Samarjit Lankesh: ಸಾನ್ಯಗೋಸ್ಕರ ಹೂಕಟ್ಟಲು ಹೋಗಿ ರಕ್ತ ಬರಿಸಿಕೊಂಡ ಇಂದ್ರಜಿತ್ ಪುತ್ರ
Samarjit Lankesh: ಇದೇ ತಿಂಗಳು ಅಂದರೆ ಆಗಸ್ಟ್‌ನಲ್ಲಿಯೇ ಕನ್ನಡದಲ್ಲಿ ಹಲವು ಸಿನಿಮಾಗಳು ತೆರೆ ಕಾಣಲಿದ್ದು, ಈ ಪೈಕಿ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಗೌರಿ ಚಿತ್ರವೂ ಕೂಡ ಇದೇ ತಿಂಗಳ 15ಕ್ಕೆ ಬಿಡುಗಡೆ ಆಗಲಿದೆ. ಈ ಚಿತ್ರ ನಾಯಕನಾಗಿ ಸಮರ್ಜಿತ್ ಲಂಕೇಶ್, ಸಾನ್ಯ ಅವರು ನಾಯಕಿಯಾಗಿ ನಟನೆ ಮಾಡಿದ್ದು, ಇವರಿಬ್ಬರು ಹಾಗೆಯೇ ಬೆಂಗಳೂರು ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ.
ಹೀಗೆ ಸಿಟಿ ರೌಂಡ್ಸ್ ಹಾಕುವ ವೇಳೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಅವರು ಹೂವಿನ ಅಂಗಡಿಯೊಂದರ ಮುಂದೆ ಸಾನ್ಯಗೋಸ್ಕರ ಹೂ ಕಟ್ಟಲು ಹೋಗಿದ್ದಾರೆ. ಈ ವೇಳೆ ಸೂಚಿ ಸುಚ್ಚಿ ಸಮರ್ಜಿತ್ ಕೈಯಲ್ಲಿ ರಕ್ತ ಬರಲು ಶುವಾಗಿದ್ದು, ಇದನ್ನು ಕಂಡ ಸಾನ್ಯ ಹಾಗೂ ಜೊತೆಯಲ್ಲಿದ್ದ ಸುಶ್ಮಿತಾ ಶಾಕ್ ಆಗಿದ್ದಾರೆ. ಇನ್ನು ಈ ವಿಡಿಯೋ ಡಿ.ಪಿಕ್ಚರ್ ಎನ್ನುವ ಪೇಸ್‌ಬುಕ್ ಪೇಜ್‌ನಲ್ಲಿ ಶೇರ್ ಆಗಿದೆ.

ಕಿಚ್ಚ ಸುದೀಪ್ ಹೇಳಿದ್ದೇನು?: ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ನಟ ಸುದೀಪ್ ಭಾಗವಹಿಸಿ ಮಾತನಾಡಿದ ಅವರು, ಇಂದ್ರಜಿತ್ ಹಾಗೂ ನಾನು ತುಂಬಾ ಹಳೆಯ ಸ್ನೇಹಿತರು. ಇಬ್ಬರೂ ಜೊತೆಗೆ ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಇವರು ಲಂಕೇಶ್ ಅವರ ಮಗ ಅಂತಾ ಗೊತ್ತಿರಲಿಲ್ಲ. ಆದರೆ, ತುಂಬಾ ಚೆನ್ನಾಗಿ ಶಟಲ್ ಆಡುತ್ತಾರೆ. ಟ್ರೇಲರ್ ನೋಡಿ ನಮ್ಮ ವಿಮರ್ಶೆ, ಅಭಿಪ್ರಾಯ ಏನೇ ಇರಲಿ. ಇವತ್ತು ಅವರಿಬ್ಬರಿಗೆ ಆಗುವಷ್ಟು ಸಂತೋಷ, ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಆಗುವುದಕ್ಕೆ ಸಾಧ್ಯವಿಲ್ಲ ಎಂದರು.
ಸಮರ್ಜಿತ್‍ನ ಯಶಸ್ಸು ಅವನೊಬ್ಬನ ಯಶಸ್ಸು ಆಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್ ಅವರ ಯಶಸ್ಸು ಕೂಡ ಇದೆ ಎಂದು ಸುದೀಪ್ ಹೇಳಿದರು. ಇನ್ನು ಸಾನ್ಯ ಅವರು ಉತ್ತಮ ನಟಿ ಅಷ್ಟೇ ಅಲ್ಲ, ಉತ್ತಮ ಬರಹಗಾರ್ತಿಯೂ ಆಗಿದ್ದಾರೆ. ಈ ವಿಚಾರ ನನಗೆ ಬಿಗ್ ಬಾಸ್ ವೇಳೆ ಗಮನಕ್ಕೆ ಬಂದಿತ್ತು ಎಂದರು.
ಇನ್ನು ಈ ಸಮಯಕ್ಕಾಗಿ ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ತುಂಬಾ ಕಾತರದಿಂದ ತುದಿಗಾಲಲ್ಲಿ ಕಾದಿರುತ್ತಾರೆ. ಬಿಡುಗಡೆಗಿಂತ ಇಂಥಹ ಕಾರ್ಯಕ್ರಮಗಳನ್ನು ನೀವು ಅನುಭವಿಸಿ. ಸಿನಿಮಾ ಬಿಡುಗಡೆಯಾದ ಬಳಿಕ ಜೀವನ ಇದೇ ರೀತಿ ಇರೋದಿಲ್ಲ. ಅದು ನಿಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೋ ಗೊತ್ತಿಲ್ಲ, ಅದಕ್ಕೆ ಸಿದ್ದರಾಗಿರಿ ಎಂದು ಹೇಳಿದರು.












Click it and Unblock the Notifications