ವಂಚನೆ ಆರೋಪ, ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು
ಬೆಂಗಳೂರು, ಆಗಸ್ಟ್ 29 : ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಎಸಿಬಿಗೆ ಎಸಿಬಿಗೆ ದೂರು ನೀಡಿದ್ದಾರೆ.
ಬಿಬಿಎಂಪಿ ಕಸ ಗುಡಿಸುವ ವಾಹನ ಮತ್ತು ಕಾಂಪ್ಯಾಕ್ಟರ್ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ. ಹಾಗೂ ಟಿಪಿಎಸ್ ಕಂಪನಿಯಿಂದ ಕಮಿಷನ್ ರೂಪದಲ್ಲಿ ಹಣವನ್ನು ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಾರ್ಜ್ ಪಡೆದಿದ್ದಾರೆ ಎಂದು ರಮೇಶ್ ಆರೋಪ ಮಾಡಿದ್ದಾರೆ.

ಈಗಾಗಲೇ ಟಿಪಿಎಸ್ ಕಂಪನಿಯಿಂದ ಖರೀದಿಸಿರುವ 25 ಕಾಂಪ್ಯಾಕ್ಟರ್, ಹಾಗೂ 9 ಕಸ ಗುಡಿಸುವ ವಾಹನಗಳು 2 ತಿಂಗಳಲ್ಲಿಯೇ ಕೆಟ್ಟು ಹೋಗಿವೆ. ಸರ್ಕಾರ ಕಳಪೆ ಗುಣಮಟ್ಟದ ವಾಹನಗಳನ್ನು ಖರೀದಿಸುವ ಮೂಲಕ ಅಕ್ರಮ ಎಸಗಿದ್ದಾರೆ.
#BJP leader #NRRamesh lodges complaint with #ACB against #Siddaramaiah and #KJGeorge, alleges scam in the purchase of compactors for #BBMP pic.twitter.com/3G2QARGWsf
— NEWS9 (@NEWS9TWEETS) August 29, 2017
ಇಂಥ ಕಳಪೆ ಗುಣಮಟ್ಟದ ವಾಹನಗಳನ್ನು ಪೂರೈಸಿರುವ ಟಿಪಿಎಸ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ರಮೇಶ್ ಆಗ್ರಹಿಸಿದ್ದಾರೆ.












Click it and Unblock the Notifications