀಡಲು ಆಸಕ್ತ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಟೆಂಡರ್ ಪರವಾನಗಿ ಅವಧಿಯು 12 ವರ್ಷ ಎಂದು ತಿಳಿಸಲಾಗಿದೆ. ಪರವಾನಗಿ ಜೊತೆಗೆ ಉಪಪರವಾನಗಿ ಇಲ್ಲವೇ ಉಪಗುತ್ತಿಗೆಯನ್ನು ನೀಡುವುದಿಲ್ಲ ಎಂದು ನಮ್ಮ ಮೆಟ್ರೋ ಸ್ಪಷ್ಟಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

BMRCL decided to toll-free revenue collection through indoor advertising, setup retail outlets

ಆ 22 ಮೆಟ್ರೋ ನಿಲ್ದಾಣಗಳು ಯಾವವು?

ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್, ವಿಜಯನಗರ, ಕೆಂಗೇರಿ ಬಸ್ ಟರ್ಮಿನಲ್, ಬೈಯಪ್ಪನಹಳ್ಳಿ, ಎಸ್‌ವಿ ರಸ್ತೆ, ಇಂದಿರಾನಗರ, ಹಲಸೂರು, ಟ್ರಿನಿಟಿ, ಎಂಜಿ ರಸ್ತೆ, ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ರಾಜಾಜಿನಗರ, ಶ್ರೀರಾಂಪುರ, ಮಂತ್ರಿಮಾಲ್-ಸಂಪಿಗೇ ರಸ್ತೆ, ಯಶವಂತಪುರ, ಮಹಾಲಕ್ಷ್ಮಿ, ನ್ಯಾಷನಲ್ ಕಾಲೇಜು, ಜಯನಗರ, ಬನಶಂಕರಿ ಮತ್ತು ಜೆಪಿ ನಗರಗಳಲ್ಲಿ ಈ ಮಳಿಗೆ ಸ್ಥಾಪನೆ, ಒಳಾಂಗಣ ಜಾಹೀರಾತು ಸೇರಿದಂತೆ ನಮ್ಮ ಮೆಟ್ರೋ ಯೋಜನೆ ಜಾರಿಬರಲಿದೆ.

ಒಳಾಂಗಣ ಜಾಹೀರಾತು: ಆಹ್ವಾನ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಮೆಟ್ರೋ ನಿಲ್ದಾಣಗಳಲ್ಲಿ ಒಳಾಂಗಣ ಜಾಹೀರಾತು ಅಳವಡಿಕೆ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಶುಲ್ಕವಿಲ್ಲದೇ ಆದಾಯ ಸಂಗ್ರಹಿಸುವ ಸಾಧ್ಯತೆ ಬಗ್ಗೆ ತಿಳಿದುಕೊಳ್ಳಲು ಆಸಕ್ತರನ್ನು ಆಹ್ವಾನಿಸಿದೆ. ಈ ಬಗ್ಗೆ ಒಂದಷ್ಟು ಅಭಿಪ್ರಾಯಗಳು ಮೊದಲ ಸಂಗ್ರಹವಾಗುವ ನಿರೀಕ್ಷೆ ಇದೆ. ಈ ಒಳಾಂಗಣ ಜಾಹೀರಾತು ಅಳವಡಿಕೆಗಾಗಿ ಅಧಿಕಾರಿಗಳು ಪರ್ಪಲ್ ಮತ್ತು ಗ್ರೀನ್ ಕಾರಿಡಾರ್ ನಲ್ಲಿ ನಾಲ್ಕು ಭಾಗಗಳನ್ನು ವಿಂಗಡಿಸಿದ್ದಾರೆ. ಈ ಉಪಕ್ರಮ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂದು ಅನುಷ್ಠಾನದ ಬಳಿಕವೇ ತಿಳಿಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+