ಲೋಕಸಭೆಯಲ್ಲಿ ಸಂತೋಷ್ ಹತ್ಯೆ ಚರ್ಚೆ: ಅನಂತ್‌ಕುಮಾರ್
ಬೆಂಗಳೂರು, ಫೆಬ್ರವರಿ 03: ಇತ್ತೀಚೆಗೆ ನಗರದ ಜೆಪಿ ನಗರದಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಯ ಬಗ್ಗೆ ಲೋಕಸಭೆಯ ಬಜೆಟ್ ಅಧಿವೇಶನದ ಸಮಯ ಉಭಯ ಸದನಗಳಲ್ಲಿ ಚರ್ಚೆ ಮಾಡುವುದಾಗಿ ಕೇಂದ್ರ ಸಚಿವ ಅನಂತ್‌ಕುಮಾರ್ ಹೇಳಿದ್ದಾರೆ.
ಮೃತ ಸಂತೋಶ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಸಂತೋಷ್ ಬಿಜಪಿಯ ಮಾದಕ ವಸ್ತು ನಿರ್ಮೂಲನಾ ಘಟಕದ ಸಕ್ರಿಯ ಸದಸ್ಯನಾಗಿದ್ದ ಅಷ್ಟೆ ಅಲ್ಲದೆ ಆತ ಬಿಜೆಪಿಯ ಹಲವು ಬೂತ್ ಮಟ್ಟದ ಹೋರಾಟಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ' ಎಂದು ಹೇಳಿದ್ದಾರೆ.
ಬುಧವಾರ (ಫೆ.31) ರ ರಾತ್ರಿ ಜೆಪಿ ನಗರದಲ್ಲಿ ಸಂತೋಷ್‌ನನ್ನು ವಾಸಿಂ ಮತ್ತು ಫಿಲಿಪ್ಸ್ ಎಂಬುವರು ಮಾರಕಾಸ್ತ್ರದಿಂದ ತಿವಿದು ಹತ್ಯೆ ಮಾಡಿದ್ದರು. ಸಂತೋಶ್ ಬಿಜೆಪಿ ಕಾರ್ಯಕರ್ತನಾಗಿದ್ದು ಬೇಕರಿ ಬಳಿ ಗಾಂಜಾ ಸೇದುತ್ತಿದ್ದ ವಾಸಿಂ ಮತ್ತು ಗೆಳೆಯರನ್ನು ಸಂತೋಷ್ ಪ್ರಶ್ನೆ ಮಾಡಿದ್ದಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂತೋಷ್ ಕೊಲೆಯನ್ನು ರಾಜ್ಯ ಬಿಜೆಪಿ ಮುಖಂಡರು ತೀವ್ರವಾಗಿ ವಿರೋಧಿಸಿದ್ದು, ನಿನ್ನೆಯಷ್ಟೆ ಬಿಎಸ್ ಯಡಿಯೂರಪ್ಪ ಅವರು ಸಂತೋಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಬಜೆಟ್ ಅಧಿವೇಶನದ ಸಮಯ ಉಭಯ ಸದನದಲ್ಲಿ ಸಂತೋಶ್ ಕುರಿತು ಚರ್ಚೆ ಮಾಡುವುದಾಗಿ ಅನಂತ್‌ಕುಮಾರ್ ಅವರು ಹೇಳಿದ್ದು, ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸುವ ಪಣವನ್ನು ಬಿಜೆಪಿ ತೊಟ್ಟಿದೆ.












Click it and Unblock the Notifications