BJP Resigners List: ಕೇಸರಿ ಪಡೆ ತೊರೆದ ಆ 6 ಮಂದಿ ಹಿರಿಯ ನಾಯಕರು ಇವರು?

ಬೆಂಗಳೂರು, ಏಪ್ರಿಲ್ 19: ಕರ್ನಾಟಕ ಆಡಳಿತಾರೂಡ ಬಿಜೆಪಿ ಪಕ್ಷವು ಸಾರ್ವತ್ರಿಕ ಚುನಾವಣೆ ಸಂಬಂಧ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಮೊದಲು ಮತ್ತು ಎರಡನೇ ಪಟ್ಟಿ ಬಿಡುಗಡೆ ಮಾಡಿದ ನಂತರ ಬಂಡಾಯ ಶುರುವಾಯಿತು.ಅದು ರಾಜೀನಾಮೆ ವರೆಗೂ ಬಂದು ತಲುಪಿತು. ಹಾಗಾದರೆ ಇದುವರೆಗೆ ಬಿಜೆಪಿ ತೊರೆದ ಹಿರಿಯ ನಾಯಕರು ಎಂಬ ಮಾಹಿತಿ ಇಲ್ಲಿದೆ.

ಒಟ್ಟು ಆರು ಮಂದಿ ಹಿರಿಯ ನಾಯಕರು ಭಾರತೀಯ ಜನತಾ ಪಕ್ಷ (ಬಿಜೆಪಿ) ಬಿಟ್ಟುದ್ದಾರೆ. ತಮ್ಮ ಸ್ಥಾನಕ್ಕೆ ಒಬ್ಬರ ಹಿಂದೊಬ್ಬರಂತೆ ರಾಜೀನಾಮೆ ನೀಡಿದ್ದಾರೆ.

BJP Resigners List: 6 Senior Leaders Left BJP Party After Denied Ticket Of Assembly Election 2023

ಬಿಜೆಪಿ 189 ಮತ್ತು 23 ಅಭ್ಯರ್ಥಿಗಳನ್ನು ಒಳಗೊಂಡಿರುವ ತನ್ನ ಮೊದಲ ಮತ್ತು ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಹೊಸ ಮುಖಗಳಿಗೆ ಮಣೆ ಹಾಕಿದ್ದಕ್ಕೆ ಟಿಕೆಟ್ ಸಿಗದವರು ರಾಜೀನಾಮೆ ಸಲ್ಲಿಸಿದರು.

ಕೇಸರಿ ಪಡೆ ತೊರೆದ ನಾಯಕರ ಮಾಹಿತಿ

1. ಶಾಸಕ ಎಸ್ ಅಂಗಾರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆರು ಬಾರಿ ಶಾಸಕರಾಗಿ ಚುನಾಯಿತರಾದವರು. ಅವರಿಗೆ ಮುಂದಿನ ತಿಂಗಳ ಮೇ 10ರಂದು ನಡೆಯಲಿರುವ ಚುನಾವಣೆಗೆ ಪಕ್ಷದಿಂದ ಟಿಕೆಟ್ ನಿರಾಕರಿಸಿದ ಮರುದಿನವೇ ಅವರು ರಾಜಕೀಯ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಿದರು.

2. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರೂ ತಮಗೆ ಟಿಕೆಟ್ ವಿಚಾರದಲ್ಲಿ ವಂಚನೆ ಆಯಿತೆಂದು ಬಂಡಾಯವೆದ್ದರು. ಕಳೆದ ಬುಧವಾರ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಪಕ್ಷಕ್ಕೂ ರಾಜೀನಾಮೆ ನೀಡಿದರು. ಸದ್ಯ ಅವರು ಕಾಂಗ್ರೆಸ್‌ ಸೇರಿದ್ದಾರೆ.

3. ವಿಧಾನಪರಿಷತ್ ಸದಸ್ಯ ಎಂಎಲ್‌ಸಿ ಆರ್‌ ಶಂಕರ್‌ ಅವರು ಆಡಳಿತ ಪಕ್ಷವು ಟಿಕೆಟ್‌ಗಾಗಿ ಮನವಿ ಮಾಡಿದ್ದರು.ಆದರೆ ಅಂದುಕೊಂಡತೆ ಆಗಲಿಲ್ಲ. ಹೀಗಾಗಿ ಮರುದಿನವೇ ಅವರು ತಮ್ಮ ವಿಧಾನ ಪರಿಷತ್‌ಗೆ ರಾಜೀನಾಮೆ ನೀಡಿದರು. 2019 ರಲ್ಲಿ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಗೆ ಸಹಾಯ ಮಾಡಿದ 17 ವಿರೋಧ ಪಕ್ಷದ ಶಾಸಕರಲ್ಲಿ ಆರ್ ಶಂಕರ್ ಸಹ ಒಬ್ಬರು. ಶಂಕರ್ ಅವರು ರಾಣೆಬೆನ್ನೂರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲಿ ಬಿಜೆಪಿಯು ಅರುಣ್ ಕುಮಾರ್ ಪೂಜಾರ್ ಅವರರನ್ನು ಕಣಕ್ಕಿಳಿಸಿದೆ.

4. ಮಾಜಿ ಮುಖ್ಯಮಂತ್ರಿ ಮತ್ತು ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಳೆದ ಸೋಮವಾರವಷ್ಟೇ ಕಾಂಗ್ರೆಸ್ ಪಕ್ಷ ಸೇರಿದರು. ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಾಭ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾದ ಕಾರಣ ಅವರು ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ.

5. ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಅವರು ಬಿಜೆಪಿಯ ಹಿರಿಯ ಮುಖಂಡರು. ಚಿತ್ತಾಪುರ ಕ್ಷೇತ್ರದ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ಟಿಕೆಟ್ ಸಿಗದಿದ್ದಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ ಹೊರ ನಡೆದರು.

6. ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬುಧವಾರ ಘೋಷಿಸಿದ್ದರು. ನಾಮನಿರ್ದೇಶನಗೊಳ್ಳದಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದರು. ಪಕ್ಷದ ಮೇಲೆ ಅಸಮಾಧಾನ ಹೊರ ಹಾಕಿದ್ದರು.

ಮೊದಲ ಎರಡು ಪಟ್ಟಿ ಬಳಿಕ ಬಿಜೆಪಿ ಮೂರನೇ ಪಟ್ಟಿಯಲ್ಲಿ 10 ಮಂದಿ ಹೆಸರುನ್ನು ಘೋಷಿಸುವ ಮೂಲಕ ಎರಡು ಕ್ಷೇತ್ರಗಳ ಹೆಸರು ಬಾಕಿ ಉಳಿಸಿಕೊಂಡಿದೆ. ತನ್ನ ಮೊದಲ ಪಟ್ಟಿಯಲ್ಲಿ 52 ಹೊಸ ಹೆಸರು ಸೇರಿ ಪಟ್ಟು 72ಕ್ಕೂ ಅಧಿಕ ಹೊಸಬರಿಗೆ ಬಿಜೆಪಿ ಟಿಕೆಟ್ ನೀಡಿದೆ. ಹೀಗಾಗಿ ಕೆಲವರಿಗೆ ಟಿಕೆಟ್ ಕೈ ತಪ್ಪಿದೆ.

ರಾಜ್ಯದ ಒಟ್ಟು ಶಾಸಕಾಂಗ ಸದಸ್ಯರ ಸಂಖ್ಯಾಬಲ 224 ಇದ್ದು, ಸರ್ಕಾರ ರಚನೆಗೆ 113 ಮ್ಯಾಜಿಕ್ ನಂಬರ್ ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+