CM Bommai BJP Manifesto: ಜನರ ಭಾವನೆ ಗ್ರಹಿಸಿ ಶಕ್ತಿ ಶಾಲಿ ರಾಜ್ಯವಾಗಿಸುವ ಗುರಿ ಹೊಂದಿದ್ದೇವೆ: ಸಿಎಂ ಬೊಮ್ಮಾಯಿ

ಬೆಂಗಳೂರು, ಮೇ 01: ಜನರ ಭಾವನೆ ಹಾಗೂ ಧ್ವನಿಯನ್ನು ಗ್ರಹಿಸಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಈ ಮೂಲಕ ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು.

ಸೋಮವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಪ್ರಣಾಳಿಕೆ 2023 ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ವೇಳೆ ಸಿಎಂ ಬೊಮ್ಮಾಯಿ ಸಹ ಸ್ಥಳದಲ್ಲಿದ್ದರು.

BJP Party Has Released Manifesto

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೊವಿಡ್ ಬಗ್ಗೆ ನಾವು ಯಾರೂ ಯೋಚಿಸಿರಲಿಲ್ಲ. ಅದರ ಅನುಭವದ ಆಧಾರದ ಮೇಲೆ ಈ ಪ್ರಣಾಳಿಕೆ ಮಾಡಿದ್ದೇವೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರಿಗೇ ಈಗಾಗಲೇ ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ.

ರಾಜ್ಯದಲ್ಲಿ ಒಂದು ಸಾವಿರ ಕೃಷಿ ಉತ್ಪಾದನಾ ಕೇಂದ್ರಗಳನ್ನು ತೆರೆಯುವುದು‌, ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಸಂಕಲ್ಪ, ಸಿರಿ ಧಾನ್ಯಕ್ಕೆ ಅತೀ ಹೆಚ್ಚು ಒತ್ತು‌ಕೊಡುವ ಕೆಲಸ ಮಾಡಲಾಗಿದೆ. ನಗರ ಪ್ರದೇಶದಲ್ಲಿ 5 ಲಕ್ಷ ಮನೆ, ಗ್ರಾಮೀಣ ಪ್ರದೇಶಗಳಲ್ಲಿ 10 ಲಕ್ಷ ಮನೆ ‌ನಿರ್ಮಾಣ ಪ್ರತಿ ಮನೆ ನಿರ್ಮಾಣ 5 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.

BJP Party Has Released Manifesto

ಪಡಿತರದಲ್ಲಿ ಅಕ್ಕಿಯ ಜೊತೆಗೆ ಐದು ಕೆಜಿ ಸಿರಿಧಾನ್ಯ ನೀಡಲಾಗುವುದು. ಅರ್ಧ ಲೀಟರ್ ಹಾಲು ವಿತರಿಸಲಾಗುವುದು. ಬಿಪಿಎಲ್ ಪಡಿತರ ಹೊಂದಿರುವವರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿ 10 ಲಕ್ಷ ರೂಪಾಯಿ ವಿಮೆ ನೀಡಲಾಗುವುದು. ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಬಿಜೆಪಿ ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸಲಿದೆ: ಸಿಎಂ

ಇಂದು ಬಿಡುಗಡೆಗೊಂಡ ಪ್ರಣಾಳಿಕೆ ಜನರಿಂದ ಜನರಿಗೋಸ್ಕರ ಇರುವ ಪ್ರಜಾ ಪ್ರಣಾಳಿಕೆ ಇದಾಗಿದೆ. ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸುವ (ವೈಬ್ರಂಟ್ ಸ್ಟೇಟ್) ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯ ಗುರಿ ಮುಟ್ಟಲು ಐಟಿ ಬಿಟಿ, ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು.

ಇದು ಜನರ ಜನಪರ ಪ್ರಣಾಳಿಕೆ ಇದಕ್ಕೆ ಕರ್ನಾಟಕದ ಜನರು ಗಮನಿಸಿ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+